
ದುಲ್ಕರ್ ಸಲ್ಮಾನ್ ಅವರು ದಕ್ಷಿಣ ಭಾರತದ ಹ್ಯಾಂಡ್ಸಂ ಹೀರೋಗಳಲ್ಲಿ ಒಬ್ಬರು. ಅವರಿಗೆ ಚಿತ್ರರಂಗದಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ದುಲ್ಕರ್ ಸಲ್ಮಾನ್ ಅವರು ಮೂಗಿನ ಸರ್ಜರಿ ಮಾಡಿಸಿ ಕೊಂಡಿದ್ರಾ? ಹೀಗೊಂದು ಪ್ರಶ್ನೆ ಎಲ್ಲರಲ್ಲೂ ಮೂಡುವಂತೆ ಆಗಿದೆ. ಅದಕ್ಕೆ ಕಾರಣ ಆಗಿರೋದು ಅವರ ಹಳೆಯ ವೈರಲ್ ಆಗಿರೋ ಫೋಟೋ. ಈ ಫೋಟೋಗೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ದುಲ್ಕರ್ ಸಲ್ಮಾನ್ ಅವರು ಮಾಲಿವುಡ್ನವರು. ಅವರ ತಂದೆ ಮಮ್ಮೂಟಿ ಅವರು ಮಾಲಿವುಡ್ನಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಹೀಗಾಗಿ, ದುಲ್ಕರ್ ಅವರಿಗೆ ಸುಲಭದಲ್ಲಿ ಚಿತ್ರರಂಗಕ್ಕೆ ಅವಕಾಶ ಸಿಕ್ಕಿತು. ಅವರು ತಮ್ಮನ್ನು ತಾವು ಸಾಬೀತು ಮಾಡಿಕೊಂಡರು. ದುಲ್ಕರ್ ಸಲ್ಮಾನ್ ಅವರು ಈ ಮೊದಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋ ವೈರಲ್ ಆಗಿದೆ.
ಚಿತ್ರರಂಗದಲ್ಲಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಳ್ಳುವುದು ದೊಡ್ಡ ವಿಚಾರವೇ ಅಲ್ಲ. ಅನೇಕ ಸೆಲೆಬ್ರಿಟಿಗಳು ಇದನ್ನು ಮಾಡಿಸಿಕೊಂಡಿದ್ದಾರೆ. ಇದು ಬಾಲಿವುಡ್ನಲ್ಲಿ ಸರ್ವೇ ಸಾಮಾನ್ಯ. ಹಾಗಂತ ಕೇವಲ ನಟಿಯರು ಮಾತ್ರ ಇದನ್ನು ಮಾಡೋದಿಲ್ಲ. ಬದಲಿಗೆ ಹೀರೋಗಳು ಕೂಡ ಇದನ್ನು ಮಾಡಿಸಿದ್ದಾರೆ ಅನ್ನೋದು ವಿಶೇಷ.
ದುಲ್ಕರ್ ಸಲ್ಮಾನ್ ಅವರು ಮೂಗು ಮೊದಲು ದೊಡ್ಡದಾಗಿತ್ತು. ಈಗ ಅವರ ಮೂಗು ಅಷ್ಟು ದೊಡ್ಡದಾಗಿಲ್ಲ. ಅವರ ಹಳೆಯ ಫೋಟೋಗಳ ಜೊತೆ ಹೋಲಿಕೆ ಮಾಡುತ್ತಾ ಇದ್ದಾರೆ. ಅನೇಕರು ದುಲ್ಕರ್ ಸಲ್ಮಾನ್ ಅವರು ಮೂಗಿನ ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಹೀರೋ ಆಗಬೇಕು ಎಂದರೆ ಇಷ್ಟು ಚಿಕ್ಕ ಸರ್ಜರಿ ಮಾಡಿಸಿಕೊಂಡಿದ್ದರಲ್ಲಿ ತಪ್ಪಿಲ್ಲ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ದುಲ್ಕರ್ ಸಲ್ಮಾನ್ ಬಳಿ ಇರುವ ಕಾರುಗಳು ಬಾಲಿವುಡ್ ಸ್ಟಾರ್ ನಟರ ಬಳಿಯೂ ಇಲ್ಲ!
ಸದ್ಯ ದುಲ್ಕರ್ ಸಲ್ಮಾನ್ ಅವರು ‘ಲಕ್ಕಿ ಭಾಸ್ಕರ್’ ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಬ್ಯಾಂಕ್ನಲ್ಲಿ ಕೆಲಸ ಮಾಡುವ ಸಾಮಾನ್ಯ ವ್ಯಕ್ತಿ ನೂರಾರು ಕೋಟಿ ರೂಪಾಯಿ ಒಡೆಯ ಆಗೋದು ಹೇಗೆ ಎನ್ನುವ ಕಥೆಯನ್ನು ಸಿನಿಮಾ ಹೊಂದಿದೆ. ದೀಪಾವಳಿ ಪ್ರಯುಕ್ತ ಚಿತ್ರ ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಈಗ ಸಿನಿಮಾ ಒಟಿಟಿಗೆ ಬಂದು ಧೂಳೆಬ್ಬಿಸುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.