ಮುಚ್ಕೊಳ್ಳಲಿಲ್ಲಾ ಅಂದ್ರೆ ಕಚ್ಕೊಳ್ಳೋದು ಗ್ಯಾರಂಟಿ ಅಂತಿದ್ದಾರೆ ಇವರೆಲ್ಲ..; ಯಾಕೆ ಮುಚ್ಕೊಳ್ಳಬೇಕು? ಏನು ಚುಚ್ಚಿಸಿಕೊಳ್ಳಬೇಕು? ತಿಳಿಯಲು ವಿಡಿಯೋ ನೋಡಿ..!

ಪ್ರಾದೇಶಿಕ ಭಾಷೆಯಲ್ಲಿ ಹೀಗೆ ಮಾಸ್ಕ್​ ಬಗ್ಗೆ ಅಭಿಯಾನ ನಡೆಸಿದ ಮೊದಲ ಪ್ರಯತ್ನ ಇದಾಗಿದೆ. ಹಾಗೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಡಿಯೋವನ್ನು ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘ ಅನುಮೋದಿಸಿದೆ. ಹಾಗೇ, ಇದಕ್ಕೆ ಯಾವುದೇ ಎನ್​ಜಿಒಗಳ ಬೆಂಬಲವನ್ನೂ ಪಡೆದಿಲ್ಲ. ಯಾವುದೇ ಚಾರಿಟಿಗಳ ಸಹಕಾರವನ್ನೂ ಪಡೆದಿಲ್ಲ.

ಮುಚ್ಕೊಳ್ಳಲಿಲ್ಲಾ ಅಂದ್ರೆ ಕಚ್ಕೊಳ್ಳೋದು ಗ್ಯಾರಂಟಿ ಅಂತಿದ್ದಾರೆ ಇವರೆಲ್ಲ..; ಯಾಕೆ ಮುಚ್ಕೊಳ್ಳಬೇಕು? ಏನು ಚುಚ್ಚಿಸಿಕೊಳ್ಳಬೇಕು? ತಿಳಿಯಲು ವಿಡಿಯೋ ನೋಡಿ..!
ಡಾ.ವಿವೇಕ್​ ಪಾಡೇಗಲ್​
Follow us
TV9 Web
| Updated By: Lakshmi Hegde

Updated on:Jun 22, 2021 | 12:02 PM

‘ಮುಖ ಮುಚ್ಕೊಂಡು ಬಾ..ಮುಖ ಮುಚ್ಕೊಂಡು ಹೋಗೋಲ್ಲೆ..’ ಹೀಗೊಂದು ವಿಡಿಯೋ ಸಾಂಗ್​ ಇದೀಗ ಸಖತ್​ ವೈರಲ್​ ಆಗುತ್ತಿದೆ. ನಿರ್ವಾಣ ಫಿಲ್ಮ್ಸ್​​ ಕ್ರಿಯೇಶನ್​​ನ ಈ ವಿಡಿಯೋ ಸಾಂಗ್​​ನಲ್ಲಿ ನಟ ಸಾಯಿಕುಮಾರ್​, ಅಯ್ಯೋ ಶ್ರದ್ಧಾ, ಅದ್ವಿತಿ ಶೆಟ್ಟಿ, ಅಶ್ವಿಥಿ ಶೆಟ್ಟಿ ಮತ್ತಿತರರು ಅಭಿನಯಿಸಿದ್ದಾರೆ. ಹಾಗಂತ ಇದು ಸಿನಿಮಾಕ್ಕೆ ಸಂಬಂಧಪಟ್ಟ ಹಾಡಂತೂ ಖಂಡಿತ ಅಲ್ಲ. ಬದಲಿಗೆ ಕೊರೊನಾ ವಿರುದ್ಧ ಮಾಸ್ಕ್​ ಉಪಯೋಗವನ್ನು ಸಾರುವ ಒಂದು ಪ್ರಯತ್ನ. ಇದು ಬೆಂಗಳೂರು ಫೋರ್ಟೀಸ್ ಆಸ್ಪತ್ರೆಯ ಎದೆ ರೋಗ ವಿಭಾಗದ ನಿರ್ದೇಶಕ ಡಾ. ವಿವೇಕ್​ ಪಾಡೇಗಲ್​ ಅವರ ಪರಿಕಲ್ಪನೆ..ಯೋಜನೆ.

ಕೊರೊನಾ ಮೊದಲ ಅಲೆ ತುಸು ಕಡಿಮೆಯಾಗುತ್ತಿದ್ದಂತೆ ಜನರು ನಿರ್ಲಕ್ಷ್ಯ ವಹಿಸಿದ ಪರಿಣಾಮ ಎರಡನೇ ಅಲೆ ಜೋರಾಗಿಯೇ ಅಬ್ಬರಿಸಿತು. ಲಾಕ್​ಡೌನ್​, ಕರ್ಫ್ಯೂ ನಿಯಮಗಳು ಸ್ವಲ್ಪವೇ ಸಡಿಲವಾದರೂ ಸಾಕು ಜನರು ಒಮ್ಮೆಲೇ, ಕೊರೊನಾ ಸೋಂಕು ಹೋರಟೇಹೋಯ್ತೇನೋ ಎಂಬಂತೆ ರಸ್ತೆಗೆ ಇಳಿಯುತ್ತಾರೆ. ಪಾರ್ಟಿ, ಟ್ರಿಪ್​ ಅನ್ಕೊಂಡು ಹೊರಟೇ ಬಿಡ್ತಾರೆ. ಮಾಸ್ಕ್​, ಸ್ಯಾನಿಟೈಸರ್​, ಸಾಮಾಜಿಕ, ದೈಹಿಕ ಅಂತರದಂತಹ ಮುನ್ನೆಚ್ಚರಿಕಾ ನಿಯಮಗಳನ್ನು ಮರೆಯುತ್ತಾರೆ. ಆದರೆ ಅದು ತೀರ ಅಪಾಯಕಾರಿ ಎಂಬುದು ಡಾ. ವಿವೇಕ್​ ಪಾಡೇಗಲ್​ ಸೇರಿ ಅದೆಷ್ಟೋ ವೈದ್ಯರ ಅಭಿಪ್ರಾಯ ಮತ್ತು ಎಚ್ಚರಿಕೆ. ಕೊವಿಡ್​ 19 ಎರಡನೇ ಅಲೆಯಲ್ಲಂತೂ ಅದೆಷ್ಟು ಸಮಸ್ಯೆಗಳು ಎದುರಾದವು. ಆಕ್ಸಿಜನ್​ ಅಭಾವ, ಬೆಡ್​ಗಳ ಕೊರತೆಯಿಂದ ಸಾವಿನ ಸಂಖ್ಯೆಯೂ ಹೆಚ್ಚಾಯಿತು. ಇದನ್ನೆಲ್ಲ ನೋಡಿದ ಡಾ. ವಿವೇಕ್​ ಪಾಡೇಗಲ್​ ಹೇಗಾದರೂ ಸರಿ ಜನರಲ್ಲಿ ಕೊರೊನಾ ನಿಯಂತ್ರಣದ ಅರಿವು ಮೂಡಿಸಬೇಕು. ಅದರಲ್ಲೂ ಮುಖ್ಯವಾಗಿ ಮಾಸ್ಕ್​​ನ ಮಹತ್ವವನ್ನು ತಿಳಿಸಬೇಕು ಎಂದು ಯೋಚಿಸಿ ಇಂಥದ್ದೊಂದು ಯೋಜನೆಗೆ ಮುಂದಾದರು. ವೈದ್ಯಕೀಯ ಕ್ಷೇತ್ರದ ತಜ್ಞರು ಸೂಚಿಸಿದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿದರೆ, ಅದರಲ್ಲೂ ಮಾಸ್ಕ್​ ತಪ್ಪದೆ ಧರಿಸಿದರೆ ಕೊವಿಡ್​ 19 ಪ್ರಸರಣವನ್ನು ಶೇ.70ರಷ್ಟು ತಪ್ಪಿಸಬಹುದು. ಅದೇ ಕಾರಣಕ್ಕೆ ಈಗ ಮಾಸ್ಕ್​ನ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲು ‘ಏಯ್​ ಸಿಗೋಣ ಗುರು’ ಎಂಬ ಒಂದು ಅರ್ಥ ಪೂರ್ಣ ವಿಡಿಯೋ ಸಾಂಗ್​​ನ್ನು ಹೊರತರಲಾಗಿದೆ. ವ್ಯಾಕ್ಸಿನ್​ ಪಡೆಯಿರಿ ಎಂದೂ ಇದರಲ್ಲಿ ಹೇಳಲಾಗಿದೆ.

ಕೊರೊನಾ ನಿಯಂತ್ರಣದ ಬಗ್ಗೆ ಜನರಲ್ಲಿ ಹೇಗಾದರೂ ಅರಿವು ಮೂಡಿಸಬೇಕು ಎಂದು ಡಾ. ವಿವೇಕ್​ ಹಲವು ಪ್ರಯತ್ನಗಳನ್ನು ಮಾಡಿದರು. ಆದರೆ ಯಾವುದೇ ಸಫಲತೆ ಕಾಣಲಿಲ್ಲ. ಕೊನೆಗೆ ಹೀಗೊಂದು ಪರಿಕಲ್ಪನೆ ಇಟ್ಟುಕೊಂಡು, ಹಲವು ಗೊಂದಲಗಳೊಂದಿಗೆ Nirvana Films ನ ನಿರ್ಮಾಪಕಿ ಸ್ನೇಹಾ ಐಪ್​ ವರ್ಮಾರನ್ನು ಭೇಟಿಯಾದರು. ಅವರೂ ಸಹ ತುಂಬ ಖುಷಿಯಿಂದ ಒಪ್ಪಿಕೊಂಡರು. ನಂತರ ಸಾಹಿತ್ಯವನ್ನು ಸ್ಕ್ರಿಪ್ಟ್​ರೂಂನ ರಾಜೇಶ್​ ರಾಮಸ್ವಾಮಿ(ರಾಮ್​ಸಾಮ್​) ಬರೆದರು. ದೀಪಕ್​ ಅಲೆಕ್ಸಾಂಡರ್​ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಗೇ, ಇವರಿಬ್ಬರೂ ಸೇರಿ ಹಾಡನ್ನು ಸಖತ್​ ಆಗಿ ಹಾಡಿದ್ದಾರೆ. ರ್ಯಾಪರ್ ಸುಮುಖ್​ ಸಾಥ್​ ನೀಡಿದ್ದಾರೆ. ಇಡೀ ನಿರ್ವಾಣ ತಂಡದ ಶ್ರಮ ಇದರಲ್ಲಿ ಎದ್ದು ಕಾಣುತ್ತದೆ. ಇನ್ನು ವಿಡಿಯೋದಲ್ಲಿರುವ ಕಲಾವಿದರೆಲ್ಲ ಉಚಿತವಾಗಿಯೇ ಅಭಿನಯಿಸಿದ್ದಾರೆ. ನೀವು ಈ ಹಾಡಿನಲ್ಲಿ ತಮಾಷೆಯುಕ್ತ ಪದಪ್ರಯೋಗವನ್ನು ನೋಡಬಹುದು. ಆದರೆ ತುಂಬ ಅರ್ಥಪೂರ್ಣವಾಗಿ, ಅರಿವು ಮೂಡಿಸುವಂತಿದೆ.

ಪ್ರಾದೇಶಿಕ ಭಾಷೆಯಲ್ಲಿ ಹೀಗೆ ಮಾಸ್ಕ್​ ಬಗ್ಗೆ ಅಭಿಯಾನ ನಡೆಸಿದ ಮೊದಲ ಪ್ರಯತ್ನ ಇದಾಗಿದೆ. ಹಾಗೇ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಈ ವಿಡಿಯೋವನ್ನು ಕರ್ನಾಟಕ ಶ್ವಾಸಕೋಶ ಶಾಸ್ತ್ರಜ್ಞರ ಸಂಘ ಅನುಮೋದಿಸಿದೆ. ಹಾಗೇ, ಇದಕ್ಕೆ ಯಾವುದೇ ಎನ್​ಜಿಒಗಳ ಬೆಂಬಲವನ್ನೂ ಪಡೆದಿಲ್ಲ. ಯಾವುದೇ ಚಾರಿಟಿಗಳ ಸಹಕಾರವನ್ನೂ ಪಡೆದಿಲ್ಲ. ವಿಡಿಯೋ ವೈರಲ್ ಆಗಬೇಕು..ಹೆಚ್ಚೆಚ್ಚು ಜನರಲ್ಲಿ ಅರಿವು ಮೂಡಬೇಕು ಎಂಬುದಷ್ಟೇ ನನ್ನ ಉದ್ದೇಶ ಎಂದು ಹೇಳಿದ್ದಾರೆ. ಈ ವಿಡಿಯೋವನ್ನೊಮ್ಮೆ ನೀವೂ ನೋಡ್ಕೊಂಡು ಬಿಡಿ..

Published On - 12:00 pm, Tue, 22 June 21

ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್