ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?

| Updated By: ಮದನ್​ ಕುಮಾರ್​

Updated on: Mar 31, 2021 | 7:27 AM

ಚಾಕೋಲೇಟ್​ ಕೊಡುವಾಗ ಕ್ಯಾಪ್ಟನ್​ ವಿಶ್ವ ನಿಯಮಗಳನ್ನು ಓದಿದ್ದರು. ಈ ನಿಯಮದ ಪ್ರಕಾರ ಚಾಕೋಲೇಟ್​ಗಳನ್ನು ಎದುರಾಳಿ ತಂಡದವರು ತಿನ್ನುವಂತಿಲ್ಲ. ಚಾಕೋಲೇಟ್​ ನೋಡಿದ ದಿವ್ಯಾ ಉರುಡುಗ ಬಾಯಿ ಚಪ್ಪರಿಸುತ್ತಿದ್ದರು.

ಎಷ್ಟೇ ಹೇಳಿದರೂ ಬಿಗ್​ ಬಾಸ್​ ನಿಯಮ ಉಲ್ಲಂಘನೆ ಮಾಡಿದ ದಿವ್ಯಾ ಉರುಡುಗಗೆ ಯಾವ ಶಿಕ್ಷೆ?
ದಿವ್ಯಾ ಉರುಡುಗ
Follow us on

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಗೆದ್ದ ‘ಜಾತ್ರೆ ಗ್ಯಾಂಗ್​’ ತಂಡಕ್ಕೆ ಬಿಗ್​ ಬಾಸ್​ ಚಾಕೋಲೆಟ್​ ನೀಡಿತ್ತು. ಚಾಕೋಲೆಟ್​ ಕೊಡುವ ಮೊದಲು ಬಿಗ್​ ಬಾಸ್ ಕೆಲ ಷರತ್ತುಗಲನ್ನು ವಿಧಿಸಿತ್ತು. ಆದರೆ, ಇದನ್ನು ಮನೆಯ ಕ್ಯಾಪ್ಟನ್​ ವಿಶ್ವ ಸರಿಯಾಗಿ ಓದಿ ಹೇಳಿದ್ದರು. ಆದರೆ, ಹೀಗೆ ಹೇಳಿದ ಹೊರತಾಗಿಯೂ ದಿವ್ಯಾ ಉರುಡುಗ ನಿಯಮ ಉಲ್ಲಂಘನೆ ಮಾಡಿದ್ದಾರೆ.

ಸೋಮವಾರ (ಮಾರ್ಚ್​ 29) ಬಿಗ್​ ಬಾಸ್​ ಟಾಸ್ಕ್​ ಒಂದನ್ನು ನೀಡಿದ್ದರು. ಈ ಟಾಸ್ಕ್​ನಲ್ಲಿ ಬಲೂನ್ ಒಡೆದು ಅದರಲ್ಲಿರುವ ಚಿನ್ನದ ಗಟ್ಟಿ ಮಾದರಿಯ ವಸ್ತುವನ್ನು ಸಂಗ್ರಹಿಸಬೇಕು. ಹೆಚ್ಚು ಸಂಗ್ರಹಿಸಿದವರು ಗೆದ್ದಂತೆ. ಈ ಗೇಮ್​ನಲ್ಲಿ ಶುಭಾ ಪೂಂಜಾ ನೇತೃತ್ವದ ಜಾತ್ರೆ ಗ್ಯಾಂಗ್​ ಗೆದ್ದಿತ್ತು. ಇದಕ್ಕಾಗಿ, ಬಿಗ್​ ಬಾಸ್​ ಚಾಕೊಲೇಟ್​ಗಳನ್ನು ಕಳುಹಿಸಿಕೊಟ್ಟಿದ್ದರು.

ಚಾಕೋಲೇಟ್​ ಕೊಡುವಾಗ ಕ್ಯಾಪ್ಟನ್​ ವಿಶ್ವ ನಿಯಮಗಳನ್ನು ಓದಿದ್ದರು. ಈ ನಿಯಮದ ಪ್ರಕಾರ ಚಾಕೋಲೇಟ್​ಗಳನ್ನು ಎದುರಾಳಿ ತಂಡದವರು ತಿನ್ನುವಂತಿಲ್ಲ. ಚಾಕೋಲೇಟ್​ ನೋಡಿದ ದಿವ್ಯಾ ಉರುಡುಗ ಬಾಯಿ ಚಪ್ಪರಿಸುತ್ತಿದ್ದರು. ನನಗೂ ಚಾಕೋಲೇಟ್​ ಬೇಕು ಎಂದು ಪದೇ ಪದೇ ಹೇಳಿಕೊಂಡರು.

ಮಂಗಳವಾರದ (ಮಾರ್ಚ್​ 30) ಸಂಚಿಕೆಯಲ್ಲಿ ದಿವ್ಯಾ ಉರುಡುಗ ಜಾತ್ರೆ ಗ್ಯಾಂಗ್​ಗೆ ನೀಡಿದ ಚಾಕೋಲೇಟ್​ಅನ್ನು ಅಡಗಿಸಿ ಇಟ್ಟಿದ್ದರು. ನಂತರ, ನಾವು ಚಾಕೋಲೇಟ್​ ತಿಂದಿಲ್ಲ. ಇದನ್ನು ಅಡಗಿಸಿ ಮಾತ್ರ ಇಟ್ಟಿದ್ದೆ. ಇದು ಬಿಗ್​ ಬಾಸ್​ ನಿಯಮ ಉಲ್ಲಂಘಿಸಿದಂತಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅತ್ತ ಶುಭಾ ತಂಡದವರು, ಚಾಕೋಲೇಟ್​ಗಾಗಿ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಅಡಗಿಸಿಟ್ಟ ಚಾಕೋಲೇಟ್​ ಪ್ರಶಾಂತ್​ ಕೈಗೆ ಸಿಕ್ಕಿದೆ. ಅಲ್ಲದೆ ಅವರು ಬೇರೆಯದೇ ರೀತಿಯ ಆರೋಪ ಮಾಡಿದ್ದಾರೆ. ಚಾಕೋಲೇಟ್​ ಅಡಗಿಸಿಟ್ಟ ದಿವ್ಯಾ ಅದನ್ನು ತಿಂದಿದ್ದಾರೆ ಅದಕ್ಕೆ ಬಿಗ್​ ಬಾಸ್​ ಶಿಕ್ಷೆ ನೀಡಬೇಕು ಎಂದು ಕೋರಿದ್ದಾರೆ. ಇತ್ತ ದಿವ್ಯಾ ನಾನು ಚಾಕೋಲೇಟ್​ ಮೂಸಿ ಕೂಡ ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ‘ನನ್ನ ಜೀವನದಲ್ಲಿ ದಿವ್ಯಾಗೆ ಶಾಶ್ವತ ಸ್ಥಾನ; ಮೊದಲು ಇವರೇ, ಕೊನೆಯೂ ಇವರೇ’! ಮಂಜು ಲವ್​ ಇನ್ನಷ್ಟು ಸೀರಿಯಸ್​

ಡ್ರಗ್​ ಕೇಸ್​ನಲ್ಲಿ ಮಾಜಿ ಬಿಗ್​ ಬಾಸ್​ ಸ್ಪರ್ಧಿ ಅರೆಸ್ಟ್​; ಎನ್​​ಸಿಬಿಯಿಂದ ವಿಚಾರಣೆ