ಏನೋ ಮಾಡಲು ಹೋಗಿ ಇನ್ನೇನೋ ಆಯ್ತು; ಯುವ ನಟಿಯ ಮುಚ್ಚಿಟ್ಟ ಸಂಬಂಧ ಬಯಲು

ಡಿಂಪಲ್ ಹಯಾತಿ ಬಾಯ್​ಫ್ರೆಂಡ್​ ವಿಚಾರ ಗುಟ್ಟಾಗಿ ಇಟ್ಟಿದ್ದರು. ಎಲ್ಲಿಯೂ ಅವರು ಈ ವಿಚಾರ ರಿವೀಲ್ ಮಾಡಿರಲಿಲ್ಲ. ಈಗ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ.

ಏನೋ ಮಾಡಲು ಹೋಗಿ ಇನ್ನೇನೋ ಆಯ್ತು; ಯುವ ನಟಿಯ ಮುಚ್ಚಿಟ್ಟ ಸಂಬಂಧ ಬಯಲು
ಡಿಂಪಲ್ ಹಯಾತಿ-ಬಾಯ್​ಫ್ರೆಂಡ್
Follow us
ರಾಜೇಶ್ ದುಗ್ಗುಮನೆ
|

Updated on: May 26, 2023 | 7:39 AM

ಬಹುತೇಕ ಸೆಲೆಬ್ರಿಟಿಗಳು ಪ್ರೀತಿ, ಪ್ರೇಮ, ಡೇಟಿಂಗ್ ವಿಚಾರದಲ್ಲಿ ತುಟಿ ಬಿಚ್ಚುವುದಿಲ್ಲ. ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡ ಹೊರತಾಗಿಯೂ ಪ್ರೀತಿ ವಿಚಾರವನ್ನು ಅಲ್ಲಗಳೆಯುತ್ತಾರೆ. ನಟಿ ಡಿಂಪಲ್ ಹಯಾತಿ (Dimple Hayathi) ಕೂಡ ಇಷ್ಟು ದಿನ ಪ್ರೀತಿ ವಿಚಾರವನ್ನು ಮುಚ್ಚಿಟ್ಟಿದ್ದರು. ಆದರೆ, ಈಗ ಏನೋ ಮಾಡಲು ಹೋಗಿ ಇನ್ನೇನೋ ಆಗಿದೆ. ಐಪಿಎಸ್ ಅಧಿಕಾರಿ ರಾಹುಲ್ ಹೆಗ್ಡೆ (Rahul Hegde) ಜೊತೆಗಿನ ಜಗಳದಲ್ಲಿ ಅವರ ಲವ್​ಸ್ಟೋರಿ ವಿಚಾರ ಹೊರಬಿದ್ದಿದೆ. ಇದರಿಂದ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಡಿಂಪಲ್ ಹಯಾತಿ ಹಾಗೂ ವಿಕ್ಟರ್ ಡೇವಿಡ್ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ಹೈದರಾಬಾದ್​ನ ಅಪಾರ್ಟ್​ಮೆಂಟ್ ಒಂದರಲ್ಲಿ ಲಿವಿನ್ ರಿಲೇಶನ್​ಶಿಪ್​ನಲ್ಲಿದ್ದರು. ಇದನ್ನು ಡಿಂಪಲ್ ಹಯಾತಿ ಗುಟ್ಟಾಗಿ ಇಟ್ಟಿದ್ದರು. ಎಲ್ಲಿಯೂ ಅವರು ಈ ವಿಚಾರ ರಿವೀಲ್ ಮಾಡಿರಲಿಲ್ಲ. ಆದರೆ, ಐಪಿಎಸ್ ಅಧಿಕಾರಿ​ ರಾಹುಲ್ ಹೆಗ್ಡೆ ಜೊತೆಗಿನ ಕಿತ್ತಾಟದ ವಿಚಾರದಲ್ಲಿ ವಿಕ್ಟರ್ ಹೆಸರು ಹೊರ ಬಂದಿದೆ.

ಡಿಂಪಲ್ ಹಯಾತಿ ಹಾಗೂ ಅವರ ಬಾಯ್​ಫ್ರೆಂಡ್​ ವಿಕ್ಟರ್ ವಾಸವಾಗಿರುವ ಅಪಾರ್ಟ್​ಮೆಂಟ್​ನಲ್ಲೇ ರಾಹುಲ್ ಹೆಗ್ಡೆ ಸಹ ವಾಸವಿದ್ದಾರೆ. ಡಿಂಪಲ್ ಹಯಾತಿ ಹಾಗೂ ರಾಹುಲ್ ಮಧ್ಯೆ ಕೆಲ ಸಮಯದಿಂದ ಪಾರ್ಕಿಂಗ್ ವಿಚಾರದಲ್ಲಿ ಕಿತ್ತಾಟ ನಡೆದಿತ್ತು. ನಟಿ ಈ ವಿಚಾರದಲ್ಲಿ ರಿವೇಂಜ್ ತೆಗೆದುಕೊಂಡಿದ್ದರು. ಐಪಿಎಸ್ ಅಧಿಕಾರಿ ಕಾರಿಗೆ ಡ್ಯಾಮೇಜ್ ಮಾಡಿದ್ದರು. ಈ ವಿಚಾರದಲ್ಲಿ ರಾಹುಲ್ ಹೆಗ್ಡೆ ಕೇಸ್ ದಾಖಲು ಮಾಡಿದ್ದರು. ಡಿಂಪಲ್ ಜೊತೆ ಅವರು ವಿಕ್ಟರ್​ ವಿರುದ್ಧವೂ ಕೇಸ್ ದಾಖಲಿಸಿದ್ದರು.

ಇದನ್ನೂ ಓದಿ: Virupaksha Movie: ‘ವಿರೂಪಾಕ್ಷ’ ಚಿತ್ರಕ್ಕೆ ಭರಪೂರ ಮೆಚ್ಚುಗೆ ಸಿಗ್ತಿರೋದೇಕೆ? ಅಂಥದೇನಿದೆ ಸಿನಿಮಾದಲ್ಲಿ?

ಬಾಯ್​ಫ್ರೆಂಡ್ ಹೆಸರು ಲೀಕ್ ಆಗಿರುವ ವಿಚಾರದಲ್ಲಿ ಡಿಂಪಲ್ ಹಯಾತಿ ಚಿಂತೆಗೆ ಒಳಗಾಗಿದ್ದಾರೆ. ಇಷ್ಟು ವರ್ಷ ಮುಚ್ಚಿಟ್ಟ ಸತ್ಯ ಈಗ ಹೊರ ಬಂದಿದೆ. ಈ ಬಗ್ಗೆ ಅನೇಕರು ಅವರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಇಷ್ಟು ವರ್ಷ ಈ ವಿಚಾರ ಮುಚ್ಚಿಟ್ಟಿದ್ದೇಕೆ ಎನ್ನುವ ಪ್ರಶ್ನೆಯನ್ನು ಅನೇಕರು ಕೇಳುತ್ತಿದ್ದಾರೆ. ಇದರಿಂದ ಡಿಂಪಲ್ ಹಯಾತಿ ಅಪ್ಸೆಟ್ ಆಗಿದ್ದಾರೆ.

ಡಿಂಪಲ್ ಹಯಾತಿ ಅವರಿಗೆ ಈಗಿನ್ನೂ 24 ವರ್ಷ. 2017ರಲ್ಲಿ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ‘ಗಲ್ಫ್​’ ಅವರ ನಟನೆಯ ಮೊದಲ ಸಿನಿಮಾ. ಇತ್ತೀಚೆಗೆ ಅವರ ನಟನೆಯ ‘ರಾಮಬನಂ’ ಸಿನಿಮಾ ರಿಲೀಸ್ ಆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ