Bigg Boss Kannada 8: ಅರವಿಂದ್​ ಪ್ರಪೋಸಲ್​​ಗೆ ಓಕೆ ಎಂದ ದಿವ್ಯಾ ಉರುಡುಗ!

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡಗ ಹಾಗೂ ಅರವಿಂದ್​ ಕೆಪಿ ಮದುವೆ ವಿಚಾರ ಚರ್ಚೆ ಮಾಡಿದ್ದರು. ಇದಾದ ಬೆನ್ನಲ್ಲೇ ಅರವಿಂದ್​ ಇಟ್ಟ ಪ್ರಪೋಸ್​ಗೆ ದಿವ್ಯಾ ಉರುಡುಗ ಓಕೆ ಎಂದಿದ್ದಾರೆ!

Bigg Boss Kannada 8: ಅರವಿಂದ್​ ಪ್ರಪೋಸಲ್​​ಗೆ ಓಕೆ ಎಂದ ದಿವ್ಯಾ ಉರುಡುಗ!
ಅರವಿಂದ್​-ದಿವ್ಯಾ
Edited By:

Updated on: Mar 16, 2021 | 12:52 PM

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್​ ಕೆಪಿ ಮದುವೆ ವಿಚಾರ ಚರ್ಚೆ ಮಾಡಿದ್ದರು. ಈ ವಿಚಾರವನ್ನು​ ವೀಕೆಂಡ್​ನಲ್ಲಿ ಸುದೀಪ್ ಕೂಡ ಮಾತನಾಡಿದ್ದರು. ಅಷ್ಟೇ ಅಲ್ಲ, ಅರವಿಂದ್​ಗೆ ಆಲ್​ ದಿ ಬೆಸ್ಟ್​ ಕೂಡ ಹೇಳಿದ್ದರು. ಇದಾದ ಬೆನ್ನಲ್ಲೇ ಅರವಿಂದ್​ ಇಟ್ಟ ಪ್ರಪೋಸ್​ಗೆ ದಿವ್ಯಾ ಉರುಡುಗ ಓಕೆ ಎಂದಿದ್ದಾರೆ!

ಹಾಗಂತ ಇದು ಮದುವೆ ಪ್ರಪೋಸಲ್​ ಅಲ್ಲ. ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಮಾಡಲು ಪ್ರತಿ ಪುರುಷ ಸ್ಪರ್ಧಿ ಒಂದು ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಆಯ್ಕೆ ಮಾಡಿಕೊಳ್ಳುವಾಗ ಇಟ್ಟ ಬೇಡಿಕೆಯಲ್ಲಿ ಅರವಿಂದ್​ಗೆ ದಿವ್ಯಾ ಒಕೆ ಎಂದಿದ್ದಾರೆ.

ಮೊದಲು ಪ್ರಶಾಂತ್​ ಸಂಬರಗಿ ದಿವ್ಯಾ ಉರುಡುಗ ಬಳಿ ಜೋಡಿ ಆಗ್ತೀರಾ ಎಂದು ಕೇಳಿದರು. ಇದಕ್ಕೆ ದಿವ್ಯಾ ನೋ ಎಂದರು. ನಂತರ ಲ್ಯಾಗ್​ ಮಂಜು, ಬ್ರೋ ಗೌಡ ಕೂಡ ಪ್ರಯತ್ನ ಮಾಡಿದರು. ಇವರಿಗೂ ನೋ ಎನ್ನುವ ಉತ್ತರವೇ ಬಂತು. ಕೊನೆಗೆ ಅರವಿಂದ್​ ಜೋಡಿ ಆಗೋ ಬೇಡಿಕೆ ಇಟ್ಟಾಗ ಓಕೆ ಎಂದರು ದಿವ್ಯಾ. ಅವರು ಓಕೆ ಎಂದು ಹೇಳುತ್ತಿದ್ದಂತೆಯೇ ಮನೆಯ ಸದಸ್ಯರು ಕೂಗಿದರು. ಇದು ದಿವ್ಯಾಗೆ ಒಂದು ಕ್ಷಣ ಮುಜುಗರ ತಂದಿತ್ತು. ಆದರೂ ಅದನ್ನು ಹಿಡಿದಿಟ್ಟುಕೊಂಡರು. ನಂತರ ಗೀತಾ, ದಿವ್ಯಾ-ಅರವಿಂದ್ ಜೋಡಿ ಸಖತ್​ ಆಗಿದೆ. ಈ ಜೋಡಿ ನೋಡೋಕೆ ಕಣ್ಣು ಸಾಕಾಗಲ್ಲ ಎಂದರು. ಆಗ ದಿವ್ಯಾಗೆ ಮತ್ತಷ್ಟು ಮುಜುಗರವಾಯ್ತು.

ಈ ವಾರ ನಾಮಿನೇಟ್​ ಆದ ಸದಸ್ಯರು:

ಕನ್ನಡ ಬಿಗ್​ ಬಾಸ್​ ಎಂಟನೇ ಸೀಸನ್​ನ ಮೊದಲೇ ವಾರದಲ್ಲಿ ಧನುಶ್ರೀ ,ಎರಡನೇ ವಾರದಲ್ಲಿ ನಿರ್ಮಲಾ ಎಲಿಮಿನೇಟ್​​ ಆಗಿ ಮನೆಯಿಂದ ಹೊರಹೋಗಿದ್ದಾರೆ. ಈಗ ಮೂರನೇ ವಾರದ ಎಲಿಮಿನೇಷನ್​​ ಪ್ರಕ್ರಿಯೆ ಆರಂಭವಾಗಿದೆ. ಈ ವಾರ 9 ಸದಸ್ಯರು ಬಿಗ್​ ಬಾಸ್​ ಮನೆಯಲ್ಲಿ ನಾಮಿನೇಟ್​ ಆಗಿದ್ದಾರೆ. ಅವರ ಹೆಸರುಗಳ ಬಗ್ಗೆ ಇಲ್ಲಿದೆ ಮಾಹಿತಿ.

ಶಮಂತ್​, ನಿಧಿ ಸುಬ್ಬಯ್ಯ, ಗೀತಾ, ರಘು, ಅರವಿಂದ್, ವಿಶ್ವನಾಥ್​, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್​ ಸಂಬರಗಿ ನಾಮಿನೇಟ್​ ಆದರು. ಶಂಕರ್​ ಅಶ್ವತ್ಥ್​ ನಾಮಿನೇಟ್​ ಆಗಿದ್ದರೂ ಮನೆಯ ಕ್ಯಾಪ್ಟನ್​ ಸೇವ್​ ಮಾಡಿದ್ದಾರೆ. ಶಮಂತ್​ ಹಾಗೂ ನಿಧಿಗೆ ಅತಿ ಹೆಚ್ಚು ಮತ ಬಿದ್ದಿತ್ತು. ಶಮಂತ್​ ಎರಡು ವಾರ ಸರಿಯಾಗಿ ಆಟವಾಡಿಲ್ಲ. ಕ್ಯಾಪ್ಟನ್ಸಿಯಿಂದ ಅವರು ಸೇವ್​ ಆಗಿದ್ದಾರೆ. 20ರ ಹುಡುಗನ ತರ ಆಡ್ತಾರೆ. ಉದ್ದೇಶ ಮರೆತಿದಾರೆ ಎಂದು ಮನೆ ಸದಸ್ಯರು ದೂರಿದರು. ನಿಧಿ ಮನಸ್ಸಿನಿಂದ ಆಡಿಲ್ಲ. ನಿಧಿ ಎಲ್ಲರನ್ನೂ ಇಗ್ನೋರ್​ ಮಾಡ್ತಾ ಇದಾರೆ ಎನ್ನುವ ದೂರನ್ನು ಹೇಳಿದರು.

ಇದನ್ನೂ ಓದಿ: ಶಮಂತ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ; ಬಿಗ್​ ಬಾಸ್​ ಎದುರು ಸ್ಪರ್ಧಿಗಳ ಹೊಸ ಬೇಡಿಕೆ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us