ರಾಜಮೌಳಿ ಸಿನಿಮಾದಲ್ಲಿ ಡೇವಿಡ್ ವಾರ್ನರ್; ನಟನೆ ನೋಡಿ ಫ್ರಸ್ಟ್ರೇಟ್ ಆದ ನಿರ್ದೇಶಕ

| Updated By: ರಾಜೇಶ್ ದುಗ್ಗುಮನೆ

Updated on: Apr 13, 2024 | 11:18 AM

ವಾರ್ನರ್​ಗೆ ನಿರ್ದೇಶನ ಮಾಡಿ ರಾಜಮೌಳಿ ಸುಸ್ತ್ ಆಗುತ್ತಾರೆ. ಕುದುರೆ ಬದಲು ಕಾಂಗರೂ ಕೇಳುತ್ತಾರೆ ವಾರ್ನರ್. ಕೊನೆಗೆ ಕ್ರೆಡ್​ ಯುಪಿಐಗೆ ತಾವು ಅಪ್​ಗ್ರೇಡ್​ಗೆ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ ಅವರು. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಜಾಹೀರಾತು ಸಖತ್ ಇಷ್ಟ ಆಗಿದೆ.

ರಾಜಮೌಳಿ ಸಿನಿಮಾದಲ್ಲಿ ಡೇವಿಡ್ ವಾರ್ನರ್; ನಟನೆ ನೋಡಿ ಫ್ರಸ್ಟ್ರೇಟ್ ಆದ ನಿರ್ದೇಶಕ
ರಾಜಮೌಳಿ-ವಾರ್ನರ್
Follow us on

ಡೇವಿಡ್ ವಾರ್ನರ್ (David Warner) ಅವರಿಗೆ ಭಾರತದ ಜೊತೆ ಒಳ್ಳೆಯ ನಂಟಿದೆ. ಅವರು ಪ್ರತಿ ಬಾರಿ ಐಪಿಎಲ್​ಗೆ ಬಂದಾಗ ಮೈದಾನದಲ್ಲಿ ತೆಲುಗು ಹಾಡುಗಳಿಗೆ ಡ್ಯಾನ್ಸ್ ಮಾಡುತ್ತಾರೆ. ಇಷ್ಟಕ್ಕ ನಿಂತಿಲ್ಲ, ಅವರು ತೆಲುಗು ಹಾಡುಗಳಿಗೆ ರೀಲ್ಸ್ ಮಾಡುತ್ತಾರೆ. ಅವರು ಮಾಡೋ ಪುಷ್ಪರಾಜ್ ಸ್ಟೈಲ್ ಸಖತ್ ಫೇಮಸ್. ಈಗ ರಾಜಮೌಳಿ ಸಿನಿಮಾದಲ್ಲಿ ಡೇವಿಡ್ ವಾರ್ನರ್ ನಟಿಸುತ್ತಿದ್ದಾರೆ. ಅವರ ನಟನೆ ನೋಡಿ ರಾಜಮೌಳಿ ಫ್ರಸ್ಟ್ರೇಟ್ ಆಗಿದ್ದಾರೆ. ಅಸಲಿಗೆ ಏನಿದು ವಿಚಾರ? ಆ ಬಗ್ಗೆ ಇಲ್ಲಿದೆ ವಿವರ.

ಐಪಿಎಲ್ ಸಂದರ್ಭದಲ್ಲಿ ಕ್ರೆಡ್ ಸಂಸ್ಥೆಯವರು ವಿವಿಧ ರೀತಿಯ ಜಾಹೀರಾತು ಮಾಡುತ್ತಾರೆ. ಈ ಬಾರಿ ಕ್ರೆಡ್ ಯುಪಿಐನ ಜಾಹೀರಾತು ಮಾಡಲಾಗುತ್ತಿದೆ. ಕ್ರೆಡ್ ಯುಪಿಐ ಮಾಡಿದರೆ ಸಾಕಷ್ಟು ಆಫರ್ ಸಿಗುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದೇ ಆ್ಯಂಗಲ್​ನಿಂದ ಜಾಹೀರಾತುಗಳನ್ನು ಮಾಡಲಾಗುತ್ತಿದೆ. ಈಗ ರಾಜಮೌಳಿ ಹಾಗೂ ವಾರ್ನರ್ ಕಾಣಿಸಿಕೊಂಡಿದ್ದು ಇದೇ ಜಾಹೀರಾತಿನಲ್ಲಿ.

ರಾಜಮೌಳಿ ಅವರು ಡೇವಿಡ್ ವಾರ್ನರ್​ಗೆ ಕರೆ ಮಾಡುತ್ತಾರೆ. ‘ನಿಮ್ಮ ಮ್ಯಾಚ್​ ಟಿಕೆಟ್ ಮೇಲೆ ಡಿಸ್ಕೌಂಟ್ ಸಿಗುತ್ತದೆಯೇ’ ಎಂದು ಕೇಳುತ್ತಾರೆ ರಾಜಮೌಳಿ. ‘ಕ್ರೆಡ್ ಯುಪಿಐ ಇದ್ದರೆ ಡಿಸ್ಕೌಂಟ್ ಸಿಗುತ್ತದೆ. ಸಾಮಾನ್ಯ ಯಪಿಐನಲ್ಲಿ ಆಫರ್ ಬೇಕು ಎಂದರೆ ನೀವು ನನಗೆ ಒಂದು ಫೇವರ್ ಮಾಡಬೇಕು’ ಎನ್ನುತ್ತಾರೆ ವಾರ್ನರ್. ಆ ಫೇವರ್​ ಎಂದರೆ ವಾರ್ನರ್​ನ ಹೀರೋ ಆಗಿ ಇಟ್ಟುಕೊಂಡು ಸಿನಿಮಾ ಮಾಡೋದು.

ವಾರ್ನರ್​ಗೆ ನಿರ್ದೇಶನ ಮಾಡಿ ರಾಜಮೌಳಿ ಸುಸ್ತ್ ಆಗುತ್ತಾರೆ. ಕುದುರೆ ಬದಲು ಕಾಂಗರೂ ಕೇಳುತ್ತಾರೆ ವಾರ್ನರ್. ಕೊನೆಗೆ ಕ್ರೆಡ್​ ಯುಪಿಐಗೆ ತಾವು ಅಪ್​ಗ್ರೇಡ್​ಗೆ ಮಾಡಿಕೊಳ್ಳುತ್ತೇನೆ ಎನ್ನುತ್ತಾರೆ ಅವರು. ಈ ವಿಡಿಯೋ ಸಖತ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ಬೇರೆ ಬೇರೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಈ ಜಾಹೀರಾತು ಸಖತ್ ಇಷ್ಟ ಆಗಿದೆ.

ರಾಜಮೌಳಿ ಅವರು ಇತ್ತೀಚೆಗೆ ಜಾಹೀರಾತಿನಲ್ಲಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಒನ್​ಪ್ಲಸ್ ಮೊಬೈಲ್ ಅಡ್ವಟೈಸ್​ಮೆಂಟ್​ನಲ್ಲಿ ಅವರು ನಟಿಸಿದ್ದರು. ಈಗ ಕ್ರೆಡ್ ಜಾಹೀರಾತಿನ ಮೂಲಕ ಅವರು ಗಮನ ಸೆಳೆದಿದ್ದಾರೆ. ಅವರ ನಟನೆಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ರಾಜಮೌಳಿ ಸೂಪರ್​ ಡ್ಯಾನ್ಸರ್​ ಎಂಬುದು ನಿಮಗೆ ಗೊತ್ತಾ? ಪತ್ನಿ ಜೊತೆಗಿನ ಡ್ಯಾನ್ಸ್ ವಿಡಿಯೋ ವೈರಲ್​

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾ ರಿಲೀಸ್ ಆಗಿ ಎರಡು ವರ್ಷ ಕಳೆದಿದೆ. ಸದ್ಯ ಅವರು ಹೊಸ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕೆ ಮಹೇಶ್ ಬಾಬು ಹೀರೋ. ಈ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಈ ವರ್ಷವೇ ಸಿನಿಮಾ ಸೆಟ್ಟೇರಲಿದ್ದು, ಮುಂದಿನ ವರ್ಷ ಸಿನಿಮಾ ರಿಲೀಸ್ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ