Updated on: Apr 13, 2024 | 12:30 PM
ನಟಿ ರಕುಲ್ ಪ್ರೀತ್ ಸಿಂಗ್ ಇತ್ತೀಚೆಗೆ ಸಖತ್ ಸುದ್ದಿಯಲ್ಲಿದ್ದಾರೆ. ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಜೊತೆ ಅವರು ಮದುವೆ ಆದರು. ಈಗ ಅವರು ಮತ್ತೊಂದು ಕಾರಣಕ್ಕೆ ಸುದ್ದಿ ಆಗಿದ್ದರು. ಅವರು ಹೈದರಾಬಾದ್ನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದ್ದಾರೆ.
ರಕುಲ್ ಪ್ರೀತ್ ಸಿಂಗ್ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರು ಈಗಾಗಲೇ ಹೈದರಾಬಾದ್ ಹಾಗೂ ವಿಶಾಖಪಟ್ಟಣದಲ್ಲಿ ಜಿಮ್ ಫ್ರಾಂಚೈಸಿ ಹೊಂದಿದ್ದಾರೆ. ಈಗ ಅವರು ಹೋಟೆಲ್ ಉದ್ಯಮಕ್ಕೂ ಕಾಲಿಟ್ಟಿದ್ದಾರೆ.
ಏಪ್ರಿಲ್ 16ರಂದು ಅವರ ಮೊದಲ ರೆಸ್ಟೋರೆಂಟ್ ಹೈದರಾಬಾದ್ನಲ್ಲಿ ಆರಂಭಾಗಲಿದೆ. ಇದಕ್ಕೆ ಅವರು ‘ಆರಂಭಮ್’ ಎಂದು ಇಟ್ಟಿದ್ದಾರೆ. ಸಖತ್ ಅದ್ದೂರಿಯಾಗಿ ಈ ಹೋಟೆಲ್ ನಿರ್ಮಾಣ ಆಗಿದೆ ಎಂದು ವರದಿ ಆಗಿದೆ.
ರಕುಲ್ ಪ್ರೀತ್ ಸಿಂಗ್ ಹೋಟೆಲ್ ಎಂದರೆ ಒಂದಷ್ಟು ಮಂದಿ ಅಲ್ಲಿಗೆ ತೆರಳುತ್ತಾರೆ. ಊಟ ಮಾಡುತ್ತಾರೆ. ಹೀಗಾಗಿ, ಆಹಾರದ ಬೆಲೆ ಕೂಡ ಸಖತ್ ದುಬಾರಿ ಆಗಿ ಇರಲಿದೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ರಕುಲ್ ಮದುವೆ ಆದ ಬಳಿಕ ಉದ್ಯಮದತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ನಟನೆಯನ್ನೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.