ಅಪ್ಪನನ್ನೇ ಮನೆ ಬಾಗಿಲ ಮುಂದೆ ಗಂಟೆಗಟ್ಟಲೆ ಕಾಯಿಸಿದ್ರಾ ನಟ ವಿಜಯ್​? ತಂದೆಯಿಂದಲೇ ಸಿಕ್ತು ಸ್ಪಷ್ಟನೆ

‘ನನ್ನ ಮತ್ತು ಮಗನ ನಡುವೆ ಮನಸ್ತಾಪ ಇರುವುದು ನಿಜ. ಆದರೆ ತಾಯಿಯ ಜೊತೆ ವಿಜಯ್​ ಚೆನ್ನಾಗಿ ಇದ್ದಾರೆ. ಯಾವ ಕುಟುಂಬದಲ್ಲಿ ಜಗಳಗಳು ಇರುವುದಿಲ್ಲ ಹೇಳಿ’ ಎಂದು ಎಸ್​ಎ ಚಂದ್ರಶೇಖರ್​ ಪ್ರಶ್ನಿಸಿದ್ದಾರೆ.

ಅಪ್ಪನನ್ನೇ ಮನೆ ಬಾಗಿಲ ಮುಂದೆ ಗಂಟೆಗಟ್ಟಲೆ ಕಾಯಿಸಿದ್ರಾ ನಟ ವಿಜಯ್​? ತಂದೆಯಿಂದಲೇ ಸಿಕ್ತು ಸ್ಪಷ್ಟನೆ
ದಳಪತಿ ವಿಜಯ್, ಎಸ್ಎ ಚಂದ್ರಶೇಖರ್
Edited By:

Updated on: Sep 30, 2021 | 1:49 PM

ಕಾಲಿವುಡ್​ ನಟ ವಿಜಯ್​ ಅವರ ಕುಟುಂಬದಲ್ಲಿ ವೈಮನಸ್ಸು ಮೂಡಿದೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ವಿಜಯ್​ ತಂದೆ ಎಸ್​ಎ ಚಂದ್ರಶೇಖರ್​ ಅವರು ರಾಜಕೀಯ ಉದ್ದೇಶಕ್ಕೆ ತಮ್ಮ ಮಗನ ಹೆಸರು ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದು ವಿಜಯ್​ಗೆ ಕಿಂಚಿತ್ತೂ ಇಷ್ಟ ಆಗುತ್ತಿಲ್ಲ. ಹಾಗಾಗಿ ಅವರು ತಂದೆಗೆ ಲೀಗಲ್​ ನೋಟೀಸ್​ ಕಳಿಸಿದ್ದರ ಬಗ್ಗೆ ಇತ್ತೀಚೆಗೆ ಸುದ್ದಿ ಆಗಿತ್ತು. ಅಲ್ಲದೇ, ಸ್ವಂತ ತಂದೆ-ತಾಯಿಯನ್ನು ಮನೆ ಹೊರಗೆ ಗಂಟೆಗಟ್ಟಲೆ ಕಾಯುವಂತೆ ಮಾಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಅದರ ಬಗ್ಗೆ ಸ್ವತಃ ಎಸ್​ಎ ಚಂದ್ರಶೇಖರ್​ ಸ್ಪಷ್ಟನೆ ನೀಡಿದ್ದಾರೆ.

ವಿಜಯ್​ ತಂದೆ ಎಸ್​ಎ ಚಂದ್ರಶೇಖರ್​ ಮತ್ತು ತಾಯಿ ಶೋಭಾ ಅವರು ಮಗನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಮನಸ್ತಾಪ ಬಗೆಹರಿಸಿಕೊಳ್ಳುವ ಸಲುವಾಗಿ ಮಗನನ್ನು ಭೇಟಿಯಾಗಲು ಅವರ ಅವರಿಬ್ಬರು ತೆರಳಿದ್ದರು. ಆದರೆ ಹಲವು ಗಂಟೆಗಳ ಕಾಲ ಮನೆ ಬಾಗಿಲಿನಲ್ಲೇ ಅವರಿಬ್ಬರನ್ನೂ ವಿಜಯ್ ಕಾಯಿಸಿದ್ದೂ ಅಲ್ಲದೇ, ‘ಅಮ್ಮನನ್ನು ಮಾತ್ರ ಭೇಟಿ ಆಗುತ್ತೇನೆ, ಅಪ್ಪನನ್ನು ಭೇಟಿ ಮಾಡುವುದಿಲ್ಲ’ ಅಂತ ಅವರು ಹೇಳಿದರು ಎಂದೆಲ್ಲ ಸುದ್ದಿ ಹರಿದಾಡಿದೆ. ಅದೆಲ್ಲ ಸುಳ್ಳು ಎಂದು ಎಸ್​ಎ ಚಂದ್ರಶೇಖರ್​ ಸ್ಪಷ್ಟನೆ ನೀಡಿದ್ದಾರೆ.​

‘ನನ್ನ ಮತ್ತು ಮಗನ ನಡುವೆ ಮನಸ್ತಾಪ ಇರುವುದು ನಿಜ. ಆದರೆ ತಾಯಿಯ ಜೊತೆ ವಿಜಯ್​ ಚೆನ್ನಾಗಿ ಇದ್ದಾರೆ. ಯಾವ ಕುಟುಂಬದಲ್ಲಿ ಜಗಳಗಳು ಇರುವುದಿಲ್ಲ ಹೇಳಿ’ ಎಂದು ಚಂದ್ರಶೇಖರ್​ ಪ್ರಶ್ನಿಸಿದ್ದಾರೆ. ತಮ್ಮ ಸೋಶಿಯಲ್​ ಮೀಡಿಯಾ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಅವರು ಈ ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ.

ವಿಜಯ್​ ಹೆಸರು ಮತ್ತು ಅವರ​ ಅಭಿಮಾನಿ ಸಂಘಗಳ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡಲು ಎಸ್​.ಎ. ಚಂದ್ರಶೇಖರ್​ ಪ್ಲ್ಯಾನ್​ ಮಾಡಿದ್ದರು. ಈ ವಿಚಾರ ವಿಜಯ್​ಗೆ ಬೇಸರ ತರಿಸಿತ್ತು. ಹಾಗಾಗಿ ತಂದೆ ವಿರುದ್ಧವೇ ಅವರು ಕೋರ್ಟ್​ ಮೆಟ್ಟಿಲು ಹತ್ತಿದ್ದರು. ಲೀಗಲ್​ ನೋಟೀಸ್​ ಕೂಡ ಕಳಿಸಿದ್ದರು. ಆ ಬಳಿಕ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್​ ಅವರು ‘ವಿಜಯ್​ ಮಕ್ಕಳ್​ ಇಯಕಂ’ ಸಂಘಟನೆಯನ್ನು ರದ್ದು ಮಾಡಲಾಗಿದೆ ಎಂದು ಹೇಳಿದ್ದಾರೆ. ನಿರ್ದೇಶಕರೂ ಆಗಿರುವ ಚಂದ್ರಶೇಖರ್​ ಅವರು ‘ನಾನ್​ ಕಡವುಳ್​ ಇಲ್ಲೈ’ ಸಿನಿಮಾ ಮೂಲಕ ಕಮ್​ಬ್ಯಾಕ್​ ಮಾಡುತ್ತಿದ್ದಾರೆ.

ಇದನ್ನೂ ಓದಿ:

ದಳಪತಿ ವಿಜಯ್​ ಮತ್ತು ಮಹೇಶ್​ ಬಾಬು ಪತ್ನಿ ನಮ್ರತಾ ಹಳೇ ವಿಚಾರ ಎಳೆದು ತಂದ ಫ್ಯಾನ್ಸ್​

ಧೋನಿ ಜೊತೆ ದಳಪತಿ ವಿಜಯ್​ ಫೋಟೋ ವೈರಲ್​; ಈ ಸಡನ್​ ಭೇಟಿಗೆ ಕಾರಣ ಏನು?