ಇಂದಿನಿಂದ ಮಂತ್ರಾಲಯ ಮಠ ಓಪನ್.. ರಾಯರ ದರ್ಶನಕ್ಕೆ ಮುಗಿಬಿದ್ದ ಭಕ್ತರು

ಕಳೆದ 50 ದಿನಗಳಿಂದ ಶ್ರೀಮಠ ಬಂದ್ ಮಾಡಲಾಗಿತ್ತು. ರಾಯರ ಬೃಂದಾವನದ ದರ್ಶನಕ್ಕೆ ಅವಕಾಶ ಇರಲಿಲ್ಲ. ಇಂದಿನಿಂದ ಕೊವಿಡ್ ನಿಯಮಗಳನ್ನ ಪಾಲಿಸಿ ಅವಕಾಶ ನೀಡಲಾಗಿದೆ. ಹೀಗಾಗಿ ರಾಯಚೂರಿನ ಹಳ್ಳಿ ಹಳ್ಳಿಯ ಜನ ಇಂದು ರಾಯರ ದರ್ಶನ ಪಡೆದಿದ್ದಾರೆ. ಆದರೆ ಕೊವಿಡ್ ನಿಯಮ‌ ಕಡ್ಡಾಯಗೊಳಿಸಿ ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ...

ಇಂದಿನಿಂದ ಮಂತ್ರಾಲಯ ಮಠ ಓಪನ್.. ರಾಯರ ದರ್ಶನಕ್ಕೆ ಮುಗಿಬಿದ್ದ ಭಕ್ತರು
ಮಂತ್ರಾಲಯ
Follow us
TV9 Web
| Updated By: ಆಯೇಷಾ ಬಾನು

Updated on: Jun 22, 2021 | 12:14 PM

ರಾಯಚೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಮಂತ್ರಾಲಯ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಭಕ್ತಾದಿಗಳಿಗೆ ಕೇವಲ ಆನ್ಲೈನ್ ಸೇವೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಈಗ ರಾಜ್ಯದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದ್ದು ಇಂದಿನಿಂದ ಮಂತ್ರಾಲಯ ಶ್ರೀಮಠಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತಿದೆ. ಇಂದಿನಿಂದ ರಾಯರ ಮೂಲ ಬೃಂದಾವನದ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಕಳೆದ 50 ದಿನಗಳಿಂದ ಶ್ರೀಮಠ ಬಂದ್ ಮಾಡಲಾಗಿತ್ತು. ರಾಯರ ಬೃಂದಾವನದ ದರ್ಶನಕ್ಕೆ ಅವಕಾಶ ಇರಲಿಲ್ಲ. ಇಂದಿನಿಂದ ಕೊವಿಡ್ ನಿಯಮಗಳನ್ನ ಪಾಲಿಸಿ ಅವಕಾಶ ನೀಡಲಾಗಿದೆ. ಹೀಗಾಗಿ ರಾಯಚೂರಿನ ಹಳ್ಳಿ ಹಳ್ಳಿಯ ಜನ ಇಂದು ರಾಯರ ದರ್ಶನ ಪಡೆದಿದ್ದಾರೆ. ಆದರೆ ಕೊವಿಡ್ ನಿಯಮ‌ ಕಡ್ಡಾಯಗೊಳಿಸಿ ಅಂತಾರಾಜ್ಯ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಕರ್ನಾಟಕದಿಂದ ಮಂತ್ರಾಲಯಕ್ಕೆ ತೆರಳಿದ್ರೆ ಒಂದು ವಾರ ಕಾಲ ಕ್ವಾರಂಟೈನ್ ಕಡ್ಡಾಯ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಇತರೆ ಜಿಲ್ಲೆಗಳಿಂದ ತೆರಳಲು ಭಕ್ತರು ಹಿಂದೇಟು ಹಾಕುತ್ತಿದ್ದಾರೆ.

ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 9 ರವರೆಗೆ ಭಕ್ತರು ರಾಯರ ಬೃಂದಾವನದ ದರ್ಶನ ಮಾಡಬಹುದು. ಮಠದ ಅತಿಥಿ ಗೃಹಗಳನ್ನು ಸಹ ತೆರೆಯಲಾಗುವುದು ಆದರೆ ಸಾಮೂಹಿಕ ಆಹಾರ ಸೇವೆ ಲಭ್ಯವಿರುವುದಿಲ್ಲ ಎಂದು ಮಠದ ಅಧಿಕಾರಿಗಳು ತಿಳಿಸಿದ್ದಾರೆ. ಕೊವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಭಕ್ತರಿಗೆ ತಿಳಿಸಲಾಗಿದೆ. ಆನ್‌ಲೈನ್ ದರ್ಶನ ಮತ್ತು ಪೂಜಾ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮಂತ್ರಾಲಯ ಮೂಲ ವೃಂದಾವನ ದರ್ಶನಕ್ಕೆ ನಾಳೆಯಿಂದ ಭಕ್ತರಿಗೆ ನಿರ್ಬಂಧ