50ನೇ ಸಿನಿಮಾದಲ್ಲಿ ಕ್ರೂರಿಯಾದ ಧನುಷ್; ‘ರಾಯನ್’ ಟ್ರೇಲರ್​ನಲ್ಲಿ ರಕ್ತಪಾತ

ಧನುಷ್​ ಅವರು ‘ರಾಯನ್​’ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್​ ಅನಾವರಣ ಆಗಿದ್ದು, ಕಥೆಯ ಬಗ್ಗೆ ಸಣ್ಣ ಸುಳಿವು ಬಿಟ್ಟುಕೊಡಲಾಗಿದೆ. ಟ್ರೇಲರ್​ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿದ್ದಾರೆ. ಜು.26ರಂದು ‘ರಾಯನ್​’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಸದ್ಯಕ್ಕೆ ಟ್ರೇಲರ್​ ಸದ್ದು ಮಾಡುತ್ತಿದೆ.

50ನೇ ಸಿನಿಮಾದಲ್ಲಿ ಕ್ರೂರಿಯಾದ ಧನುಷ್; ‘ರಾಯನ್’ ಟ್ರೇಲರ್​ನಲ್ಲಿ ರಕ್ತಪಾತ
ಧನುಷ್
Follow us
|

Updated on: Jul 16, 2024 | 9:16 PM

ನಟ ಧನುಷ್​ ಅವರ 50ನೇ ಸಿನಿಮಾ ‘ರಾಯನ್​’ ಮೇಲೆ ಎಲ್ಲರಿಗೂ ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಈಗ ಟ್ರೇಲರ್​ ಬಿಡುಗಡೆ ಆಗಿದೆ. ಸ್ವತಃ ಧನುಷ್​ ಅವರೇ ಈ ಚಿತ್ರಕ್ಕೆ ನಿರ್ದೇಶನ ಕೂಡ ಮಾಡಿರುವುದರಿಂದ ಕುತೂಹಲ ಜಾಸ್ತಿ ಇದೆ. ಟ್ರೇಲರ್​ನಲ್ಲಿ ಧನುಷ್​ ಅಬ್ಬರಿಸಿದ್ದಾರೆ. ಈ ಚಿತ್ರದಿಂದ ಅವರಿಗೆ ಭರ್ಜರಿ ಗೆಲುವು ಸಿಗುವ ನಿರೀಕ್ಷೆ ದಟ್ಟವಾಗಿದೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಿದೆ. ‘ರಾಯನ್​’ ಸಿನಿಮಾದಲ್ಲಿ ಧನುಷ್​ ಅವರಿಗೆ ಸಂಪೂರ್ಣ ಮಾಸ್​ ಅವತಾರ ಇರಲಿದೆ ಎಂಬುದಕ್ಕೆ ಟ್ರೇಲರ್​ನಲ್ಲಿ ಸುಳಿವು ಸಿಕ್ಕಿದೆ.

50ನೇ ಸಿನಿಮಾ ಆದ್ದರಿಂದ ಧನುಷ್​ ಅವರು ತುಂಬ ಕಾಳಜಿ ವಹಿಸಿ ‘ರಾಯನ್’ ಚಿತ್ರದಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ಪಾತ್ರವರ್ಗ ಇದೆ. ಎಸ್​.ಜೆ. ಸೂರ್ಯ, ಪ್ರಕಾಶ್​ ರಾಜ್​, ಸೆಲ್ವರಾಘವನ್​, ಸಂದೀಪ್​ ಕಿಶನ್​, ಕಾಳಿದಾಸ್ ಜಯರಾಮ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಮುಖ್ಯ ಪಾತ್ರಗಳ ಝಲಕ್​ ಅನ್ನು ‘ರಾಯನ್​’ ಟ್ರೇಲರ್​ನಲ್ಲಿ ತೋರಿಸಲಾಗಿದೆ.

ಮುಗ್ಧ ಬಾಲಕನೊಬ್ಬ ಕ್ರೂರಿಯಾಗಿ ಬದಲಾಗುವ ಕಹಾನಿ ‘ರಾಯನ್​’ ಸಿನಿಮಾದಲ್ಲಿ ಇದೆ ಎಂಬ ಸುಳಿವು ನೀಡಲಾಗಿದೆ. ಬಾಲಕನಲ್ಲಿನ ಆ ಬದಲಾವಣೆಗೆ ಕಾರಣ ಏನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು. ಜುಲೈ 26ರಂದು ‘ರಾಯನ್​’ ಬಿಡುಗಡೆ ಆಗಲಿದೆ. ಟ್ರೇಲರ್​ನಲ್ಲಿ ಸಿನಿಮಾದ ಗುಣಮಟ್ಟ ಕಾಣಿಸಿದೆ. ಪ್ರೇಕ್ಷಕರು ಈ ಸಿನಿಮಾ ನೋಡಲು ಕಾದಿದ್ದಾರೆ.

ಇದನ್ನೂ ಓದಿ: ಒಂದು ಕೋಟಿ ರೂಪಾಯಿ ದೇಣಿಗೆಯನ್ನು ಕಾರ್ತಿ ಕೈಗೆ ನೀಡಿದ ನಟ ಧನುಷ್​

‘ಸನ್​ ಪಿಕ್ಚರ್ಸ್​’ ಮೂಲಕ ‘ರಾಯನ್​’ ಸಿನಿಮಾ ನಿರ್ಮಾಣ ಆಗಿದೆ. ತಮಿಳು, ತೆಲುಗು, ಹಿಂದಿ ವರ್ಷನ್​ನಲ್ಲಿ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಓಂ ಪ್ರಕಾಶ್​ ಛಾಯಾಗ್ರಹಣ, ಎ.ಆರ್​. ರೆಹಮಾನ್​ ಅವರ ಸಂಗೀತ ನಿರ್ದೇಶನ ಈ ಸಿನಿಮಾಗೆ ಇದೆ. 2024ರ ಆರಂಭದಲ್ಲಿ ಧನುಷ್​ ನಟನೆಯ ‘ಕ್ಯಾಪ್ಟನ್​ ಮಿಲ್ಲರ್​’ ಸಿನಿಮಾ ಬಿಡುಗಡೆಯಾಗಿ ಸೋಲು ಕಂಡಿತ್ತು. ಈಗ ಅವರು ‘ರಾಯನ್​’ ಸಿನಿಮಾ ಮೂಲಕ ಗೆಲ್ಲುವ ಸೂಚನೆ ಕಾಣಿಸಿದೆ. ಟ್ರೇಲರ್ ನೋಡಿದ ಅಭಿಮಾನಿಗಳು ಪಾಸಿಟಿವ್​ ಕಮೆಂಟ್​ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ದರ್ಶನ್​ಗಾಗಿ ಜೈಲು ಅಧಿಕಾರಿಗಳ ಕರ್ತವ್ಯ ಲೋಪ; ಗೃಹ ಸಚಿವರಿಗೆ ಪ್ರಶ್ನೆಯ ಮಳೆ
ದರ್ಶನ್​ಗಾಗಿ ಜೈಲು ಅಧಿಕಾರಿಗಳ ಕರ್ತವ್ಯ ಲೋಪ; ಗೃಹ ಸಚಿವರಿಗೆ ಪ್ರಶ್ನೆಯ ಮಳೆ
ಬಡವರ ಬಗ್ಗೆ ಮಾತಾಡುವ ನೈತಿಕತೆ ಪ್ರಲ್ಹಾದ್ ಜೋಶಿಗಿಲ್ಲ: ಸಿದ್ದರಾಮಯ್ಯ
ಬಡವರ ಬಗ್ಗೆ ಮಾತಾಡುವ ನೈತಿಕತೆ ಪ್ರಲ್ಹಾದ್ ಜೋಶಿಗಿಲ್ಲ: ಸಿದ್ದರಾಮಯ್ಯ
ಜೈಲೊಳಗಿನ ಅವ್ಯವಹಾರಗಳಲ್ಲಿ ಉನ್ನತಾಧಿಕಾರಿಗಳು ಶಾಮೀಲು: ಆನೇಕಲ್ ನಿವಾಸಿ
ಜೈಲೊಳಗಿನ ಅವ್ಯವಹಾರಗಳಲ್ಲಿ ಉನ್ನತಾಧಿಕಾರಿಗಳು ಶಾಮೀಲು: ಆನೇಕಲ್ ನಿವಾಸಿ
ಎಚ್ಚರಿಕೆ ನೀಡಿದರೂ ಮೀನು ಹಿಡಿಯಲು ನೀರಿಗೆ ಇಳಿದ ಮೀನುಗಾರರು
ಎಚ್ಚರಿಕೆ ನೀಡಿದರೂ ಮೀನು ಹಿಡಿಯಲು ನೀರಿಗೆ ಇಳಿದ ಮೀನುಗಾರರು
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಪರಾಧ ಹೆಚ್ಚಿವೆ: ಆರ್ ಅಶೋಕ
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಅಪರಾಧ ಹೆಚ್ಚಿವೆ: ಆರ್ ಅಶೋಕ
ಇನ್ಫಿನಿಕ್ಸ್ ಲೇಟೆಸ್ಟ್ Infinix Buds Neo ಮತ್ತು Infinix XE27 ಬಿಡುಗಡೆ
ಇನ್ಫಿನಿಕ್ಸ್ ಲೇಟೆಸ್ಟ್ Infinix Buds Neo ಮತ್ತು Infinix XE27 ಬಿಡುಗಡೆ
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ತಮ್ಮ ಕೋಪಕ್ಕೆ ಮಾಧ್ಯಮದವರು ಕ್ಯಾರೆ ಅನ್ನದಾಗ ಪರಮೇಶ್ವರ್ ಮೆತ್ತಗಾದರು!
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಬಾಗಲಕೋಟೆ: ಮೃತ ಮಹಾದೇವಿ ಪೋಷಕರಿಗೆ ಮಹಿಳಾ ಆಯೋಗದ ಅಧ್ಯಕ್ಷೆಯಿಂದ ಸಾಂತ್ವನ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
ಮಂತ್ರಾಲಯದ ರಾಯರ ಮಠದಲ್ಲಿ 350 ಕಲಾವಿದರಿಂದ ರಾಮಾಯಣಂ ಗೀತಗೆ ನೃತ್ಯ, ದಾಖಲೆ
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್
VIDEO: ಸಿಟ್ಟಿನಿಂದ ರಿಝ್ವಾನ್​ನತ್ತ ಚೆಂಡೆಸೆದ ಶಕೀಬ್ ಅಲ್ ಹಸನ್