Dilip Kumar Death: ಲೆಜೆಂಡರಿ ನಟ ದಿಲೀಪ್​ ಕುಮಾರ್​ ಬಗ್ಗೆ ಯಡಿಯೂರಪ್ಪ, ಅಮಿತಾಭ್​, ಸೋನು ಸೂದ್​ ಹೇಳಿದ್ದೇನು?

| Updated By: ಮದನ್​ ಕುಮಾರ್​

Updated on: Jul 07, 2021 | 1:27 PM

Dilip Kumar No More: ಐದು ದಶಕಗಳ ಕಾಲ ಸಕ್ರಿಯರಾಗಿದ್ದ ದಿಲೀಪ್​ ಕುಮಾರ್​ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅಮಿತಾಭ್​ ಬಚ್ಚನ್​, ಸೋನು ಸೂದ್​, ಅಕ್ಷಯ್​ ಕುಮಾರ್​, ಸಲ್ಮಾನ್​ ಖಾನ್​ ಸೇರಿದಂತೆ ಅನೇಕರು ದಿಲೀಪ್​ ಸಾಬ್​ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

Dilip Kumar Death: ಲೆಜೆಂಡರಿ ನಟ ದಿಲೀಪ್​ ಕುಮಾರ್​ ಬಗ್ಗೆ ಯಡಿಯೂರಪ್ಪ, ಅಮಿತಾಭ್​, ಸೋನು ಸೂದ್​ ಹೇಳಿದ್ದೇನು?
ಲೆಜೆಂಡರಿ ನಟ ದಿಲೀಪ್​ ಕುಮಾರ್​ ಬಗ್ಗೆ ಯಡಿಯೂರಪ್ಪ, ಅಮಿತಾಭ್​, ಸೋನು ಸೂದ್​ ಹೇಳಿದ್ದೇನು?
Follow us on

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಹಿರಿಯ ನಟ ದಿಲೀಪ್​ ಕುಮಾರ್​ ಬುಧವಾರ (ಜು.7) ನಿಧನರಾದರು. ಅಗಲಿದ ದಿಗ್ಗಜನಿಗೆ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಐದು ದಶಕಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ದಿಲೀಪ್​ ಕುಮಾರ್​ ಅವರು ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. 98 ವರ್ಷಗಳ ತುಂಬು ಜೀವನವನ್ನು ನಡೆಸಿದ ಅವರು ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು. ಅಗಲಿದ ದಿಗ್ಗಜನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅನೇಕ ಸೆಲೆಬ್ರಿಟಿಗಳು ಕೋರುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಅಮಿತಾಭ್​ ಬಚ್ಚನ್​, ಸೋನು ಸೂದ್​ ಮುಂತಾದವರು ಕಂಬನಿ ಮಿಡಿದಿದ್ದಾರೆ.

‘ದಿಗ್ಗಜರು ಎಲ್ಲಿಯೂ ಹೋಗುವುದಿಲ್ಲ. ಅವರು ಕೇವಲ ವೇದಿಕೆ ಬದಲಾಯಿಸುತ್ತಾರೆ ಅಷ್ಟೇ’ ಎಂದು ನಟ ಸೋನು ಸೂದ್​ ಟ್ವೀಟ್​ ಮಾಡಿದ್ದಾರೆ. ‘ಇಡೀ ಜಗತ್ತಿಗೆ ಬೇರೆ ಅನೇಕ ಹೀರೋಗಳು ಇರಬಹುದು. ಆದರೆ ನಮ್ಮಂಥ ನಟರಿಗೆ ದಿಲೀಪ್​ ಕುಮಾರ್​ ಅವರೇ ಹೀರೋ ಆಗಿದ್ದರು’ ಎಂದು ಅಕ್ಷಯ್​ ಕುಮಾರ್​ ಟ್ವೀಟ್​ ಮಾಡಿದ್ದಾರೆ. ‘ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ನಟ ಎಂದರೆ ಅದು ದಿಲೀಪ್​ ಸಾಬ್​. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸಲ್ಮಾನ್​ ಖಾನ್​ ಪೋಸ್ಟ್​ ಮಾಡಿದ್ದಾರೆ.

‘ಒಂದು ಸಂಸ್ಥೆಯೇ ಮುಗಿದುಹೋಯಿತು. ಭಾರತೀಯ ಸಿನಿಮಾದ ಬಗ್ಗೆ ಇತಿಹಾಸ ಬರೆಯುವಾಗ ದಿಲೀಪ್​ ಕುಮಾರ್​ ಬರುವುದಕ್ಕಿಂತ ಮೊದಲು ಮತ್ತು ದಿಲೀಪ್​ ಕುಮಾರ್​ ಬಂದ ನಂತರ ಎಂದು ಬರೆಯಬೇಕು. ಅವರ ನಿಧನದ ಸುದ್ದಿ ಕೇಳಿ ತೀವ್ರ ನೋವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬದವರಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ. ಒಂದು ಯುಗವೇ ಅಂತ್ಯವಾಯಿತು’ ಎಂದು ಟ್ವಿಟರ್​ನಲ್ಲಿ ಅಮಿತಾಭ್​ ಬಚ್ಚನ್​ ಅವರು ಬರೆದುಕೊಂಡಿದ್ದಾರೆ.

ದಶಕಗಳ ಕಾಲ ತಮ್ಮ ಅಭಿನಯ, ಪ್ರತಿಭೆಯಿಂದ ಚಿತ್ರರಂಗದ ದಿಗ್ಗಜ ಸ್ಥಾನಕ್ಕೇರಿದ್ದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಪದ್ಮವಿಭೂಷಣ ದಿಲೀಪ್ ಕುಮಾರ್ ಅವರ ನಿಧನದಿಂದ ಯುಗವೊಂದು ಅಂತ್ಯವಾದಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಕುಟುಂಬದವರಿಗೆ, ಅಸಂಖ್ಯಾತ ಅಭಿಮಾನಿಗಳಿಗೆ ಆ ಮಹಾನ್ ಕಲಾವಿದನನ್ನು ಕಳೆದುಕೊಂಡ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ’ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆಂದು ‘ಸಿಎಂ ಆಫ್​ ಕರ್ನಾಟಕ’ ಅಧಿಕೃತ ಟ್ವಿಟರ್​ ಖಾತೆಯಿಂದ ಪೋಸ್ಟ್​ ಮಾಡಲಾಗಿದೆ.

ಭಾರತೀಯ ಚಿತ್ರರಂಗದ ಹಲವಾರು ಸೆಲೆಬ್ರಿಟಿಗಳು, ವಿವಿಧ ಕ್ಷೇತ್ರಗಳ ಗಣ್ಯರು, ಅಭಿಮಾನಿಗಳು ದಿಲೀಪ್​ ಕುಮಾರ್​ ಅವರಿಗೆ ನುಡಿ ನಮನ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಹುಲ್​ ಗಾಂಧಿ ಸೇರಿದಂತೆ ಹಲವು ಮಂದಿ ರಾಜಕೀಯ ಮುಖಂಡರು ಸಹ ದಿಗ್ಗಜ ನಟನ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:

ಪೆಟ್ಟು ತಿನ್ನಬೇಕಾಗುತ್ತೆ ಎಂಬ ಭಯದಲ್ಲಿ ಖಾನ್​ ಬದಲು ದಿಲೀಪ್​ ಕುಮಾರ್​ ಎಂದು ಹೆಸರಿಟ್ಟುಕೊಂಡಿದ್ದ ದಿಗ್ಗಜ ನಟ

Dilip Kumar Death: ಬಾಲಿವುಡ್​ ಹಿರಿಯ ನಟ ದಿಲೀಪ್​ ಕುಮಾರ್​ ನಿಧನ