Thalapathy Vijay: ದಳಪತಿ ವಿಜಯ್​ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರು; ಹಾಗಾದ್ರೆ ಈ ನಟನ ಒಟ್ಟು ಆಸ್ತಿ ಎಷ್ಟು?

Thalapathy Vijay Birthday: ವಿಜಯ್​ಗೆ ಕಾರುಗಳ ಬಗ್ಗೆ ಅಪಾರ ಕ್ರೇಜ್​ ಇದೆ. ಅವರ ಕಲೆಕ್ಷನ್​ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಅಂದಾಜು 6 ಕೋಟಿ ರೂ. ಬೆಲೆ ಬಾಳುವ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರು ಅವರ ಮನೆಯಲ್ಲಿದೆ.

Thalapathy Vijay: ದಳಪತಿ ವಿಜಯ್​ ಬಳಿ ಇದೆ ಬಹುಕೋಟಿ ಬೆಲೆಯ ಹಲವು ಕಾರು; ಹಾಗಾದ್ರೆ ಈ ನಟನ ಒಟ್ಟು ಆಸ್ತಿ ಎಷ್ಟು?
ದಳಪತಿ ವಿಜಯ್​
Follow us
|

Updated on: Jun 22, 2021 | 9:08 AM

ತಮಿಳು ಚಿತ್ರರಂಗದ ಸ್ಟಾರ್​ ನಟ ದಳಪತಿ ವಿಜಯ್​ ಅವರಿಗೆ ಇಂದು (ಜೂ.22) ಹುಟ್ಟುಹಬ್ಬ. ಅವರು 47ನೇ ವರ್ಷಕ್ಕೆ ಕಾಲಿಟ್ಟಿದ್ದು, ಅಭಿಮಾನಿಗಳು ಸೋಶಿಯಲ್​ ಮೀಡಿಯಾದಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಚಿತ್ರರಂಗಕ್ಕೆ ಬಂದು ಮೂರು ದಶಕ ಕಳೆದರೂ, ಇಂದಿಗೂ ಸ್ಟಾರ್​ ಆಗಿ ಮಿಂಚುತ್ತಿದ್ದಾರೆ ವಿಜಯ್​. ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿನಲ್ಲಿ ವಿಜಯ್​ ಕೂಡ ಇದ್ದಾರೆ. ಅವರ ಬಳಿ ಬಹುಕೋಟಿ ರೂ. ಬೆಲೆಯ ಹಲವಾರು ಕಾರುಗಳಿವೆ.

ದಳಪತಿ ವಿಜಯ್ ಅವರು 410 ಕೋಟಿ ರೂ. ಆಸ್ತಿಯ ಒಡೆಯ ಎನ್ನಲಾಗಿದೆ. ಇದು ಅವರ ನೆಟ್​ ವರ್ತ್​. ಪ್ರತಿ ಸಿನಿಮಾಗೂ ಅವರು ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಾರೆ. ಅದರಲ್ಲೂ 2019ರಿಂದ ಈಚೆಗೆ ಅವರ ಚಾರ್ಮ್​ ಹೆಚ್ಚಿದೆ. ಅವರ ವಾರ್ಷಿಕ ಆದಾಯ 100ರಿಂದ 120 ಕೋಟಿ ಆಗಿದೆ ಎಂಬ ಮಾಹಿತಿ ಇದೆ.

ಸಿನಿಮಾಗಳಿಂದ ಮಾತ್ರವಲ್ಲದೆ ಅನೇಕ ಕಂಪನಿಗಳ ಜಾಹೀರಾತುಗಳಲ್ಲೂ ನಟಿಸುವ ಮೂಲಕವೂ ವಿಜಯ್​ ಹಣ ಸಂಪಾದಿಸುತ್ತಾರೆ. ಪ್ರತಿ ವರ್ಷ ಜಾಹೀರಾತುಗಳಿಂದಲೇ ಅವರಿಗೆ ಅಂದಾಜು 10 ಕೋಟಿ ರೂ. ಸಿಗುತ್ತದೆ. ಕೊಕಕೋಲಾ, ಚೆನ್ನೈ ಸೂಪರ್​ ಕಿಂಗ್ಸ್​ ಮುಂತಾದವುಗಳಿಗೆ ಅವರು ರಾಯಭಾರಿ ಆಗಿದ್ದಾರೆ.

ವಿಜಯ್​ಗೆ ಕಾರುಗಳ ಬಗ್ಗೆ ಅಪಾರ ಕ್ರೇಜ್​ ಇದೆ. ಅವರ ಕಲೆಕ್ಷನ್​ನಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಅಂದಾಜು 6 ಕೋಟಿ ರೂ. ಬೆಲೆ ಬಾಳುವ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರು ಅವರ ಮನೆಯಲ್ಲಿದೆ. ಜೊತೆಗೆ 1.30 ಕೋಟಿ ಬೆಲೆಯ ಆಡಿ ಎ8, 75 ಲಕ್ಷ ಬೆಲೆ ಬಿಎಂಡಬ್ಲ್ಯೂ, 90 ಲಕ್ಷದ ಬಿಎಂಡಬ್ಲ್ಯೂ ಎಕ್ಸ್​6, 35 ಲಕ್ಷ ಬೆಲೆ ಬಾಳುವ ಮಿನಿ ಕೂಪರ್​ ಮುಂತಾದ ಕಾರುಗಳನ್ನು ವಿಜಯ್ ಹೊಂದಿದ್ದಾರೆ.

ಪ್ರಸ್ತುತ ವಿಜಯ್​ ಅವರು ತಮ್ಮ 65ನೇ ಸಿನಿಮಾದತ್ತ ಗಮನ ಹರಿಸಿದ್ದಾರೆ. ಈ ಚಿತ್ರಕ್ಕೆ ಬೀಸ್ಟ್​ ಎಂದು ಹೆಸರು ಇಡಲಾಗಿದ್ದು, ಅವರ ಬರ್ತ್​ಡೇ ಪ್ರಯುಕ್ತ ಈ ಸಿನಿಮಾದ ಫಸ್ಟ್​ಲುಕ್​ ಬಿಡುಗಡೆ ಆಗಿದೆ. ಈ ಚಿತ್ರಕ್ಕಾಗಿ ವಿಜಯ್​ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಇದನ್ನೂ ಓದಿ:

Happy Birthday Vijay: ದಳಪತಿ ವಿಜಯ್​ ಹುಟ್ಟುಹಬ್ಬ; ನೋಡಲೇಬೇಕಾದ 5 ಸಿನಿಮಾಗಳು ಯಾವವು?

‘ಬೀಸ್ಟ್’​ ಅವತಾರದಲ್ಲಿ ದಳಪತಿ ವಿಜಯ್​; ಹೊಸ ಲುಕ್​ ನೋಡಿ ಫ್ಯಾನ್ಸ್​ ಫಿದಾ

ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಬೇಲೂರಿನಲ್ಲಿ ಮಿತಿಮೀರಿದ ಬೀಟಮ್ಮ ಗ್ಯಾಂಗ್ ಹಾವಳಿ
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಮೈಸೂರಿನಲ್ಲಿ ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು
ಬಂಟ್ವಾಳದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಭಾವೈಕ್ಯತೆ ಮೆರೆದ ಹಿಂದೂಗಳು