ಸೆಲೆಬ್ರಿಟಿ ಮಕ್ಕಳು ಎಂದಾಕ್ಷಣ ನೆನಪಿಗೆ ಬರೋದು ಐಷಾರಾಮಿ ಜೀವನ. ಎಲ್ಲಾ ಸೆಲೆಬ್ರಿಟಿಗಳು ಶಾಪಿಂಗ್ ಮಾಡೋದು ಬ್ರ್ಯಾಂಡೆಡ್ ವಸ್ತುಗಳನ್ನೇ ಅನ್ನೋದು ಅನೇಕರ ನಂಬಿಕೆ. ಅವರು ಐಷಾರಾಮಿ ಕಾರಿನಲ್ಲಿ ಓಡಾಟ ನಡೆಸುತ್ತಾರೆ. ಆದರೆ, ಮಹೇಶ್ ಬಾಬು ಮಗಳು ಆ ರೀತಿ ಅಲ್ಲ ಅನ್ನೋದು ನಿಮಗೆ ಗೊತ್ತೇ? ಆ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ ಕೇಳಿ. ಅವರು ಉಳಿದ ಸೆಲೆಬ್ರಿಟಿಗಳ ಮಕ್ಕಳಂತೆ ಅಲ್ಲ. ಈ ಬಗ್ಗೆ ಸಂದರ್ಶನ ಒಂದರಲ್ಲಿ ಅವರು ಹೇಳಿಕೊಂಡಿದ್ದರು.
ಮಹೇಶ್ ಬಾಬು ಮಗಳ ಹೆಸರು ಸಿತಾರಾ. ಅವರು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಅವರು ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಶಿಕ್ಷಣ ಪಡೆಯುತ್ತಿರುವುದರ ಜೊತೆಗೆ ಅವರು ಅನೇಕ ಬ್ರ್ಯಾಂಡ್ಗಳ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಅವರು ತಮ್ಮದೇ ಯೂಟ್ಯೂಬ್ ಚಾನೆಲ್ ಮಾಡಿಕೊಂಡು ಅನೇಕರ ಸಂದರ್ಶನ ಮಾಡುತ್ತಿದ್ದಾರೆ. ಅವರನ್ನು ಕೂಡ ಅನೇಕರು ಸಂದರ್ಶನ ಮಾಡುತ್ತಾರೆ.
ಸಿತಾರಾ ಘಟ್ಟಮನೇನಿ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಭಾಗಿ ಆಗಿದ್ದರು. ಈ ಸಂದರ್ಭದಲ್ಲಿ ಅವರ ಇಷ್ಟದ ಭಾಷೆಯ ಬಗ್ಗೆ ಕೇಳಲಾಗಿದೆ. ಆಗ ಅವರು ‘ತೆಲುಗು ಹಾಗೂ ಮರಾಠಿ’ ಎಂದು ಹೇಳಿದ್ದಾರೆ. ಇಷ್ಟದ ಫ್ಯಾಷನ್ ಬ್ರ್ಯಾಂಡ್ ಯಾವುದು’ ಎಂದು ಅವರಿಗೆ ಕೇಳಲಾಗಿದೆ. ಇದಕ್ಕೆ ಅವರು ಉತ್ತರ ನೀಡಿದ್ದಾರೆ. ಈ ಉತ್ತರ ಅನೇಕರಿಗೆ ಇಷ್ಟ ಆಗಿದೆ.
‘ನಾವು ವಿದೇಶದಲ್ಲಿ ಶಾಪ್ ಮಾಡುತ್ತೇವೆ. ಯಾವುದೇ ಪರ್ಟಿಕ್ಯುಲರ್ ಬ್ರ್ಯಾಂಡ್ನಲ್ಲಿ ಶಾಪ್ ಮಾಡಲ್ಲ. ನಾವು ಸ್ಥಳೀಯ ಅಂಗಡಿಗಳಲ್ಲಿ ಖರೀದಿ ಮಾಡುತ್ತೇವೆ. ಹೀಗಾಗಿ, ಬ್ರ್ಯಾಂಡ್ ಅನ್ನೋದು ಇಲ್ಲ’ ಎಂದಿದ್ದಾರೆ ಅವರು. ಸಿತಾರಾ ಅವರ ಮಾತು ಅನೇಕರಿಗೆ ಇಷ್ಟ ಆಗಿದೆ. ಸ್ಟಾರ್ ಹೀರೋನ ಮಗಳಾದರೂ ಅವರ ಸರಳತೆ ಅನೇಕರಿಗೆ ಇಷ್ಟ ಆಗಿದೆ.
ಇದನ್ನೂ ಓದಿ: ಈ ಫೋಟೋದಲ್ಲಿರೋ ಬಾಲಕಿ ಈಗ ಸ್ಟಾರ್ ನಟಿ; ಕನ್ನಡದಲ್ಲೂ ಮಿಂಚಿದ ಇವರನ್ನು ಗುರುತಿಸಬಲ್ಲಿರಾ?
ಸಿತಾರಾ ಚಿತ್ರರಂಗಕ್ಕೆ ಶೀಘ್ರವೇ ಸಿನಿಮಾ ಲೋಕಕ್ಕೆ ಕಾಲಿಡುತ್ತಾರಾ ಎಂಬ ಪ್ರಶ್ನೆ ಅವರ ಫ್ಯಾನ್ಸ್ಗೆ ಅನೇಕ ಬಾರಿ ಮೂಡಿದೆ ಎಂದರೂ ತಪ್ಪಾಗಲಾರದು. ಮಹೇಶ್ ಬಾಬು ಅವರು ಹೀರೋ ಆಗಿರುವುದರಿಂದ ಸಿತಾರಾ ಅವರನ್ನು ಲಾಂಚ್ ಮಾಡಲು ಅನೇಕರು ಮುಂದೆ ಬರುತ್ತಾರೆ. ಸದ್ಯ ಅವರಿಗಿನ್ನೂ 13-14 ವರ್ಷ ವಯಸ್ಸು. ಶಿಕ್ಷಣ ಪೂರ್ಣಗೊಂಡ ಬಳಿಕ ಅವರು ಬಣ್ಣದ ಲೋಕಕ್ಕೆ ಕಾಲಿಡಬಹುದು ಎಂದು ಊಹಿಸಲಾಗುತ್ತಿದೆ.
ಮಹೇಶ್ ಬಾಬು ಅವರು ರಾಜಮೌಳಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಈವರೆಗೆ ಆಗಿಲ್ಲ ಅನ್ನೋದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ