‘ದೃಶ್ಯಂ 3’ ಬಜೆಟ್ ಎಷ್ಟು? ಜಾರ್ಜ್‌ಕುಟ್ಟಿ ಪಾತ್ರಕ್ಕೆ ಮೋಹನ್‌ಲಾಲ್ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

ದೃಶ್ಯಂ 3 ಬ್ಲಾಕ್‌ಬಸ್ಟರ್ ಸಿನಿಮಾವಾಗಿದ್ದು, ಅದರ ಬೃಹತ್ ಬಜೆಟ್ ಮತ್ತು ನಟ-ನಟಿಯರ ಸಂಭಾವನೆ ವಿವರಗಳು ಬಹಿರಂಗವಾಗಿವೆ. ಮೋಹನ್‌ಲಾಲ್ (ಜಾರ್ಜ್‌ಕುಟ್ಟಿ) ಬರೋಬ್ಬರಿ 20 ಕೋಟಿ ರೂ. ಪಡೆದಿದ್ದಾರೆ. ಅನ್ಸಿಬಾ ಹಾಸನ್ 1 ಕೋಟಿ, ಮೀನಾ 75 ಲಕ್ಷ, ಸಿದ್ದಿಕಿ 60 ಲಕ್ಷ ಹಾಗೂ ಎಸ್ತರ್ ಅನಿಲ್ 25 ಲಕ್ಷ ರೂ. ಸಂಭಾವನೆ ಪಡೆದಿದ್ದಾರೆ. ಈ ಚಿತ್ರ ನಾಲ್ಕು ದಿನಗಳಲ್ಲಿ 141 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ.

ದೃಶ್ಯಂ 3 ಬಜೆಟ್ ಎಷ್ಟು? ಜಾರ್ಜ್‌ಕುಟ್ಟಿ ಪಾತ್ರಕ್ಕೆ ಮೋಹನ್‌ಲಾಲ್ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ
ದೃಶ್ಯಂ 3
Image Credit source: Drishyam 3
Edited By:

Updated on: May 25, 2026 | 8:10 AM

ಮೋಹನ್‌ಲಾಲ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ದೃಶ್ಯಂ 3’ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದ್ದು, ಕಲೆಕ್ಷನ್‌ನಲ್ಲಿ ಹೊಸ ದಾಖಲೆ ಬರೆಯುತ್ತಿರೋದು ಗೊತ್ತೇ ಇದೆ. ಇದರ ನಡುವೆ, ಈ ಚಿತ್ರದ ಒಟ್ಟು ಬಜೆಟ್ ಎಷ್ಟು ಮತ್ತು ಇದರಲ್ಲಿ ನಟಿಸಿರುವ ಪ್ರಮುಖ ಪಾತ್ರಧಾರಿಗಳು ಎಷ್ಟು ಸಂಭಾವನೆ ಪಡೆದಿದ್ದಾರೆ ಎಂಬ ಕುತೂಹಲಕಾರಿ ಮಾಹಿತಿ ಹೊರಬಿದ್ದಿದೆ.

ಬಿಗ್ ಬಜೆಟ್‌ನ ಸಿನಿಮಾ

‘ರಿಪಬ್ಲಿಕ್ ವರ್ಲ್ಡ್’ ವರದಿಯ ಪ್ರಕಾರ, ‘ದೃಶ್ಯಂ 3’ ಚಿತ್ರವನ್ನು ಈ ಸರಣಿಯ ಉಳಿದ ಎರಡು ಚಿತ್ರಕ್ಕಿಂತ ಹೆಚ್ಚಿನ ಬಜೆಟ್​​ನಲ್ಲಿ ನಿರ್ಮಿಸಲಾಗಿದೆಯಂತೆ. ನಾಲ್ಕು ದಿನಕ್ಕೆ 141 ಕೋಟಿ ರೂಪಾಯಿ ಗಳಿಸಿರೋ ಈ ಸಿನಿಮಾ, ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ.

ಚಿತ್ರದ ನಟ-ನಟಿಯರ ಸಂಭಾವನೆ ವಿವರ:

ಮೋಹನ್‌ಲಾಲ್ (ಜಾರ್ಜ್‌ಕುಟ್ಟಿ): ಚಿತ್ರದ ಮುಖ್ಯ ನಾಯಕ ಮೋಹನ್‌ಲಾಲ್ ಈ ಭಾಗಕ್ಕೆ ಬರೋಬ್ಬರಿ 20 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 2013ರ ಮೊದಲ ಭಾಗಕ್ಕೆ ಕೇವಲ 5-6 ಕೋಟಿ ಹಾಗೂ ಎರಡನೇ ಭಾಗಕ್ಕೆ 10-12 ಕೋಟಿ ಪಡೆದಿದ್ದ ಅವರು, ಈ ಬಾರಿ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ.

ಅನ್ಸಿಬಾ ಹಾಸನ್ (ಅಂಜು ಜಾರ್ಜ್): ಜಾರ್ಜ್‌ಕುಟ್ಟಿ ಹಿರಿಯ ಮಗಳ ಪಾತ್ರ ಮಾಡಿರುವ ಅನ್ಸಿಬಾ ಅವರಿಗೆ ಈ ಬಾರಿ ಭಾರಿ ಬೇಡಿಕೆ ಸಿಕ್ಕಿದ್ದು, ಸುಮಾರು 1 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿದ್ದಾರೆ.

ಮೀನಾ (ರಾಣಿ ಜಾರ್ಜ್): ಜಾರ್ಜ್‌ಕುಟ್ಟಿ ಪತ್ನಿಯಾಗಿ ನಟಿಸಿರುವ ಮೀನಾ ಅವರು 75 ಲಕ್ಷ ರೂಪಾಯಿ ಪಡೆದಿದ್ದಾರೆ. ಹಿಂದಿನ ಭಾಗಗಳಿಗೆ ಇವರು 15 ಮತ್ತು 25 ಲಕ್ಷ ಪಡೆದಿದ್ದರು.

ಸಿದ್ದಿಕಿ (ಪ್ರಭಾಕರ್): ಹಿರಿಯ ನಟ ಸಿದ್ದಿಕಿ ಅವರು ತಮ್ಮ ಅದ್ಭುತ ನಟನೆಗೆ 60 ಲಕ್ಷ ರೂಪಾಯಿ ಸಂಭಾವನೆ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ‘ದೃಶ್ಯಂ 3’ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ ಕಣ್ಣೀರು ಹಾಕಿದ ನಟ ಮೋಹನ್‌ಲಾಲ್

ಎಸ್ತರ್ ಅನಿಲ್ (ಅನು ಜಾರ್ಜ್): ಕಿರಿಯ ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿರುವ ಎಸ್ತರ್ ಅನಿಲ್ 25 ಲಕ್ಷ ರೂಪಾಯಿ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us