AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧೋನಿ ಜೊತೆ ದಳಪತಿ ವಿಜಯ್​ ಫೋಟೋ ವೈರಲ್​; ಈ ಸಡನ್​ ಭೇಟಿಗೆ ಕಾರಣ ಏನು?

MS Dhoni: ನಟ ದಳಪತಿ ವಿಜಯ್​ ಅವರು ‘ಬೀಸ್ಟ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅಲ್ಲಿಯೇ ಧೋನಿಯನ್ನು ಅವರು ಭೇಟಿ ಮಾಡಿದ್ದಾರೆ.

ಧೋನಿ ಜೊತೆ ದಳಪತಿ ವಿಜಯ್​ ಫೋಟೋ ವೈರಲ್​; ಈ ಸಡನ್​ ಭೇಟಿಗೆ ಕಾರಣ ಏನು?
ಧೋನಿ ಜೊತೆ ಹೊರಾಂಗಣದಲ್ಲಿ ದಳಪತಿ ವಿಜಯ್​
TV9 Web
| Edited By: |

Updated on: Aug 12, 2021 | 3:37 PM

Share

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ.ಎಸ್​. ಧೋನಿ (MS Dhoni) ಅವರಿಗೆ ಸಿನಿಮಾ ಕ್ಷೇತ್ರದ ಜೊತೆ ಸಖತ್​ ನಂಟು ಇದೆ. ಮೊದಲಿನಿಂದಲೂ ಅವರು ಸಿನಿತಾರೆಯರ ಜೊತೆ ಗುರುತಿಸಿಕೊಳ್ಳುತ್ತಾ ಬಂದಿದ್ದಾರೆ. ಅಲ್ಲದೆ, ಅವರ ಜೀವನಾಧಾರಿತ ಸಿನಿಮಾ ‘ಎಂ.ಎಸ್​. ಧೋನಿ: ದಿ ಅನ್​ಟೋಲ್ಡ್​ ಸ್ಟೋರಿ’ ಸೂಪರ್​ ಹಿಟ್​ ಆದ ಬಳಿಕ ಚಿತ್ರರಂಗದ ಜೊತೆ ಅವರ ಸಂಪರ್ಕ ಇನ್ನಷ್ಟು ಹೆಚ್ಚಿತು. ಹಾಗಂತ ಈ ಸ್ನೇಹ-ಸಂಬಂಧ ಬಾಲಿವುಡ್​ ಮಂದಿಗಷ್ಟೇ ಸೀಮಿತವಲ್ಲ. ದಕ್ಷಿಣ ಭಾರತದ ಸ್ಟಾರ್​ ಕಲಾವಿದರ ಜೊತೆಗೂ ಧೋನಿ ಆತ್ಮೀಯವಾಗಿದ್ದಾರೆ. ಇತ್ತೀಚೆಗೆ ದಳಪತಿ ವಿಜಯ್ (Thalapathy Vijay)​ ಅವರನ್ನು ಧೋನಿ ಸಡನ್​ ಆಗಿ ಭೇಟಿ ಮಾಡಿದ್ದಾರೆ.

ಧೋನಿ ಮತ್ತು ದಳಪತಿ ವಿಜಯ್​ ಏಕಾಏಕಿ ಭೇಟಿ ಮಾಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಚೆನ್ನೈನ ಖಾಸಗಿ ಸ್ಟುಡಿಯೋದಲ್ಲಿ ಈ ಘಟಾನುಘಟಿಗಳು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ. ಇಬ್ಬರೂ ಜೊತೆಯಾಗಿ ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಅವು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಈಗಾಗಲೇ ತಿಳಿದಿರುವಂತೆ ನಟ ದಳಪತಿ ವಿಜಯ್​ ಅವರು ‘ಬೀಸ್ಟ್​’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಚೆನ್ನೈನ ಗೋಕುಲಂ ಸ್ಟುಡಿಯೋದಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಅದೇ ಸ್ಟುಡಿಯೋದಲ್ಲಿ ಧೋನಿ ಅವರು ಒಂದು ಜಾಹೀರಾತಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಒಂದೇ ಸ್ಟುಡಿಯೋದಲ್ಲಿ ತಾವಿಬ್ಬರೂ ಇರುವುದು ಗೊತ್ತಾದ ಬಳಿಕ ಭೇಟಿಯಾಗಲು ನಿರ್ಧರಿಸಿದರು ಎನ್ನಲಾಗಿದೆ. ಅದೇನೇ ಇರಲಿ, ತಮ್ಮ ನೆಚ್ಚಿನ ಸೆಲೆಬ್ರಿಟಿಗಳನ್ನು ಒಂದೇ ಫ್ರೇಮ್​ನಲ್ಲಿ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಇನ್ನು, ಎಂ.ಎಸ್​. ಧೋನಿ ಅವರಿಗೆ ಚೆನ್ನೈ ಮೇಲೆ ವಿಶೇಷ ಒಲವು. ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಅವರು ಹಲವು ವರ್ಷಗಳಿಂದ ಮುನ್ನಡೆಸುತ್ತಿದ್ದಾರೆ. ಆ ಕಾರಣದಿಂದ ಅವರಿಗೆ ಚೆನ್ನೈ ಎಂದರೆ ಎರಡನೇ ಮನೆ ಇದ್ದಂತೆ. ಹಾಗಾಗಿ ತಮಿಳುನಾಡಿನ ಜನರು ಕೂಡ ಧೋನಿ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿದ್ದಾರೆ. ಪ್ರತಿ ಭಾರಿ ಚೆನ್ನೈಗೆ ಬಂದಾಗ ಅಲ್ಲಿನ ಕೆಲವು ಸ್ನೇಹಿತರನ್ನು ಧೋನಿ ತಪ್ಪದೇ ಭೇಟಿ ಮಾಡುತ್ತಾರೆ.

ಅನೇಕ ಪ್ರತಿಷ್ಠಿತ ಕಂಪನಿಗಳಿಗೆ ಧೋನಿ ರಾಯಭಾರಿ ಆಗಿದ್ದಾರೆ. ಆ ಕಾರಣಕ್ಕಾಗಿ ಅವರು ಹಲವು ಜಾಹೀರಾತುಗಳಲ್ಲಿ ನಟಿಸುತ್ತಿರುತ್ತಾರೆ. ಇತ್ತೀಚೆಗೆ ಅವರ ಹೊಸ ಹೇರ್​ಸ್ಟೈಲ್​ ಸಖತ್​ ವೈರಲ್​ ಆಗಿತ್ತು. ಅದನ್ನು ನೋಡಿದ ಬಾಲಿವುಡ್​ ಖಳನಟ ಗುಲ್ಶನ್​ ಗ್ರೋವರ್​ ಅವರು ಧೋನಿಗೆ ತಮಾಷೆಯಾಗಿ ಒಂದು ಟ್ವೀಟ್​ ಮಾಡಿದ್ದರು. ‘ದಯವಿಟ್ಟು ಡಾನ್​ ಪಾತ್ರಗಳನ್ನು ಒಪ್ಪಿಕೊಳ್ಳಬೇಡಿ. ಒಪ್ಪಿಕೊಂಡು ನನ್ನ ಹೊಟ್ಟೆ ಮೇಲೆ ಹೊಡೆಯಬೇಡಿ’ ಎಂದು ಅವರು ಪೋಸ್ಟ್​ ಮಾಡಿದ್ದರು.

ಇದನ್ನೂ ಓದಿ:

ನಟ ದಳಪತಿ ವಿಜಯ್​ಗೆ ವಿಧಿಸಿದ್ದ 1 ಲಕ್ಷ ರೂ. ದಂಡಕ್ಕೆ ಮದ್ರಾಸ್​ ಹೈಕೋರ್ಟ್​ ತಡೆ

ದಳಪತಿ ವಿಜಯ್​ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರು; ಹಾಗಾದ್ರೆ ಈ ನಟನ ಒಟ್ಟು ಆಸ್ತಿ ಎಷ್ಟು?