ಧನುಷ್- ರಾಶಿ ಖನ್ನಾ ನಟನೆಯ ನೂತನ ಚಿತ್ರದ ಫೊಟೊಗಳು ಲೀಕ್; ಹೊಸ ಚಿತ್ರದಲ್ಲಿ ಧನುಷ್ ಲುಕ್ ಹೇಗಿದೆ?

Rashi Khanna: ಕಾಲಿವುಡ್​ನ ಖ್ಯಾತ ನಟ ಧನುಷ್ ಸಾಲು ಸಾಲು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಸೆಟ್ಟೇರಿದ್ದ ‘ತಿರುಚಿತ್ರಂಬಳಂ’ ಚಿತ್ರದಲ್ಲಿ ಅವರು ನಟಿ ರಾಶಿ ಖನ್ನಾ ಅವರೊಂದಿಗೆ ಬಣ್ಣ ಹಚ್ಚುತ್ತಿದ್ದಾರೆ. ಇದೀಗ ಆ ಚಿತ್ರದ ಫೊಟೊಗಳು ಅಂತರ್ಜಾಲದಲ್ಲಿ ಲೀಕ್ ಆಗಿಇದೆ.

ಧನುಷ್- ರಾಶಿ ಖನ್ನಾ ನಟನೆಯ ನೂತನ ಚಿತ್ರದ ಫೊಟೊಗಳು ಲೀಕ್; ಹೊಸ ಚಿತ್ರದಲ್ಲಿ ಧನುಷ್ ಲುಕ್ ಹೇಗಿದೆ?
ರಾಶಿ ಖನ್ನಾ, ಧನುಷ್ (ಸಾಂದರ್ಭಿಕ ಚಿತ್ರ)
Edited By:

Updated on: Aug 29, 2021 | 11:41 AM

ಕಾಲಿವುಡ್​ನ ಖ್ಯಾತ ನಟ ಧನುಷ್ ನಟನೆಯ ನೂತನ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿತ್ತು. ಅದರ ಚಿತ್ರೀಕರಣದ ಕೆಲವು ಫೊಟೊಗಳು ಈಗ ಲೀಕ್ ಆಗಿದ್ದು, ಧನುಷ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ. ಮಿತ್ರನ್ ಜವಾಹರ್ ಹಾಗೂ ಧನುಷ್ ಕಾಂಬಿನೇಷನ್​ನಲ್ಲಿ ಮುಡಿಬರುತ್ತಿರುವ ನಾಲ್ಕನೇ ಚಿತ್ರವಾದ, ‘ತಿರುಚಿತ್ರಂಬಳಂ’ ಚಿತ್ರದ ಫೊಟೊಗಳು ವೈರಲ್ ಆಗಿವೆ. ಈ ಚಿತ್ರದಲ್ಲಿ ಧನುಷ್ ಹಾಗೂ ರಾಶಿ ಖನ್ನಾ ಕಾಣಿಸಿಕೊಳ್ಳುತ್ತಿದ್ದು, ರೊಮ್ಯಾಂಟಿಕ್- ಕಾಮಿಡಿ ಮಾದರಿಯ ಚಿತ್ರ ಇದಾಗಿರಲಿದೆ ಎನ್ನಲಾಗಿದೆ.

ಚಿತ್ರೀಕರಣ ನಡೆಯುತ್ತಿರುವ ಕೆಫೆಯೊಂದರ ಹೊರಭಾಗದಲ್ಲಿ ನಿಂತಿರುವ ಧನುಷ್ ಹಾಗೂ ರಾಖಿ ಖನ್ನಾ ಅವರ ಚಿತ್ರಗಳು ಲೀಕ್ ಆಗಿವೆ. ರಾಶಿ ಖನ್ನಾ ಇತ್ತೀಚೆಗಷ್ಟೇ ತಾವು ‘ತಿರುಚಿತ್ರಂಬಳಂ’ ಚಿತ್ರದ ಶೂಟಿಂಗ್​ ಪ್ರಾರಂಭಿಸಿದ್ದೇನೆ ಎಂದು ಸಾಮಾಜಿಕ ಜಾಲತಾಣದ ಮುಖಾಂತರ ತಿಳಿಸಿದ್ದರು. ಚಿತ್ರದಲ್ಲಿ ಧನುಷ್ ಬಿಳಿ ಶರ್ಟ್ ಹಾಗೂ ಕಪ್ಪು ಬಣ್ಣದ ಮೇಲಂಗಿಯನ್ನು ಧರಿಸಿದ್ದು, ರಾಶಿ ಪಿಂಕ್ ಬಣ್ಣದ ಉಡುಗೆಯನ್ನು ತೊಟ್ಟಿರುವುದು ಅಭಿಮಾನಿಗಳಲ್ಲಿ ಅವರ ಪಾತ್ರದ ಕುರಿತು ಕುತೂಹಲ ಹುಟ್ಟುಹಾಕಿದೆ.

ಚಿತ್ರೀಕರಣದ ಸೆಟ್​ನಿಂದ ಲೀಕ್ ಆದ ಚಿತ್ರ

ಧನುಷ್ ಹಾಗೂ ಮಿತ್ರನ್ ಜವಾಹರ್ ಅವರು ಈ ಮೊದಲು ‘ಯಾರಡಿ ನೀ ಮೋಹಿನಿ’, ‘ಕುಟ್ಟಿ’, ‘ಉಥಮಪುಥಿರನ್’ ಚಿತ್ರದಲ್ಲಿ ಜೊತೆಯಾಗಿದ್ದರು. ಈ ಚಿತ್ರಗಳೆಲ್ಲವೂ ಹಿಟ್ ಆಗಿದ್ದು, ಪ್ರಸ್ತುತ ಚಿತ್ರೀಕರಣ ನಡೆಯುತ್ತಿರುವ ತಿರುಚಿತ್ರಂಬಳಂ ಚಿತ್ರದ ಮೇಲೂ ಬಹಳಷ್ಟು ನಿರೀಕ್ಷೆಗಳಿವೆ. ಈ ಚಿತ್ರವನ್ನು ಸನ್ ಪಿಚ್ಚರ್ಸ್ ನಿರ್ಮಾಣ ಮಾಡುತ್ತಿದ್ದು, ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿತ್ತು.

ಈ ಚಿತ್ರದಲ್ಲಿ ನಿತ್ಯಾ ಮೆನನ್, ಪ್ರಿಯಾ ಭವಾನಿ ಶಂಕರ್, ಪ್ರಕಾಶ್ ರಾಜ್, ಭಾರತಿರಾಜ ಮೊದಲಾದವರು ಪ್ರಮುಖ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂಗೀತ ನಿರ್ದೇಶಕ ಅನಿರುದ್ಧ್ ಹಾಗೂ ಧನುಷ್ ಆರು ವರ್ಷಗಳ ನಂತರ ಈ ಚಿತ್ರಕ್ಕೆ ಜೊತೆಯಾಗಿರುವುದು ಕೂಡಾ ಚಿತ್ರದ ಕುರಿತು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಧನುಷ್​ ನಟನೆಯ ಕೊನೆಯ ಚಿತ್ರ ‘ಜಗಮೇ ತಂದಿರನ್’ ನೆಟ್​ಫ್ಲಿಕ್ಸ್ ಮೂಲಕ ಬಿಡುಗಡೆಯಾಗಿತ್ತು. ಸದ್ಯ ಅವರ ಕೈಯಲ್ಲಿ ‘ದಿ ಗ್ರೇ ಮ್ಯಾನ್’ ಹಾಲಿವುಡ್ ಚಿತ್ರವೂ ಸೇರಿದಂತೆ ಹಲವು ಚಿತ್ರಗಳಿವೆ.

ಇದನ್ನೂ ಓದಿ:

Pawan Kalyan: ಪವನ್ ಕಲ್ಯಾಣ್ 50ನೇ ಜನ್ಮದಿನಕ್ಕೆ 100 ವಿಶೇಷ ಪ್ರದರ್ಶನ ಕಾಣಲಿದೆ ಈ ಸೂಪರ್ ಹಿಟ್ ಚಿತ್ರ!

‘ನೀಚವಾಗಿ ಬೈಯ್ದು, ರಾಜಕೀಯ ಮಾಡುವವರ ಲೆವೆಲ್​ಗೆ ರಮ್ಯಾ ಇಳಿಯಲ್ಲ’: ಕವಿತಾ ಲಂಕೇಶ್​

(Dhanush and Rashi Khanna starring Tiruchitrambalam movie shooting stills are leaked)