ವಿವಾಹಿತ ನಟನ ಜೊತೆ ದಿವ್ಯಾ ಭಾರತಿ ಸುತ್ತಾಟ? ನಟನ ಡಿವೋರ್ಸ್​ಗೆ ನಟಿಯೇ ಕಾರಣ?

ದಿವ್ಯಾ ಭಾರತಿ ಅವರು ಸಂಗೀತಗಾರ ಜಿ.ವಿ. ಪ್ರಕಾಶ್ ಜೊತೆಗಿನ ಅಫೇರ್ ಮತ್ತು ಅವರ ವಿಚ್ಛೇದನದ ಆರೋಪಗಳನ್ನು ತೀವ್ರವಾಗಿ ತಿರಸ್ಕರಿಸಿದ್ದಾರೆ. ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪಗಳನ್ನು ಅವರು ನಿರಾಕರಿಸಿದ್ದಾರೆ. ಈ ವದಂತಿಗಳಿಂದ ತಮ್ಮ ಖ್ಯಾತಿಗೆ ಹಾನಿಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ವಿವಾಹಿತ ನಟನ ಜೊತೆ ದಿವ್ಯಾ ಭಾರತಿ ಸುತ್ತಾಟ? ನಟನ ಡಿವೋರ್ಸ್​ಗೆ ನಟಿಯೇ ಕಾರಣ?
ದಿವ್ಯಾ ಭಾರತಿ
Updated By: ರಾಜೇಶ್ ದುಗ್ಗುಮನೆ

Updated on: Apr 03, 2025 | 10:54 AM

‘ಬ್ಯಾಚುಲರ್’ ಚಿತ್ರದ ಮೂಲಕ ತಮಿಳಿನಲ್ಲಿ ಮನೆಮಾತಾದ ದಕ್ಷಿಣ ನಟಿ ದಿವ್ಯಾ ಭಾರತಿ (Divya Bharathi), ಪ್ರಸ್ತುತ ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ನಟ ಮತ್ತು ಸಂಗೀತಗಾರ ಜಿ. ವಿ. ಪ್ರಕಾಶ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಮತ್ತು ಅವರ ಸಂಸಾರ ಹಾಳಾಗಲು ಕಾರಣದ ಆದ ಆರೋಪ ಅವರ ಮೇಲಿದೆ. ಈ ಆರೋಪಗಳ ಬಗ್ಗೆ ದಿವ್ಯಾ ಕೊನೆಗೂ ಮೌನ ಮುರಿದಿದ್ದಾರೆ. ‘ಈಗ ಎಲ್ಲವೂ ನನ್ನ ತಲೆಯ ಮೇಲೆ ಬರುತ್ತಿದೆ. ಮದುವೆ ಆದ ವ್ಯಕ್ತಿ ಜೊತೆ ನಾನೇಕೆ ಸುತ್ತಲಿ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಈ ಆರೋಪಗಳಲ್ಲಿ ನನ್ನನ್ನು ಬಲವಂತವಾಗಿ ಎಳೆದು ತರಲಾಗುತ್ತಿದೆ ಮತ್ತು ಇದು ತಪ್ಪು ಎಂದು ಅವರು ಹೇಳಿದ್ದಾರೆ.

‘ನನ್ನ ಹೆಸರನ್ನು ಖಾಸಗಿ ಕುಟುಂಬದ ವಿಷಯಕ್ಕೆ ಎಳೆದು ತರಲಾಗಿದೆ. ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಜಿ. ವಿ ಅವರ ಕೌಟುಂಬಿಕ ಸಮಸ್ಯೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಿಜ ಹೇಳಬೇಕೆಂದರೆ, ನಾನು ಯಾವುದೇ ನಟನೊಂದಿಗೆ ಡೇಟಿಂಗ್ ಮಾಡುವುದಿಲ್ಲ. ಅದರಲ್ಲೂ ವಿವಾಹ ಆದವನ ಜೊತೆಯಂತೂ ಸುತ್ತಾಡಲ್ಲ’ ಎಂದಿದ್ದಾರೆ ಅವರು.

‘ಇಂತಹ ಚರ್ಚೆಗಳಿಗೆ ಗಮನ ಕೊಡುವ ಅಗತ್ಯವಿಲ್ಲ ಎಂದು ಭಾವಿಸಿ ನಾನು ಇಲ್ಲಿಯವರೆಗೆ ಸುಮ್ಮನಿದ್ದೆ. ಆದರೆ ಇದೆಲ್ಲವೂ ಈಗ ಮಿತಿ ಮೀರಿದೆ. ಇಂತಹ ಆಧಾರರಹಿತ ಆರೋಪಗಳಿಂದ ನನ್ನ ಇಮೇಜ್ ಹಾಳಾಗಲು ನಾನು ಬಿಡುವುದಿಲ್ಲ. ನಾನು ಸ್ವಾವಲಂಬಿ ಮಹಿಳೆ. ಹಾಗಾಗಿ ಯಾವುದೇ ರೀತಿಯ ಗಾಸಿಪ್ ನನ್ನ ಇಮೇಜ್‌ಗೆ ಮಸಿ ಬಳಿಯಲು ಸಾಧ್ಯವಿಲ್ಲ. ಅಂತಹ ನಕಾರಾತ್ಮಕತೆಯನ್ನು ಹರಡುವ ಬದಲು, ಉತ್ತಮ ಜಗತ್ತನ್ನು ನಿರ್ಮಿಸುವತ್ತ ಗಮನ ಹರಿಸೋಣ. ಈ ವಿಷಯದ ಬಗ್ಗೆ ಇದು ನನ್ನ ಮೊದಲ ಮತ್ತು ಕೊನೆಯ ಪ್ರತಿಕ್ರಿಯೆ, ಧನ್ಯವಾದಗಳು’ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
ಹನುಮಂತ-ಬಾಳು ಬೆಳಗುಂದಿ ಭೇಟಿ; ಎರಡು ದೇಸಿ ಪ್ರತಿಭೆಗಳ ಸಮಾಗಮ
ವಿವಾಹದ ಬಳಿಕ ನಯನಾತಾರ ಜೊತೆ ಅಫೇರ್; ಪ್ರಭುದೇವ ಜೀವನವೇ ಹಾಳಾಯಿತು
ಪಾತಾಳ ಕಾಣುತ್ತಿದೆ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಕಲೆಕ್ಷನ್
ನಟನೆ ಮಾತ್ರವಲ್ಲ ಈ ವಿಶೇಷ ವಿದ್ಯೆ ಕಲಿತಿದ್ದಾರೆ ಅಜಯ್ ರಾವ್

ಇದನ್ನೂ ಓದಿ: ‘ಪುಷ್ಪ 3’ನಲ್ಲಿ ಅಲ್ಲು ಅರ್ಜುನ್ ಜೊತೆ ಇನ್ನಿಬ್ಬರು ಸ್ಟಾರ್ ಹೀರೋಗಳು

ದಿವ್ಯಾ ಮತ್ತು ಜಿ.ವಿ. ಪ್ರಕಾಶ್ 2021 ರಲ್ಲಿ ‘ಬ್ಯಾಚುಲರ್’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು. ಅಂದಿನಿಂದ, ಇಬ್ಬರ ನಡುವಿನ ಪ್ರೇಮ ಸಂಬಂಧದ ವದಂತಿಗಳು ವ್ಯಾಪಕವಾಗಿ ಹರಡಿವೆ. ಆದರೆ ಇಬ್ಬರೂ ಈ ಚರ್ಚೆಗಳನ್ನು ಮೊದಲೇ ತಿರಸ್ಕರಿಸಿದ್ದರು. ಜಿ. ವಿ. ಪ್ರಕಾಶ್ ಒಬ್ಬ ಸಂಗೀತಗಾರ. ಎಆರ್ ರೆಹಮಾನ್ ಅವರ ಸಹೋದರಿಯ ಮಗ. ಹತ್ತು ವರ್ಷಗಳ ದಾಂಪತ್ಯದ ನಂತರ ಪ್ರಕಾಶ್ ಹಾಗೂ ಅವರ ಪತ್ನಿ ಸೈಂಧವಿಯೊಂದಿಗಿನ ಸಂಬಂಧ ಮುರಿದುಬಿತ್ತು. ಇಬ್ಬರೂ 2024 ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಒಬ್ಬ ಮಗನೂ ಇದ್ದಾನೆ. ಪರಸ್ಪರ  ಹಿತದೃಷ್ಟಿಯಿಂದ ಬೇರ್ಪಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸೈಂಧವಿ ಈ ಮೊದಲು ಹೇಳಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.