‘ಆ ಶಬ್ದ ಹೇಳಿದ್ರೆ ಚಪ್ಪಲಿಲಿ ಹೊಡೀರಿ’; ಶಿಶಿರ್ಗೆ ಚೈತ್ರಾ ಚಾಲೆಂಜ್
ಚೈತ್ರಾ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಆಡುವ ಮಾತುಗಳು ಮಿತಿ ಮೀರುತ್ತವೆ. ಇದರಿಂದ ಅನೇಕರಿಗೆ ಬೇಸರ ಆಗಿದ್ದು ಇದೆ. ಈ ವಿಚಾರದಲ್ಲಿ ಚೈತ್ರಾ ಹಲವು ಬಾರಿ ಎಡವಿದ್ದಾರೆ.
ಬಿಗ್ ಬಾಸ್ನಲ್ಲಿ ಚೈತ್ರಾ ಹಾಗೂ ಶಿಶಿರ್ ಮಧ್ಯೆ ದೊಡ್ಡ ವಾಕ್ ಸಮರ ನಡೆದಿದೆ. ಅದಕ್ಕೆ ಕಾರಣ ಆಗಿರೋದು ಚೈತ್ರಾ ಬಳಕೆ ಮಾಡಿದ ಪದ. ಶಿಶಿರ್ ಜೊಲ್ಲ, ಹೆಣ್ಣುಮಕ್ಕಳ ಹಿಂದೆ ತಿರುಗುತ್ತಾ ಇರುತ್ತಾನೆ ಎಂಬ ಪದವನ್ನು ಚೈತ್ರಾ ಬಳಕೆ ಮಾಡಿದ್ದಾಗಿ ತ್ರಿವಿಕ್ರಂ ಹೇಳಿದ್ದಾರೆ. ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ಆಗಿವೆ. ಚೈತ್ರಾ, ತ್ರಿವಿಕ್ರಂ ಹಾಗೂ ಶಿಶಿರ್ ಮಧ್ಯೆ ಈ ವಿಚಾರಕ್ಕೆ ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ.
ಚೈತ್ರಾ ಅವರು ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಆದರೆ, ಕೆಲವೊಮ್ಮೆ ಅವರು ಆಡುವ ಮಾತುಗಳು ಮಿತಿ ಮೀರುತ್ತವೆ. ಇದರಿಂದ ಅನೇಕರಿಗೆ ಬೇಸರ ಆಗಿದ್ದು ಇದೆ. ಈ ವಿಚಾರದಲ್ಲಿ ಚೈತ್ರಾ ಹಲವು ಬಾರಿ ಎಡವಿದ್ದಾರೆ. ಈಗ ಚೈತ್ರಾ ಅವರು ತಾವು ಆ ಪದ ಬಳಕೆ ಮಾಡಿಲ್ಲ ಎಂದು ಹೇಳಿದರೆ, ತ್ರಿವಿಕ್ರಂ ಅವರು ಚೈತ್ರಾ ಆ ಪದ ಬಳಕೆ ಮಾಡಿದ್ದಾರೆ ಎಂದು ವಾದಿಸುತ್ತಿದ್ದಾರೆ.
ಚೈತ್ರಾ ಹಾಗೂ ತ್ರಿವಿಕ್ರಂ ಮಧ್ಯೆ ಜಗಳ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ತ್ರಿವಿಕ್ರಂ ಅವರು ಬಾಯ್ತಪ್ಪಿ ಚೈತ್ರಾ ಅವರು ಶಿಶಿರ್ ವಿರುದ್ಧ ಈ ರೀತಿ ಹೇಳಿದ್ದರು ಎಂದು ಹೇಳಿಕೆ ಕೊಟ್ಟರು. ಅಲ್ಲಿಂದ ಚರ್ಚೆಗಳು ಆರಂಭ ಆದವು. ಶಿಶಿರ್ ಅವರಿಗೆ ಈ ವಿಚಾರ ಸಾಕಷ್ಟು ಬೇಸರ ಮೂಡಿಸಿತು. ‘ನಾನು ಆ ಪದ ಬಳಕೆ ಮಾಡಿಲ್ಲ’ ಎಂದು ಚೈತ್ರಾ ಹೇಳಿದರೆ, ತ್ರಿವಿಕ್ರಂ ಅವರು ‘ನೀವು ಈ ಪದ ಬಳಕೆ ಮಾಡಿದ್ದೀರಿ’ ಎಂದು ಒತ್ತಿ ಹೇಳಿದರು.
ಇದನ್ನೂ ಓದಿ: ‘ತಲೆ ಸುತ್ತಿ ಬಿದ್ದು ಆಗಾಗ ಹೊರಗೆ ಹೋಗ್ತೀರಿ’: ಚೈತ್ರಾಗೆ ತಿವಿದ ಭವ್ಯಾ
‘ನಾನು ಆ ಶಬ್ದ (ಜೊಲ್ಲು) ಬಳಕೆ ಮಾಡಿದ್ದರೆ ನನಗೆ ನೀವು ಕಾಲಿನಲ್ಲಿ ಹಾಕಿಕೊಂಡಿದ್ದರಿಂದ ಹೊಡೆಯಿರಿ’ ಎಂದು ಶಿಶಿರ್ಗೆ ಚಾಲೆಂಜ್ ಮಾಡಿದರು ಚೈತ್ರಾ. ಆದರೆ, ಈ ಪದವನ್ನು ಅವರು ನಿಜಕ್ಕೂ ಹೇಳಿದ್ದಾರಾ ಅಥವಾ ಇಲ್ಲವಾ ಎಂಬ ಪ್ರಶ್ನೆಗೆ ಉತ್ತರ ಸಿಗೋದು ಕಷ್ಟ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:28 am, Fri, 6 December 24