AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡೆವಿಲ್’ ಸಿನಿಮಾ ಕಲೆಕ್ಷನ್ ಮತ್ತಷ್ಟು ಕುಸಿತ; ಬಚಾವ್ ಆಗಲು ಇದೆ ಒಂದು ಆಯ್ಕೆ

‘ಡೆವಿಲ್’ ಸಿನಿಮಾ ಕಲೆಕ್ಷನ್ ದಿನೇ ದಿನೇ ಕುಸಿಯುತ್ತಿದೆ. ಶೋಗಳ ಸಂಖ್ಯೆ ಇಳಿಕೆ ಮತ್ತು ಪೈರಸಿ ತಂಡಕ್ಕೆ ಚಿಂತೆ ತಂದಿದೆ. ನಷ್ಟದಿಂದ ಪಾರಾಗಲು ನಿರ್ಮಾಪಕರಿಗೆ ಒಂದು ಆಯ್ಕೆ ಇದೆ. ಅದನ್ನು ನಿರ್ಮಾಪಕರು ಪ್ರಯೋಗಿಸುತ್ತಾರಾ ನೋಡಬೇಕಿದೆ. ಇದು ಚಿತ್ರಕ್ಕೆ ಕೊಂಚ ಲಾಭ ತರಬಹುದು. ಮುಂದಿನ ವಾರ ಹೊಸ ಸಿನಿಮಾಗಳ ಸ್ಪರ್ಧೆಯಿಂದ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.

‘ಡೆವಿಲ್’ ಸಿನಿಮಾ ಕಲೆಕ್ಷನ್ ಮತ್ತಷ್ಟು ಕುಸಿತ; ಬಚಾವ್ ಆಗಲು ಇದೆ ಒಂದು ಆಯ್ಕೆ
ಡೆವಿಲ್ ಸಿನಿಮಾ
ರಾಜೇಶ್ ದುಗ್ಗುಮನೆ
|

Updated on: Dec 20, 2025 | 7:04 AM

Share

‘ಡೆವಿಲ್’ ಸಿನಿಮಾ (Devil Movie) ಕಲೆಕ್ಷನ್ ದಿನ ಕಳೆದಂತೆ ಕುಸಿತ ಕಾಣುತ್ತಿದೆ. ಸಿನಿಮಾಗೆ ಮೊದಲ ವಾರ ಕೊಡಲಾದ ಶೋಗಳ ಸಂಖ್ಯೆಯನ್ನು ಎರಡನೇ ವಾರಕ್ಕೆ ಇಳಿಕೆ ಮಾಡಲಾಗಿದೆ . ಇದು ಚಿತ್ರದ ಕಲೆಕ್ಷನ್ ಕುಗ್ಗಲು ಪ್ರಮುಖ ಕಾರಣ. ಅಂದುಕೊಂಡ ರೀತಿಯಲ್ಲಿ ಸಿನಿಮಾ ಸಾಗುತ್ತಿಲ್ಲ. ಇದರ ಜೊತೆಗೆ ಪೈರಸಿ ಕಾಟ. ಇದು ತಂಡದ ಚಿಂತೆಗೆ ಕಾರಣ ಆಗಿದೆ. ನಷ್ಟದಿಂದ ತಪ್ಪಿಸಿಕೊಳ್ಳಲು ನಿರ್ಮಾಪಕರ ಬಳಿ ಒಂದು ಆಯ್ಕೆ ಇದೆ. ಈ ಆಯ್ಕೆಯನ್ನು ಪ್ರಯೋಗಿಸಿದರೆ ಕೊಂಚ ಲಾಭ ಕಾಣಬಹುದು.

‘ಡೆವಿಲ್’ ಸಿನಿಮಾದ ಗಳಿಕೆ 25 ಕೋಟಿ ರೂಪಾಯಿ ಆಸುಪಾಸಿನಲ್ಲೇ ಸುತ್ತುತ್ತಿದೆ. ಇಂದು ಸಿನಿಮಾದ ಗಳಿಕೆ 26 ಕೋಟಿ ರೂಪಾಯಿ ದಾಟಬಹುದು ಎಂದು ಲೆಕ್ಕಿಸಲಾಗಿದೆ. ವಾರದ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಲಕ್ಷಗಳಲ್ಲಿ ಆಗುತ್ತಿದೆ. ಇದು ಚಿತ್ರಕ್ಕೆ ಸಾಕಷ್ಟು ಹಿನ್ನಡೆಯನ್ನು ಉಂಟು ಮಾಡುತ್ತಿದೆ. ‘ಡೆವಿಲ್’ ಚಿತ್ರದ ಒಟ್ಟಾರೆ ಕಲೆಕ್ಷನ್ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿ ಎಂಬುದು ಫ್ಯಾನ್ಸ್ ಬಯಕೆ.

ಡಿಸೆಂಬರ್ 19ರಂದು ‘ಡೆವಿಲ್’ ಸಿನಿಮಾ 47 ಲಕ್ಷ ಕಲೆಕ್ಷನ್ ಮಾಡಿದೆ. ಡಿಸೆಂಬರ್ 18ರ ಗಳಿಕೆ 55-60 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಇತ್ತು. ಸಿನಿಮಾದ ಒಟ್ಟೂ ಕಲೆಕ್ಷನ್ 25.58 ಕೋಟಿ ರೂಪಾಯಿ. ಇಂದು (ಡಿಸೆಂಬರ್ 20) ಹಾಗೂ ನಾಳೆ (ಡಿಸೆಂಬರ್ 21) ಸಿನಿಮಾ ಎಷ್ಟು ಗಳಿಕೆ ಮಾಡುತ್ತದೆ ಎಂಬುದು ತುಂಬಾನೇ ಮುಖ್ಯವಾಗುತ್ತದೆ.

ಇದನ್ನೂ ಓದಿ: ಅದೇ ಖದರ್, ಅದೇ ಹೈಟ್, ಅದೇ ಲುಕ್; ದರ್ಶನ್ ರೀತಿಯೇ ಕಾಣ್ತಾರೆ ವಿನೀಶ್ ಈಗಾಗಲೇ ಮುಂದಿನ ವಾರ ಸುದೀಪ್ ನಟನೆಯ ‘ಮಾರ್ಕ್’ ಹಾಗೂ ಮಲ್ಟಿ ಸ್ಟಾರರ್ ಸಿನಿಮಾ ‘45’ ರಿಲೀಸ್ ಆಗುತ್ತಿದೆ. ಈ ವೇಳೆ ‘ಡೆವಿಲ್​​’ ಸಿಗೋ ಚಿತ್ರಮಂದಿರಗಳ ಸಂಖ್ಯೆ ಮತ್ತಷ್ಟು ಕಡಿಮೆ ಆಗಬಹುದು. ಹೀಗಾಗಿ, ಚಿತ್ರತಂಡದವರು ಒಟಿಟಿ ಸಂಸ್ಥೆ ಜೊತೆ ಮಾತನಾಡಿ ಸಿನಿಮಾನ ಮೊದಲೇ ಒಟಿಟಗೆ ತರಬಹುದು. ಆಗ ಒಟಿಟಿ ಕಡೆಯಿಂದ ಹೆಚ್ಚಿನ ಹಣ ನಿರ್ಮಾಪಕರಿಗೆ ಸಿಗೋ ಸಾಧ್ಯತೆ ಇರುತ್ತದೆ. ಅನೇಕ ಸಿನಿಮಾ ತಂಡಗಳು ಇದೇ ರೀತಿ ಮಾಡಿ ನಷ್ಟದಿಂದ ಬಚಾವ್ ಆದ ಉದಾಹರಣೆ ಇದೆ. ‘ಡೆವಿಲ್’ ಕೂಡ ಇದೆ ಹಾದಿ ಹಿಡಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್