AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pawan Kalyan: ಪವನ್ ಕಲ್ಯಾಣ್ 50ನೇ ಜನ್ಮದಿನಕ್ಕೆ 100 ವಿಶೇಷ ಪ್ರದರ್ಶನ ಕಾಣಲಿದೆ ಈ ಸೂಪರ್ ಹಿಟ್ ಚಿತ್ರ!

ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಸೆಙ್ಟೆಂಬರ್ 2ರಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದನ್ನು ಭರ್ಜರಿಯಾಗಿ ಆಚರಿಸಿಕೊಳ್ಳುವುದಕ್ಕೆ ಅಭಿಮಾನಿಗಳಿಗೆ ಪೂರಕ ಕಾರಣವೊಂದು ಸಿಕ್ಕಿದ್ದು, ಅವರ ಸೂಪರ್ ಹಿಟ್ ಚಿತ್ರವೊಂದು ಚಿತ್ರಮಂದಿರಗಳಲ್ಲಿ ಮರುಬಿಡುಗಡೆಯಾಗಲಿದೆ. ಅಂದು ಆ ಚಿತ್ರದ ನೂರು ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಯಾವ ಚಿತ್ರ? ಮುಂದೆ ಓದಿ.

Pawan Kalyan: ಪವನ್ ಕಲ್ಯಾಣ್ 50ನೇ ಜನ್ಮದಿನಕ್ಕೆ 100 ವಿಶೇಷ ಪ್ರದರ್ಶನ ಕಾಣಲಿದೆ ಈ ಸೂಪರ್ ಹಿಟ್ ಚಿತ್ರ!
ಪವನ್ ಕಲ್ಯಾಣ್
TV9 Web
| Edited By: |

Updated on: Aug 29, 2021 | 10:21 AM

Share

ಟಾಲಿವುಡ್ ಪವರ್​ಸ್ಟಾರ್ ಪವನ್ ಕಲ್ಯಾಣ್ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಹಬ್ಬ. ಅವರ ಹುಟ್ಟುಹಬ್ಬವನ್ನು ಭರ್ಜರಿಯಾಗಿ ಆಚರಿಸುವ ಅಭಿಮಾನಿಗಳಿಗೆ ಈ ಬಾರಿ ಕೊರೊನಾ ಇರುವುದು ಸ್ವಲ್ಪ ಹಿನ್ನೆಡೆಯಾಗಿರಬಹುದು. ಕಾರಣ, ಅಭಿಮಾನಿಗಳೊಂದಿಗೆ ಬೆರೆತು ಹುಟ್ಟುಹಬ್ಬವನ್ನು ಆಚರಿಸಲು ತಾರೆಗಳು ಈಗ ಹಿಂದೆ ಮುಂದೆ ನೋಡುತ್ತಾರೆ. ಎಲ್ಲರೂ ಆರೋಗ್ಯಕರವಾಗಿ ಸಂಭ್ರಮಿಸಿ, ಮುಂದೆ ಎಂದಾದರೂ ಒಟ್ಟಿಗೇ ಸೇರಿ ಸಂಭ್ರಮ ಆಚರಿಸೋಣ ಎಂದು ಮೆಗಾಸ್ಟಾರ್ ಚಿರಂಜೀವಿಯಾದಿಯಾಗಿ ಹಲವು ಟಾಲಿವುಡ್ ಸ್ಟಾರ್​ಗಳು ಅಭಿಮಾನಿಗಳಲ್ಲಿ ಕೋರಿಕೊಂಡಿದ್ದರು. ಆದರೆ ಪವನ್ ಕಲ್ಯಾಣ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಸಂಭ್ರಮಿಸಲು ವಿಶೇಷ ಕಾರಣವೊಂದು ಸಿಕ್ಕಿದೆ.

ಸೆಪ್ಟೆಂಬರ್ 2ರಂದು ತಮ್ಮ 50ನೇ ವರ್ಷದ ಜನ್ಮದಿನವನ್ನು ಪವನ್ ಕಲ್ಯಾಣ್ ಆಚರಿಸಿಕೊಳ್ಳುತ್ತಿದ್ದಾರೆ. ಅಂದು ಅಭಿಮಾನಿಗಳಿಗೆ ಸಂಭ್ರಮಿಸಲು ಹೊಸ ಕಾರಣವೊಂದು ಸಿಕ್ಕಿದೆ. ಪವನ್ ಕಲ್ಯಾಣ್​ರ ಸೂಪರ್​ಹಿಟ್ ಚಿತ್ರ ‘ಗಬ್ಬರ್ ಸಿಂಗ್’ ಅಂದು ಮರುಬಿಡುಗಡೆಯಾಗುತ್ತಿದೆ. ಗಬ್ಬರ್ ಸಿಂಗ್ ಚಿತ್ರದ ನಿರ್ಮಾಪಕ ಬಾಂದ್ಲಾ ಗಣೇಶ್ ಈ ವಿಷಯವನ್ನು ಖಚಿತಪಡಿಸಿದ್ದು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ಸುಮಾರು 100 ಪ್ರದರ್ಶನಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.

ಪವನ್ ಕಲ್ಯಾಣ್​ರ ಕೊನೆಯ ಚಿತ್ರ ‘ವಕೀಲ್ ಸಾಬ್’ ಇದೇ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಪ್ರಸ್ತುತ ಅವರ ಬತ್ತಳಿಕೆಯಲ್ಲಿ ಎರಡು ಚಿತ್ರಗಳಿವೆ. ಅವರ ಜನ್ಮದಿನದಂದು ಆ ಚಿತ್ರದಿಂದ ಏನಾದರೂ ಹೊಸ ಅಪ್ಡೇಟ್ ಬರುವ ನಿರೀಕ್ಷೆ ಇದೆ. ಆದರೆ, ಅಭಿಮಾನಿಗಳಿಗೆ ಪವರ್​ ಸ್ಟಾರ್ ಜನ್ಮದಿನಕ್ಕೆ ಸಂಭ್ರಮಿಸುವಂತಹ ಗಿಫ್ಟ್ ಏನನ್ನಾದರೂ ನೀಡಬೇಕೆಂದು ತೀರ್ಮಾನಿಸಿದ ಗಬ್ಬರ್ ಸಿಂಗ್ ನಿರ್ಮಾಪಕ ಬಾಂದ್ಲಾ ಗಣೇಶ್, ಚಿತ್ರದ ಮರುಬಿಡುಗಡೆಗೆ ನಿರ್ಧರಿಸಲಾಗಿದೆ. ಶೃತಿ ಹಾಸನ್ ಹಾಗೂ ಪವನ್ ಕಲ್ಯಾಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ, ಪಕ್ಕಾ ಕಮರ್ಷಿಯಲ್ ಮಾಸ್ ಸಿನಿಮಾವಾಗಿದ್ದು, ಅಭಿಮಾನಿಗಳಿಗೆ ಹೇಳಿ ಮಾಡಿಸಿದಂತಿದೆ. ಬಹಳ ಸಮಯದ ನಂತರ ದೊಡ್ಡ ಪರದೆಯ ಮೇಲೆ ಗಬ್ಬರ್ ಸಿಂಗ್​ನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

ಪ್ರಸ್ತುತ ಪವನ್ ಕಲ್ಯಾಣ್, ಮಲಯಾಳಂನ ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ತೆಲುಗು ರಿಮೇಕ್ ‘ಭೀಮ್ಲಾ ನಾಯಕ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಎರಡು ಟೀಸರ್​ಅನ್ನು ಚಿತ್ರತಂಡ ಈಗಾಗಲೇ ಬಿಡುಗಡೆಗೊಳಿಸಿದ್ದು, ಪವನ್ ಕಲ್ಯಾಣ್ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಭೀಮ್ಲಾ ನಾಯಕ್ ಟೀಸರ್ ಇಲ್ಲಿದೆ: ಪವನ್ ಕಲ್ಯಾಣ್ ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲೂ ಬಣ್ಣ ಹಚ್ಚುತ್ತಿದ್ದಾರೆ. ಐತಿಹಾಸಿಕ ಕಥಾನಕ ಹೊಂದಿರುವ ಈ ಚಿತ್ರದಲ್ಲಿ ಪವನ್ ಕಲ್ಯಾಣ್ ‘ವೀರಮಲ್ಲು’ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ 2022ರ ಜನವರಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಮುಂದುವರಿದಿದೆ ಶಿಲ್ಪಾ ಶೆಟ್ಟಿ ತಂಗಿಯ ಮುತ್ತಿನಾಟ; ‘ಈಗಲೇ ನನಗೆ ಕಿಸ್​ ಮಾಡು’ ಎಂದ ಶಮಿತಾ ವಿಡಿಯೋ ವೈರಲ್​

ನಾಗಾರ್ಜುನ ಜನ್ಮದಿನ: ಸ್ವಾರ್ಥಕ್ಕಾಗಿ ಪ್ರಕಾಶ್​ ರೈ ಪಾರ್ಟಿ? ಮಾ ಚುನಾವಣೆ ಹೊಸ್ತಿಲಲ್ಲಿ ಹೊಸ ಆರೋಪ

(Super hit movie Gabbar Singh will re release on Pawan Kalyan’s birthday)

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್