ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ. ಬಾಲಿವುಡ್ ನಟ ಆಮಿರ್ ಖಾನ್ ಅವರ ಸಂಬಂಧಿ ಇಮ್ರಾನ್ ಖಾನ್ ವಿಚಾರದಲ್ಲಿ ಹಾಗೆಯೇ ಆಯಿತು. ಒಂದೆರಡು ಸಿನಿಮಾಗಳಲ್ಲಿ ಯಶಸ್ಸು ಪಡೆದ ಅವರು ನಂತರ ನಟನೆಗೆ ವಿದಾಯ ಹೇಳಬೇಕಾಯಿತು. ಆ ಬಗ್ಗೆ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್ ಡಿಯೋ ಮಾತನಾಡಿದ್ದಾರೆ.
2011ರ ಜು.1ರಂದು ತೆರೆಗೆ ಬಂದ ‘ಡೆಲ್ಲಿ ಬೆಲ್ಲಿ’ ಸಿನಿಮಾ ಸಖತ್ ಸೌಂಡು ಮಾಡಿತ್ತು. ತುಂಬ ಬೋಲ್ಡ್ ಆದಂತಹ ಹಾಡುಗಳು, ಡಿಫರೆಂಟ್ ಆದಂತಹ ಕಥೆ ಮುಂತಾದ ವಿಚಾರಗಳಿಂದ ಆ ಚಿತ್ರ ಜನಮನ ಸೆಳೆದಿತ್ತು. ಆ ಬಳಿಕ ‘ಮೇರೆ ಬ್ರದರ್ ಕಿ ದುಲ್ಹನ್’, ‘ಏಕ್ ಮೇ ಔರ್ ಏಕ್ ತು’ ಮುಂತಾದ ಚಿತ್ರಗಳಲ್ಲಿ ಇಮ್ರಾನ್ ಖಾನ್ ನಟಿಸಿದರು. ಆ ನಂತರದ ಸಿನಿಮಾಗಳಿಂದ ಅವರಿಗೆ ಹೇಳಿಕೊಳ್ಳುವಂತಹ ಯಶಸ್ಸು ಸಿಗಲೇ ಇಲ್ಲ.
ಬ್ಯಾಕ್ ಟು ಬ್ಯಾಕ್ ಸಿನಿಮಾದಲ್ಲಿ ಕಾಣಿಸಿಕೊಂಡರೂ ಕೂಡ ಇಮ್ರಾನ್ ಗೆಲ್ಲಲಿಲ್ಲ. ಕಡೆಗೆ ಅವರು ನಟನೆಗೆ ಗುಡ್ಬೈ ಹೇಳುವ ನಿರ್ಧಾರಕ್ಕೆ ಬಂದರು. ನಟನೆ ಬಿಟ್ಟು ನಿರ್ದೇಶನದ ಕಡೆಗೆ ಅವರು ಆಸಕ್ತಿ ತೋರಿಸಿದರು. ಅವರು ತೆಗೆದುಕೊಂಡ ಆ ತೀರ್ಮಾನದಿಂದಾಗಿ ‘ಡೆಲ್ಲಿ ಬೆಲ್ಲಿ’ ಚಿತ್ರದ ನಿರ್ದೇಶಕ ಅಭಿನಯ್ ಡಿಯೋ ಅವರಿಗೆ ಬೇಸರ ಆಗಿತ್ತು. ‘ಡೆಲ್ಲಿ ಬೆಲ್ಲಿ’ ಸಿನಿಮಾ 10 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಅವರು ಇ್ರಮಾನ್ ಬಗ್ಗೆ ಮಾತನಾಡಿದ್ದಾರೆ.
‘ಇಮ್ರಾನ್ ಬಗ್ಗೆ ನಾನು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಅವರು ನಟನೆಗೆ ವಿದಾಯ ಹೇಳಿದಾಗ ನನಗೆ ಬೇಸರ ಆಗಿತ್ತು. ಅವರಂಥ ಒಳ್ಳೆಯ ವ್ಯಕ್ತಿ ಇಂಡಸ್ಟ್ರಿಯಲ್ಲಿ ಇರಬೇಕಾಗಿತ್ತು. ಕ್ಯಾಮರಾ ಮುಂದೆ ಇರಲಿ ಅಥವಾ ಕ್ಯಾಮರಾ ಹಿಂದೆ ಇರಲಿ, ಅವರೊಬ್ಬ ಪ್ರತಿಭಾವಂತ. ಫಿಲ್ಮ್ ಮೇಕಿಂಗ್ ಬಗ್ಗೆ ತರಬೇತಿ ಪಡೆದುಕೊಂಡವರು. ಅವರಿಗೆ ಸಾಧ್ಯವಾಗುವ ಯಾವುದೇ ಪ್ರಕಾರದಲ್ಲಿ ಅವರು ತಮ್ಮ ಕ್ರಿಯೇಟಿವಿಟಿ ತೋರಿಸಬೇಕು. ಅವರು ಇನ್ಮುಂದೆ ನಟಿಸುವುದಿಲ್ಲ ಎಂದು ಹೇಳಿದಾಗ ನನಗೆ ಬಹಳ ಬೇಸರ ಆಗಿತ್ತು’ ಎಂದು ಅಭಿನಯ್ ಡಿಯೋ ಹೇಳಿದ್ದಾರೆ.
ಇದನ್ನೂ ಓದಿ:
ಯಾಮಿ ಗೌತಮ್ ಪೋಸ್ಟ್ನಲ್ಲಿ ಕಂಗನಾ ಕಿರಿಕ್; ಬಾಲಿವುಡ್ ನಟನಿಗೆ ಚಪ್ಪಲಿ ತೋರಿಸುವ ಬಗ್ಗೆ ಮಾತನಾಡಿದ ನಟಿ
ಬಾಲಿವುಡ್ನಲ್ಲಿ ಸ್ಟಾರ್ ಆದಮೇಲೂ ಸುಶಾಂತ್ ಧಾರಾವಾಹಿಯಲ್ಲಿ ನಟಿಸಬೇಕಾಯಿತು; ಕಾರಣ ಏನು?