‘ಮೂಕುತ್ತಿ ಅಮ್ಮನ್’2 ರಿಲೀಸ್, ವಿಜಯ್ ನಟನೆಗೆ ತಮಿಳು ಪ್ರೇಕ್ಷಕರ ಮೆಚ್ಚುಗೆ

Duniya Vijay in Mookuthi Amman 2: ದುನಿಯಾ ವಿಜಯ್ ಕನ್ನಡ ಚಿತ್ರರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈಗಾಗಲೇ ಅವರು ಕೆಲ ತೆಲುಗು ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅವರು ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದು, ಆ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

‘ಮೂಕುತ್ತಿ ಅಮ್ಮನ್’2 ರಿಲೀಸ್, ವಿಜಯ್ ನಟನೆಗೆ ತಮಿಳು ಪ್ರೇಕ್ಷಕರ ಮೆಚ್ಚುಗೆ
Duniya Vijay

Updated on: Nov 08, 2026 | 3:37 PM

ಮುಖ್ಯಾಂಶಗಳು

  • ದುನಿಯಾ ವಿಜಯ್ ನಟಿಸಿರುವ ಮೊದಲ ತಮಿಳು ಸಿನಿಮಾ
  • ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ದುನಿಯಾ ವಿಜಯ್ ನಟನೆ
  • ವಿಜಯ್ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಪ್ರೇಕ್ಷಕರು

ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕ. ನಟನೆ ಮತ್ತು ನಿರ್ದೇಶನ ಎರಡರಲ್ಲೂ ಯಶಸ್ಸನ್ನು ದುನಿಯಾ ವಿಜಯ್ ಕಂಡಿದ್ದಾರೆ. ಅಂದಹಾಗೆ ದುನಿಯಾ ವಿಜಯ್ ಕನ್ನಡ ಚಿತ್ರರಂಗಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈಗಾಗಲೇ ಅವರು ಕೆಲ ತೆಲುಗು ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಅವರು ತಮಿಳು ಸಿನಿಮಾ ಒಂದರಲ್ಲಿ ನಟಿಸಿದ್ದು, ಆ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ನಯನತಾರಾ ನಟಿಸಿ, ಹಿರಿಯ ನಿರ್ದೇಶಕ ಸುಂದರ್ ಸಿ ನಿರ್ದೇಶನ ಮಾಡಿರುವ ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ದುನಿಯಾ ವಿಜಯ್ ನಟನೆ ಮಾಡಿದ್ದರು. ಇದೀಗ ನವೆಂಬರ್ 6ಕ್ಕೆ ಸಿನಿಮಾ ರಿಲೀಸ್ ಆಗಿದ್ದು, ಬಾಕ್ಸ್ ಆಫೀಸ್​​ನಲ್ಲಿ ಉತ್ತಮ ಪ್ರತಿಕ್ರಿಯೆಯನ್ನೇ ಗಳಿಸುತ್ತಿದೆ. ದು ದುನಿಯಾ ವಿಜಯ್ ಅವರ ಮೊದಲ ತಮಿಳು ಸಿನಿಮಾ ಆಗಿದ್ದು, ಅವರ ನಟನೆಗೂ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Loading...

ದುನಿಯಾ ವಿಜಯ್ ಅವರು ‘ಮೂಕುತ್ತಿ ಅಮ್ಮನ್ 2’ ಸಿನಿಮಾದ ವಿಲನ್ ಪಾತ್ರದಲ್ಲಿ ನಟನೆ ಮಾಡಿದ್ದಾರೆ. ಸಿನಿಮಾನಲ್ಲಿ ಅವರದ್ದು ಎರಡು ಭಿನ್ನ ಲುಕ್​​ನ ಪಾತ್ರ. ಸಿನಿಮಾನಲ್ಲಿ ರೆಜಿನಾ ಕೆಸಾಂಡ್ರಾ ಹಾಗೂ ವಿಜಯ್ ಅವರುಗಳದ್ದು ಪ್ರಮುಖ ವಿಲನ್​​ಗಳ ಪಾತ್ರ. ‘ಮೂಕುತ್ತಿ ಅಮ್ಮನ್ 2’ ಸಿನಿಮಾದ ವಿಮರ್ಶೆ ಮಾಡಿರುವ ಹಲವರು ದುನಿಯಾ ವಿಜಯ್ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿಜಯ್ ಅವರ ಕೆಲವು ದೃಶ್ಯಗಳ ರೀಲ್​​ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ:‘ಸಿಟಿ ಲೈಟ್ಸ್’ ಬೆಂಬಲಿಸಿದ ದೊಡ್ಮನೆಯವರಿಗೆ ದುನಿಯಾ ವಿಜಯ್ ಧನ್ಯವಾದ: ವಿಡಿಯೋ

ದುನಿಯಾ ವಿಜಯ್ ಅವರು ‘ಮೂಕುತ್ತಿ ಅಮ್ಮನ್ 2’ ಸಿನಿಮಾನಲ್ಲಿ ರುಧಿರನ್ ಮತ್ತು ಈಶ್ವರನ್ ಎಂಬ ಎರಡು ಪಾತ್ರಗಳಲ್ಲಿ ನಟನೆ ಮಾಡಿದ್ದಾರೆ. ಒಂದು ಪಾತ್ರ 2000 ವರ್ಷ ಹಿಂದೆ ನಡೆಯುವ ಕತೆಯಲ್ಲಿ ಬರುವ ಪಾತ್ರವಾದರೆ ಮತ್ತೊಂದು ಆಧುನಿಕ ಯುಗದಲ್ಲಿ ಬರುವ ಪಾತ್ರವಾಗಿದೆ. ಎರಡೂ ಪಾತ್ರಗಳಲ್ಲಿ ದುನಿಯಾ ವಿಜಯ್ ಉತ್ತಮವಾಗಿ ನಟಿಸಿದ್ದಾರೆ ಎನ್ನಲಾಗಿದೆ.

ದುನಿಯಾ ವಿಜಯ್ ಅವರಿಗೆ ಪರಭಾಷೆ ಸಿನಿಮಾಗಳು ಹೊಸವಲ್ಲ. ಈ ಹಿಂದೆ ಅವರು ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟಿಸಿರುವ ‘ವೀರ ನರಸಿಂಹ ರೆಡ್ಡಿ’ ಸಿನಿಮಾನಲ್ಲಿ ನಟಿಸಿದ್ದರು. ಆ ಸಿನಿಮಾದ ನಟನೆಗೆ ಅವರಿಗೆ ಸೈಮಾ ಅವಾರ್ಡ್ ಸಹ ಬಂದಿತ್ತು. ಇನ್ನು ಇದೀಗ ಅವರು ಪುರಿ ಜಗನ್ನಾಥ್ ನಿರ್ದೇಶನ ಮಾಡಿ ವಿಜಯ್ ಸೇತುಪತಿ, ಟಬು ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಸ್ಲಂ ಡಾಗ್: 33 ಟೆಂಪಲ್ ರೋಡ್’ ಸಿನಿಮಾನಲ್ಲಿ ನಟಿಸಿದ್ದಾರೆ. ಆ ಸಿನಿಮಾ ಸಹ ಇದೇ ತಿಂಗಳಲ್ಲಿ ರಿಲೀಸ್ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us