AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಂಬಾನೇ ಕೆಳಮಟ್ಟದಲ್ಲಿ ಯೋಚಿಸಿದ್ರಾ ರಕ್ಷಿತಾ ಶೆಟ್ಟಿ? ನೆಟ್ಟಿಗರ ಕ್ಲಾಸ್

ರಕ್ಷಿತಾ ಶೆಟ್ಟಿ ಅವರ ಬಿಗ್ ಬಾಸ್ ಮನೆಯೊಳಗಿನ ವರ್ತನೆ ಬದಲಾಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸೀಕ್ರೆಟ್ ರೂಂ ಟಾಸ್ಕ್‌ನಲ್ಲಿ ಮಹಿಳಾ ಸ್ಪರ್ಧಿಗಳ ವೈಯಕ್ತಿಕ ಮೇಕಪ್ ಬ್ರಷ್‌ಗಳನ್ನು ನೆಲದ ಮೇಲೆ ಚೆಲ್ಲಿದ ಅವರ ಕ್ರಮವನ್ನು ಹಲವರು "ಕೀಳುಮಟ್ಟದ ಆಲೋಚನೆ" ಎಂದು ಟೀಕಿಸಿದ್ದಾರೆ. ವೈಯಕ್ತಿಕ ವಸ್ತುಗಳಿಗೆ ಅಗೌರವ ತೋರಿದ್ದಕ್ಕೆ ರಾಶಿಕಾ ಸೇರಿದಂತೆ ಇತರೆ ಸ್ಪರ್ಧಿಗಳು ನೋವು ವ್ಯಕ್ತಪಡಿಸಿದ್ದು, ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.

ತುಂಬಾನೇ ಕೆಳಮಟ್ಟದಲ್ಲಿ ಯೋಚಿಸಿದ್ರಾ ರಕ್ಷಿತಾ ಶೆಟ್ಟಿ? ನೆಟ್ಟಿಗರ ಕ್ಲಾಸ್
ರಕ್ಷಿತಾ
ರಾಜೇಶ್ ದುಗ್ಗುಮನೆ
|

Updated on: Dec 20, 2025 | 8:03 AM

Share

ರಕ್ಷಿತಾ ಶೆಟ್ಟಿ (Rakshita Shetty) ಅವರ ಆಟದಲ್ಲಿ ಸಂಪೂರ್ಣ ಬದಲಾವಣೆ ಕಾಣುತ್ತಿದೆ. ಮೊದಲಿನ ರಕ್ಷಿತಾ ಶೆಟ್ಟಿಗೂ ಈಗಿನ ರಕ್ಷಿತಾ ಶೆಟ್ಟಿಗೂ ತುಂಬಾನೇ ವ್ಯತ್ಯಾಸ ಇದೆ. ಇದನ್ನು ಅನೇಕರು ಗಮನಿಸಿದ್ದಾರೆ. ಈಗ ಅವರು ನಡೆದುಕೊಂಡ ರೀತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅನೇಕರು ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ತುಂಬಾನೇ ಕೆಳಮಟ್ಟದಲ್ಲಿ ಯೋಚಿಸುತ್ತಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಿತಾ ಶೆಟ್ಟಿ ಅವರು ಸದ್ಯ ಸೀಕ್ರೆಟ್ ರೂಂನಲ್ಲಿ ಇದ್ದಾರೆ. ಈ ವಾರ ಅವರು ಮತ್ತೆ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸೋ ಸಾಧ್ಯತೆ ಇದೆ. ಡಿಸೆಂಬರ್ 19ರ ಎಪಿಸೋಡ್​​ನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್​​ಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದರು. ಇದರ ಅನುಸಾರ ರಕ್ಷಿತಾ ಶೆಟ್ಟಿ ಹಾಗೂ ಧ್ರುವಂತ್ ಸೀಕ್ರೆಟ್ ರೂಂನಿಂದ ಬಿಗ್ ಬಾಸ್ ಮನೆ ಒಳಗೆ ತೆರಳಿ ಕಸ ಹರಡಿ ಬರಬೇಕು.

ಇದನ್ನು ಕೇಳುತ್ತಿದ್ದಂತೆ ರಕ್ಷಿತಾ ಶೆಟ್ಟಿ ಅವರು ಸಾಕಷ್ಟು ಎಗ್ಸೈಟ್ ಆದರು. ಸಿಕ್ಕಿದ್ದೇ ಚಾನ್ಸ್ ಎಂದು ಇಡೀ ಮನೆಯ ತುಂಬಾ ಥರ್ಮಕೋಲ್ ಚೂರು, ಪೇಪರ್ ಕಸವನ್ನು ಹರಡಿದರು. ಬಿಗ್ ಬಾಸ್ ಕೊಟ್ಟ ಟಾಸ್ಕ್ ಆದ್ದರಿಂದ ಮಾಡಲೇಬೇಕಿತ್ತು. ಆದರೆ, ಅವರು ಕೆಲವು ಮಹಿಳಾ ಸ್ಪರ್ಧಿಗಳ ವೈಯಕ್ತಿಕ ಮೇಕಪ್ ಬ್ರಶ್​​ಗಳನ್ನು ನೆಲಕ್ಕೆ ಹರಡಿದ್ದಾರೆ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ‘ನಿನಗೆ ಮಾನ-ಮಾರ್ಯಾದೆ ಏನೂ ಇಲ್ಲ’; ಗಿಲ್ಲಿಗೆ ಗಂಭೀರವಾಗಿಯೇ ಹೇಳಿದ ಕಾವ್ಯಾ ಬ್ರಶ್​ಗಳು ನೆಲದ ಮೇಲೆ ಬಿದ್ದಿದ್ದನ್ನು ನೋಡುತ್ತಿದ್ದಂತೆ ರಾಶಿಕಾಗೆ ಸಾಕಷ್ಟು ಬೇಸರ ಆಯಿತು. ‘ಅವೆಲ್ಲ ನನ್ನ ಬ್ರಶ್​​ಗಳು. ಇದನ್ನು ಹೇಗೆ ಮರು ಜೋಡಿಸೋದು’ ಎಂದು ಅವರು ತಮ್ಮನ್ನು ತಾವು ಕೇಳಿಕೊಂಡರು. ಎಲ್ಲಕ್ಕಿಂತ ಮುಖ್ಯವಾಗಿ ಆ ಎಲ್ಲಾ ಬ್ರಶ್​​ಗಳು ಮುಖಕ್ಕೆ ಬಳಕೆ ಮಾಡೋದು. ನೆಲಕ್ಕೆ ಬಿದ್ದಾಗ ಧೂಳು-ಮಣ್ಣುಗಳು ಅದಕ್ಕೆ ಸೇರಿಕೊಳ್ಳಬಹುದು. ನಂತರ ಅದನ್ನು ಮುಖಕ್ಕೆ ಬಳಕೆ ಮಾಡಿದರೆ ಅಲರ್ಜಿ ಆಗಬಹುದು. ಇನ್ನು ಕಷ್ಟ ಪಟ್ಟು ದುಡಿದ ಹಣದಿಂದ ಮೇಕಪ್​ ಕಿಟ್​​ಗಳನ್ನು ಖರೀದಿ ಮಾಡಿರುತ್ತಾರೆ. ಇದನ್ನು ಹಾಳು ಮಾಡೋದು ಎಷ್ಟು ಸರಿ ಎಂದು ಅನೇಕರು ಕೇಳಿದ್ದಾರೆ. ರಕ್ಷಿತಾ ಈ ಕೀಳು ಬುದ್ಧಿಯನ್ನು ಬಿಡಬೇಕು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.