AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಟ್ರವರ್ಸಿ ಮೂಲಕ ಸುದ್ದಿ ಆದ ಧ್ರುವಂತ್ ದೊಡ್ಮನೆಗೆ; ಮಾಡಿಕೊಂಡ ವಿವಾದ ಏನು?

ಮಂಗಳೂರು ಮೂಲದ ಬಿಗ್ ಬಾಸ್ ಸ್ಪರ್ಧಿ ಧ್ರುವಂತ್ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಕಳೆದ ವರ್ಷ ಲೈಂಗಿಕ ಕಿರುಕುಳ ಆರೋಪದ ವಿವಾದದಿಂದ ಸುದ್ದಿಯಾಗಿದ್ದ ಇವರು, ಬಿಗ್ ಬಾಸ್ ವೇದಿಕೆಯಲ್ಲೇ ಆ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರೂ ಈ ಕುರಿತು ಎಚ್ಚರಿಕೆ ನೀಡಿದ್ದು, ವಿವಾದಗಳನ್ನು ಹೇಗೆ ನಿಭಾಯಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಕಾಂಟ್ರವರ್ಸಿ ಮೂಲಕ ಸುದ್ದಿ ಆದ ಧ್ರುವಂತ್ ದೊಡ್ಮನೆಗೆ; ಮಾಡಿಕೊಂಡ ವಿವಾದ ಏನು?
Dhruvanth (1)
ರಾಜೇಶ್ ದುಗ್ಗುಮನೆ
|

Updated on: Sep 28, 2025 | 9:57 PM

Share

ಮಂಗಳೂರು ಮೂಲದ ಧ್ರುವಂತ್ ಅವರು ದೊಡ್ಮನೆಗೆ ಬಂದಿದ್ದಾರೆ. ಅವರು ಈ ಮೊದಲು ವಿವಾದದ ಮೂಲಕ ಸುದ್ದಿ ಆಗಿದ್ದರು. ಆದರೆ, ಆ ವಿವಾದದ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಈಗ ಅವರು ಬಿಗ್ ಬಾಸ್ ವೇದಿಕೆ ಏರುವಾಗ ಕಾಂಟ್ರವರ್ಸಿ ಬಗ್ಗೆ ಮಾತನಾಡಿದ್ದಾರೆ. ಸುದೀಪ್ ಅವರು ಈ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ.

‘ನಾನು ಹುಟ್ಟಿದ್ದು ಮಂಗಳೂರು. ಬೆಳೆದಿದ್ದು ಕೊಡಗಿನಲ್ಲಿ. ಐಟಿ ಕಂಪನಿ ಜಾಬ್ ಮಾಡಿದೆ. ಇಲ್ಲಿಗೆ ಸೇರಿದವವನು ಅಲ್ಲ ಅಂತ ಅನಿಸಿತು. ಕಲೆ ಬಗ್ಗೆ ಆಸಕ್ತಿ ಮೂಡಿತು. ಹೀಗೆ ಬಣ್ಣದ ಲೋಕಕ್ಕೆ ಬಂದು ಕಲಾ ಸೇವೆ ಮಾಡುತ್ತಿದ್ದೇನೆ. ಏನೇ ಬಂದರೂ ಹೆದರಲ್ಲ’ ಎಂದು ಹೇಳಿದ್ದಾರೆ.

ಇದನ್ನೂ ಓದಿ
Image
‘ಹೀಗೆನೆ ಹನುಮಂತ ಗೆದ್ರು’; ಲುಂಗಿ ಉಟ್ಟು ಬಂದ ಗಿಲ್ಲಿಗೆ ಸುದೀಪ್ ಕೌಂಟರ್
Image
‘ಬಿಗ್ ಬಾಸ್’ಗೆ ಮಂಗಳೂರಿನ ರಕ್ಷಿತಾ ಎಂಟ್ರಿ; ಮಾತು ಕೇಳಿ ಸುದೀಪ್ ಶಾಕ್
Image
ಊಹಿಸಿದ್ದಕ್ಕಿಂತ ಹೆಚ್ಚಿನ ಸ್ಪರ್ಧಿಗಳು ಬಿಗ್ ಬಾಸ್​ಗೆ ಎಂಟ್ರಿ
Image
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

‘ಮುದ್ದು ಲಕ್ಷ್ಮೀ’ ಧಾರಾವಾಹಿಯಲ್ಲಿ ನಟಿಸಿದ ಇವರು, ವಿವಾದದ ಮೂಲಕ ಸುದ್ದಿ ಆಗಿದ್ದರು. ಈ ಬಗ್ಗೆ ಸುದೀಪ್ ಅವರು ವೇದಿಕೆ ಮೇಲೆ ಚರ್ಚೆ ಮಾಡಿದರು. ‘ನೀವು ಹೊರಗೆ ವಿವಾದದ ಮೂಲಕ ಸುದ್ದಿ ಆದಿರಿ. ಈಗ ಒಳಗಡೆ ಬೇರೆ ರೀತಿಯ ವಿವಾದ ಆಗಬಹುದು. ಅದನ್ನು ಹೇಗೆ ಮ್ಯಾನೇಜ್ ಮಾಡ್ತೀರಾ’ ಎಂದು ಕೇಳಿದರು ಸುದೀಪ್. ‘ಹೊರಗೆ ವಿವಾದವನ್ನು ಹೇಗೋ ಮ್ಯಾನೇಜ್ ಮಾಡಬಹುದು. ಒಳಗಿನ ವಿವಾದವನ್ನು ಮ್ಯಾನೇಜ್ ಮಾಡೋದು ಕಷ್ಟ ಆಗಬಹುದು’ ಎಂದು ಧ್ರುವಂತ್ ಹೇಳಿದ್ದಾರೆ.

ಇದನ್ನೂ ಓದಿ: ‘ನಂಗೆ ಈ ರೀತಿಯಲ್ಲಿ ಬಿಗ್ ಬಾಸ್ ಆರಂಭಿಸೋಕೆ ಇಷ್ಟ ಇಲ್ಲ’; ನೇರವಾಗಿ ಹೇಳಿದ ಸುದೀಪ್

ವಿವಾದ ಏನು?

ಧ್ರುವಂತ್ ಅವರು 2024ರ ಡಿಸೆಂಬರ್​ನಲ್ಲಿ ಸುದ್ದಿ ಆದರು. ಅವರು 29 ವರ್ಷದ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸಿದರು. ಈ ಪ್ರಕರಣದಲ್ಲಿ ಅವರು ಅರೆಸ್ಟ್ ಕೂಡ ಆದರು. ಈ ಆರೋಪವನ್ನು ಅವರು ತಳ್ಳಿ ಹಾಕಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ
ರಂಗೋಲಿಯಲ್ಲಿ ಅರಳಿದ ಶಿವ: ಡ್ರೋಣ್ ನಲ್ಲಿ ಶಿವನ ಚಿತ್ರ ಸೆರೆ
ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ
ಪಾಕ್ ನಾಯಕನೊಂದಿಗೆ ವಿಶ್ವಕಪ್​ನಲ್ಲೂ ಕೈಕುಲುಕುದ ಸೂರ್ಯ
ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ
ಇಶಾ ಫೌಂಡೇಷನ್​​ನಲ್ಲಿ ಅದ್ದೂರಿ ಶಿವರಾತ್ರಿ ಸಂಭ್ರಮ; ನೇರ ಪ್ರಸಾರ ಇಲ್ಲಿದೆ
50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ
50ನೇ ಸಿನಿಮಾ ‘ಕಿಂಗ್’ ಬಗ್ಗೆ ಲೂಸ್ ಮಾದ ಯೋಗಿ ಮಾತು: ವಿಡಿಯೋ ನೋಡಿ
ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಕರಾವಳಿ ಯುವತಿಯರೇ ಟಾರ್ಗೆಟ್: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಜನ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಬಲಿಷ್ಠ ಸ್ಥಿತಿಯಲ್ಲಿ ಕರ್ನಾಟಕ
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ರಣಜಿ ಟ್ರೋಫಿ ಸೆಮಿಫೈನಲ್; ಸತತ 2ನೇ ಶತಕ ಸಿಡಿಸಿದ ರಾಹುಲ್
ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ
ಕುಟುಂಬ ಸಮೇತ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ರಿಷಬ್ ಶೆಟ್ಟಿ; ವಿಡಿಯೋ
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP
ಗಂಡನ ಸ್ನೇಹಿತನ ಮನೇಲಿ ಸಿಕ್ಕಿಬಿದ್ದ ಆಂಟಿ: ಶಾಕಿಂಗ್ ಕಾರಣ ಬಿಚ್ಚಿಟ್ಟ SP