ಡಾಕು ಮಹಾರಾಜ್ ಟ್ರೇಲರ್​; ಇನ್ನಷ್ಟು ಜಾಸ್ತಿ ಆಯ್ತು ಬಾಲಯ್ಯ ಮಾಸ್ ಅವತಾರ

|

Updated on: Jan 05, 2025 | 3:18 PM

ಜ.12ರಂದು ಬಿಡುಗಡೆ ಆಗಲಿರುವ ‘ಡಾಕು ಮಹಾರಾಜ್​’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ, ಶ್ರದ್ಧಾ ಶ್ರೀನಾಥ್, ಪ್ರಗ್ಯಾ ಜೈಸ್ವಾಲ್ ಮುಂತಾದವರು ನಟಿಸಿದ್ದಾರೆ. ಟ್ರೇಲರ್​ ಬಿಡುಗಡೆ ಆಗಿದ್ದು, ಅಭಿಮಾನಿಗಳು ಈ ಚಿತ್ರದ ಮೇಲೆ ಇಟ್ಟಿರುವ ನಿರೀಕ್ಷೆ ಡಬಲ್ ಆಗಿದೆ. ತುಂಬ ಮಾಸ್ ಆಗಿ ಈ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಈ ಟ್ರೇಲರ್​ ಸಾಕ್ಷಿ.

ಡಾಕು ಮಹಾರಾಜ್ ಟ್ರೇಲರ್​; ಇನ್ನಷ್ಟು ಜಾಸ್ತಿ ಆಯ್ತು ಬಾಲಯ್ಯ ಮಾಸ್ ಅವತಾರ
Nandamuri Balakrishna
Follow us on

ಮಾಸ್​ ಸಿನಿಮಾಗಳನ್ನು ಮಾಡಿ ಫೇಮಸ್​ ಆಗಿರುವ ನಂದಮೂರಿ ಬಾಲಕೃಷ್ಣ ಅವರು ವರ್ಷ ಸಂಕ್ರಾಂತಿ ಸಮಯಕ್ಕೆ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಾರೆ. ಈ ವರ್ಷ ಅವರು ನಟಿಸಿರುವ ‘ಡಾಕು ಮಹಾರಾಜ್​’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಬಾಲಯ್ಯ ಅವರ ಅವತಾರ ಸಖತ್ ಮಾಸ್ ಆಗಿದೆ. ಇಂದು (ಜನವರಿ 5) ‘ಡಾಕು ಮಹಾರಾಜ್’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಇರುವ ನಿರೀಕ್ಷೆಯನ್ನು ಡಬಲ್ ಆಗಿಸುವ ರೀತಿಯಲ್ಲಿ ಈ ಟ್ರೇಲರ್​ ಮೂಡಿಬಂದಿದೆ. ಜನವರಿ 12ರಂದು ‘ಡಾಕು ಮಹಾರಾಜ್’ ಸಿನಿಮಾ ರಿಲೀಸ್ ಆಗಲಿದೆ.

ಬಾಬಿ ಕೊಲ್ಲಿ ಅವರು ‘ಡಾಕು ಮಹಾರಾಜ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಬಾಲಯ್ಯ ಎದುರು ವಿಲನ್ ಆಗಿ ಬಾಲಿವುಡ್​ ನಟ ಬಾಬಿ ಡಿಯೋಲ್ ಅವರು ನಟಿಸಿದ್ದಾರೆ. ಇದು ಅವರ ಮೊದಲ ತೆಲುಗು ಸಿನಿಮಾ. ಈಗಾಗಲೇ ತಮಿಳಿನಲ್ಲಿ ಸೂರ್ಯ ಎದುರು ವಿಲನ್ ಆಗಿ ಆರ್ಭಟಿಸಿದ ಬಾಬಿ ಡಿಯೋಲ್ ಅವರು ಈಗ ಟಾಲಿವುಡ್​ನಲ್ಲಿ ಖಾತೆ ತೆರೆಯುತ್ತಿದ್ದಾರೆ. ಟ್ರೇಲರ್​ನಲ್ಲಿ ಅವರ ಪಾತ್ರ ಹೈಲೈಟ್ ಆಗಿದೆ.

‘ಡಾಕು ಮಹಾರಾಜ್’ ಟ್ರೇಲರ್​:

ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ‘ಡಾಕು ಮಹಾರಾಜ್’ ಸಿನಿಮಾದ ಟ್ರೇಲರ್​ ಮೂಡಿಬಂದಿದೆ. ಈ ಸಿನಿಮಾಗೆ ನಾಗ ವಂಶಿ ಅವರು ಬಂಡವಾಳ ಹೂಡಿದ್ದಾರೆ. ಸಖತ್ ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದೆ ಎಂಬುದಕ್ಕೆ ಟ್ರೇಲರ್​ ಸಾಕ್ಷಿಯಾಗಿದೆ. ಬಾಲಯ್ಯ ಫ್ಯಾನ್ಸ್ ಬಯಸುವ ಭರ್ಜರಿ ಆ್ಯಕ್ಷನ್​ ಸನ್ನಿವೇಶಗಳು ಕೂಡ ಈ ಸಿನಿಮಾದಲ್ಲಿ ಇವೆ. ಸಂಕ್ರಾಂತಿ ಪ್ರಯುಕ್ತ ರಿಲೀಸ್​ ಆಗಲಿರುವ ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಜೂ ಎನ್​ಟಿಆರ್ ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟ ನಂದಮೂರಿ ಕುಟುಂಬದ ನಟ

‘ಡಾಕು ಮಹಾರಾಜ್’ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ ಅವರು ಎರಡು ಗೆಟಪ್​ನ ಪಾತ್ರ ಮಾಡಿದ್ದಾರೆ. ಅದರ ಹಿಂದಿರುವ ಕಥೆ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಥಮನ್ ಅವರ ಸಂಗೀತಕ್ಕೂ ಟ್ರೇಲರ್​ನಲ್ಲಿ ಮೆಚ್ಚುಗೆ ಸಿಗುತ್ತಿದೆ. ಈ ಸಿನಿಮಾದಲ್ಲಿ ಬಾಲಯ್ಯ ಜೊತೆ ಪ್ರಗ್ಯಾ ಜೈಸ್ವಾಲ್, ಚಾಂದಿನಿ ಚೌದರಿ, ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ಕೂಡ ನಟಿಸಿದ್ದಾರೆ. ‘ಡಾಕು ಮಹಾರಾಜ್’ ಟ್ರೇಲರ್​ಗೆ ಜನರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಗುತ್ತಿದೆ. ಕೆಲವೇ ಗಂಟೆಗಳಲ್ಲಿ ಮಿಲಿಯನ್​ಗಟ್ಟಲೆ ವೀಕ್ಷಣೆ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.