‘ದೇವರ’ ಚಿತ್ರದ ಸೀಕ್ವೆಲ್​ನಲ್ಲಿ ನಟಿಸಲಿದ್ದಾರೆ ಬಾಲಿವುಡ್​ನ ಈ ಸ್ಟಾರ್ ಹೀರೋ

ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಚರ್ಚೆಯ ಬಗ್ಗೆ ಕೊರಟಲಾ ಶಿವಗೆ ಯಾವುದೇ ನಂಬಿಕೆ ಇಲ್ಲ. ಈ ಕಾರಣದಿಂದಲೇ ಅವರು ಬಾಲಿವುಡ್​ನಿಂದ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು.  

‘ದೇವರ’ ಚಿತ್ರದ ಸೀಕ್ವೆಲ್​ನಲ್ಲಿ ನಟಿಸಲಿದ್ದಾರೆ ಬಾಲಿವುಡ್​ನ ಈ ಸ್ಟಾರ್ ಹೀರೋ
ದೇವರ

Updated on: Oct 10, 2024 | 10:42 AM

‘ದೇವರ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ 500 ಕೋಟಿ ರೂಪಾಯಿ ಗಳಿಕೆ ಮಾಡುವುದರಲ್ಲಿದೆ. ಈ ಚಿತ್ರವನ್ನು ತಂಡ ಸೂಪರ್ ಹಿಟ್ ಎಂದು ಕರೆದುಕೊಂಡಿದೆ. ಆದರೆ, ಇಂಡಸ್ಟ್ರಿ ಮಂದಿ ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ನೀಡಿದ್ದಾರೆ. ಈ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿದರೆ ಯಾರೊಬ್ಬರೂ ಎರಡನೇ ಪಾರ್ಟ್ ಶೂಟ್ ಮಾಡೋ ಸಾಹಸಕ್ಕೆ ಮುಂದಾಗುವುದಿಲ್ಲ. ಆದರೆ, ಕೊರಟಾಲ ಶಿವ ‘ದೇವರ: ಪಾರ್ಟ್​ 2’ ಮಾಡುವ ಬಗ್ಗೆ ಭರವಸೆ ನೀಡಿದ್ದಾರೆ.

‘ಎರಡನೇ ಭಾಗದಲ್ಲಿ ಯಾರಾದರೂ ಸ್ಟಾರ್ ಹೀರೋ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ’ ಎಂದು ಕೊರಟಾಲ ಶಿವಗೆ ಕೇಳಲಾಗಿದೆ. ಇದಕ್ಕೆ ಅವರು ತಮ್ಮದೇ ಸ್ಟೈಲ್​ನಲ್ಲಿ ಉತ್ತರಿಸಿದ್ದಾರೆ. ಅವರಿಗೆ ಅತಿಥಿ ಪಾತ್ರಗಳ ಬಗ್ಗೆ ನಂಬಿಕೆ ಇಲ್ಲವಂತೆ. ‘ನಾನು ದೊಡ್ಡ ಕಲಾವಿದರನ್ನೇ ಹಾಕಿಕೊಳ್ಳುತ್ತೇನೆ. ಅವರದ್ದು ಅತಿಥಿ ಪಾತ್ರ ಎಂದು ಹೇಳಲ್ಲ. ಎಲ್ಲವೂ ಪ್ರಮುಖ ಪಾತ್ರಗಳೇ. ಮುಂದಿನ ದಿನಗಳಲ್ಲಿ ಒಂದಾದ ಮೇಲೆ ಒಂದರಂತೆ ರಿವೀಲ್ ಮಾಡುತ್ತೇವೆ’ ಎಂದು ಅವರು ಹೇಳಿದ್ದಾರೆ.

‘ನನ್ನ ಬಳಿ ನನ್ನದೇ ಆದ ಲಿಸ್ಟ್ ಇದೆ. ಅದು ಸಂಭವಿಸುತ್ತದೆಯೋ ಅಥವಾ ಇಲ್ಲವೋ ಗೊತ್ತಿಲ್ಲ. ರಣವೀರ್ ಸಿಂಗ್ ಅಥವಾ ರಣಬೀರ್ ಕಪೂರ್ ಅವರನ್ನು ದೇವರ ಚಿತ್ರದಲ್ಲಿ ನೋಡಬೇಕು. ನಾನು ತೆಲುಗು ಅಥವಾ ತಮಿಳು ಇಂಡಸ್ಟ್ರಿಯವರ ಯಾವುದೇ ಹೆಸರನ್ನು ತೆಗೆದುಕೊಳ್ಳಲ್ಲ. ಹಾಗೆ ಮಾಡಿದರೆ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಳ್ಳುತ್ತವೆ’ ಎಂದಿದ್ದಾರೆ ಅವರು.

ದಕ್ಷಿಣ ಭಾರತ ಹಾಗೂ ಉತ್ತರ ಭಾರತ ಎಂಬ ಚರ್ಚೆಯ ಬಗ್ಗೆ ಕೊರಟಲಾ ಶಿವಗೆ ಯಾವುದೇ ನಂಬಿಕೆ ಇಲ್ಲ. ಈ ಕಾರಣದಿಂದಲೇ ಅವರು ಬಾಲಿವುಡ್​ನಿಂದ ಜಾನ್ವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರು.

ಇದನ್ನೂ ಓದಿ: ‘ದೇವರ’ ಬಗ್ಗೆ ಮೌನ ತಾಳಿದ ಮಹೇಶ್ ಬಾಬು; ಸಿನಿಮಾ ಇಷ್ಟವಾಗಿಲ್ವಾ?

‘ದೇವರ’ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್, ಜಾನ್ವಿ ಕಪೂರ್, ಪ್ರಕಾಶ್ ರಾಜ್ ಮೊದಲಾದವರು ನಟಿಸಿದ್ದಾರೆ. ಈ ಚಿತ್ರ ಸೆಪ್ಟೆಂಬರ್ 27ರಂದು ರಿಲೀಸ್ ಆಗಿದೆ. ಕೊರಟಾಲ ಶಿವ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us