AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

2030ಕ್ಕೆ ನಟನೆಯಿಂದ ರಣ್​​ಬೀರ್ ಕಪೂರ್ ನಿವೃತ್ತಿ: ನಟ ಹೇಳಿದ್ದೇನು?

ರಣ್​​ಬೀರ್ ಕಪೂರ್ ಹೇಳಿರುವಂತೆ, ಇದು ಅವರ ನಟನೆಯ ಕೊನೆಯ ದಶಕವಂತೆ. ಅಂದರೆ 2030ಕ್ಕೆ ಅವರು ನಟನೆಯನ್ನು ನಿಲ್ಲಿಸಲಿದ್ದಾರಂತೆ. ಬಿಬಿಸಿ ಏಷ್ಯನ್​ ನ್ಯೂಸ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿ, ತಮಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ ಎಂದರು. ಅದೇ ಸಂದರ್ಶನದಲ್ಲಿ ‘ನಟನಾಗಿ ಇದು ನನ್ನ ಕೊನೆಯ ದಶಕ’ ಎಂದರು. ಆ ಮೂಲಕ ತಾವು 2030ಕ್ಕೆ ನಟನೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.

2030ಕ್ಕೆ ನಟನೆಯಿಂದ ರಣ್​​ಬೀರ್ ಕಪೂರ್ ನಿವೃತ್ತಿ: ನಟ ಹೇಳಿದ್ದೇನು?
Ranbir Kapoor
ಮಂಜುನಾಥ ಸಿ.
|

Updated on: Nov 08, 2026 | 12:07 PM

Share

ಮುಖ್ಯಾಂಶಗಳು

  • ನಿವೃತ್ತಿಯ ಮಾತಾಡಿದ ನಟ ರಣ್​ಬೀರ್ ಕಪೂರ್
  • ನಿರ್ದೇಶನ ಮಾಡಲಿರುವ ರಣ್​ಬೀರ್ ಕಪೂರ್
  • ಹೊಸ ಕತೆ ಬರೆಯುತ್ತಿದ್ದಾರಂತೆ ರಣ್​ಬೀರ್

ರಣ್​​ಬೀರ್ ಕಪೂರ್, ಭಾರತೀಯ ಚಿತ್ರರಂಗದ ಸ್ಟಾರ್ ನಟ. ರಣ್​​ಬೀರ್ ಕಪೂರ್ ಅನ್ನು ಪರಿಪೂರ್ಣ ನಟ ಎಂದೇ ಕರೆಯುತ್ತಾರೆ ಸಿನಿ ಪಂಡಿತರು. ಪಾತ್ರ ಯಾವುದೇ ಆಧರು ಅದರಲ್ಲಿ ಜೀವ ತುಂಬಬಲ್ಲ ಅಪರೂಪದ ಸ್ಟಾರ್ ನಟ ಅವರು. ಈ ಹಿಂದೆ ತೆರೆಗೆ ಬಂದಿದ್ದ ‘ಅನಿಮಲ್​’ನಲ್ಲಿ ಮಾಸ್ ಆಗಿ ನಟಿಸಿದ್ದ ರಣ್​​ಬೀರ್, ಈಗ ‘ರಾಮಾಯಣ’ದಲ್ಲಿ ರಾಮನಾಗಿ ನಟಿಸುತ್ತಿದ್ದಾರೆ. ಎರಡೂ ಪಾತ್ರಗಳಲ್ಲಿಯೂ ಅದ್ಭುತವಾದ ನಟನೆಯನ್ನು ರಣ್​​ಬೀರ್ ನೀಡಿದ್ದಾರೆ. ರಣ್​​ಬೀರ್ ಅಂಥಹಾ ನಟರು ಭಾರತೀಯ ಚಿತ್ರರಂಗದಲ್ಲಿ ಕಡಿಮೆ. ಆದರೆ ಇದೀಗ ರಣ್​​ಬೀರ್ ಅವರು ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಅದಕ್ಕೆ ಸಮಯವನ್ನು ಸಹ ನಿಗದಿಪಡಿಸಿದ್ದಾರೆ.

ರಣ್​​ಬೀರ್ ಕಪೂರ್ ಹೇಳಿರುವಂತೆ, ಇದು ಅವರ ನಟನೆಯ ಕೊನೆಯ ದಶಕವಂತೆ. ಅಂದರೆ 2030ಕ್ಕೆ ಅವರು ನಟನೆಯನ್ನು ನಿಲ್ಲಿಸಲಿದ್ದಾರಂತೆ. ಬಿಬಿಸಿ ಏಷ್ಯನ್​ ನ್ಯೂಸ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಮಾತನಾಡಿ, ತಮಗೆ ಸಿನಿಮಾ ನಿರ್ದೇಶನ ಮಾಡುವ ಆಸೆ ಇದೆ ಎಂದರು. ಅದೇ ಸಂದರ್ಶನದಲ್ಲಿ ‘ನಟನಾಗಿ ಇದು ನನ್ನ ಕೊನೆಯ ದಶಕ’ ಎಂದರು. ಆ ಮೂಲಕ ತಾವು 2030ಕ್ಕೆ ನಟನೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ತಾವೊಂದು ಚಿತ್ರಕತೆ ಬರೆಯಲು ಆರಂಭಿಸಿರುವುದಾಗಿ ರಣ್​​ಬೀರ್ ಕಪೂರ್ ಹೇಳಿದ್ದಾರೆ. ಆದರೆ ಈ ಚಿತ್ರಕತೆ ಬರೆಯುವುದು ಅವರು ನಿರೀಕ್ಷೆ ಮಾಡಿದ್ದಕ್ಕಿಂತಲೂ ಸವಾಲಿನ ಕೆಲಸ ಆಗಿದೆಯಂತೆ. ಚಿತ್ರಕತೆ ಬರೆಯಲು ಆರಂಭಿಸಿದಾಗಿನಿಂತಲೂ ತಮಗೆ ನಿರ್ದೇಶಕರು ಹಾಗೂ ಬರಹಗಾರರ ಮೇಲೆ ಹೆಚ್ಚಿನ ಗೌರವ ಬಂದಿದೆ ಎಂದು ಅವರು ಹೇಳಿದ್ದಾರೆ. ‘ನಾನು ಕೆಲ ತಿಂಗಳ ಹಿಂದಷ್ಟೇ ಸ್ಕ್ರಿಪ್ಟ್ ಬರೆಯಲು ಶುರುಮಾಡಿದೆ, ಕಥೆ ಸೃಷ್ಟಿಸುವುದು ತುಂಬಾ ಕಷ್ಟ. ಬರಹಗಾರರು ಮತ್ತು ಸೃಷ್ಟಿಕರ್ತರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರು ಹೇಗೆ ಒಂದು ಕತೆಯನ್ನು ಸೃಷ್ಟಿಸುತ್ತಾರೆ ಆ ಅನುಭವವೇ ರೋಮಾಂಚನಕಾರಿಯಾಗಿದೆ, ಏಕೆಂದರೆ ಸಂಗೀತಗಾರನ ನಂತರ ಸೃಜನಶೀಲತೆಯ ಉತ್ತುಂಗವನ್ನು ಅನುಭವಿಸುವ ವ್ಯಕ್ತಿ ಯಾರಾದರೂ ಇದ್ದರೆ ಅದು ನಿರ್ದೇಶಕ ಎಂದು ನಾನು ಬಲವಾಗಿ ನಂಬುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ:ರಣ್​​ಬೀರ್ ಕಪೂರ್ ಧರಿಸಿದ್ದ ಗಡಿಯಾರದ ಬೆಲೆ ಎಷ್ಟು ಲಕ್ಷ ಗೊತ್ತೆ?

ನಟನೊಬ್ಬನ ಖುಷಿ ಮೇಲ್ಮೈ ಮಟ್ಟದ್ದಾಗಿರುತ್ತದೆ, ಆದರೆ ನಿರ್ದೇಶಕನೊಬ್ಬ ಸಿನಿಮಾ ನಿರ್ದೇಶಿಸುವಾಗ, ಅದು ಎಷ್ಟೇ ಒಳ್ಳೆಯದಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ಒಂದು ಕಥೆಯನ್ನು ಹೇಳಲು ಮತ್ತು ನಿಮ್ಮ ಕಥೆಯನ್ನು ಹೇಳಲು ಇಷ್ಟು ಜನರನ್ನು ಒಟ್ಟುಗೂಡಿಸುವ ಅವಕಾಶ ಸಿಗುವುದೇ ಒಂದು ಸುಂದರ ಅನುಭವ. ನನಗೂ ಅದನ್ನು ಮಾಡುವ ಶಕ್ತಿ, ಕ್ರಿಯಾಶೀಲತೆ ಸಿಗಲಿ ಎಂದು ಆಶಿಸುತ್ತೇನೆ’ ಎಂದು ರಣ್​​ಬೀರ್ ಕಪೂರ್ ಹೇಳಿದ್ದಾರೆ.

ತಮ್ಮ ಮೊದಲ ಸಿನಿಮಾ ಹೇಗಿರಬೇಕು ಎಂಬ ಆಸೆಯ ಬಗ್ಗೆ ಮಾತನಾಡಿದ ಅವರು, ‘ಲೈಫ್ ಈಸ್ ಬ್ಯೂಟಿಫುಲ್’, ‘ಇಟ್ಸ್ ಎ ವಂಡರ್ಫುಲ್ ಲೈಫ್’ ಹಾಗೂ ರಾಜ್‌ಕುಮಾರ್ ಹಿರಾನಿ ಅವರ ಸಿನಿಮಾಗಳನ್ನು ತಮ್ಮ ಮೆಚ್ಚಿನವುಗಳೆಂದು ಹೆಸರಿಸಿದ ಅವರು, ಜನರಿಗೆ ಒಂದು ಹಿತವಾದ, ಒಳ್ಳೆಯ ಅನುಭವವನ್ನು ನೀಡುವ ಕೌಟುಂಬಿಕ ಡ್ರಾಮಾ ನಿರ್ಮಿಸಲು ಬಯಸುವುದಾಗಿ ತಿಳಿಸಿದರು.

‘ನಾನು ವರ್ಷದಲ್ಲಿ ಕೇವಲ 100-125 ದಿನಗಳು ಮಾತ್ರ ಕೆಲಸ ಮಾಡುತ್ತೇನೆ; ಕಥೆಗಳನ್ನು ಬರೆಯಲು ನನಗೆ ಸಾಕಷ್ಟು ಸಮಯವಿದೆ. ನಾನು ಯಾವಾಗಲೂ ಒಂದೇ ಸಿನಿಮಾ ಮಾಡುತ್ತಿದ್ದೆ, ನಂತರ ಮತ್ತೊಂದು ಸಿನಿಮಾದ ಕೆಲಸ ಆರಂಭಿಸುತ್ತಿದ್ದೆ. ಆದರೆ, ಇದು ನಟನಾಗಿ ನನ್ನ ಕೊನೆಯ ದಶಕ ಎಂದುಕೊಳ್ಳುತ್ತೇನೆ. ಇಂತಹ ಪಾತ್ರಗಳನ್ನು ಮಾಡಲು ನನಗೆ ಮತ್ತೆ ಅವಕಾಶ ಸಿಗುತ್ತದೆಯೇ? ನಾನು ನಿರ್ದೇಶನದ ಕಡೆಗೆ ಮುಖಮಾಡಲು ಬಯಸುತ್ತೇನೆ. ಖಂಡಿತವಾಗಿಯೂ ನನ್ನನ್ನು ನಾನೇ ನಿರ್ದೇಶಿಸಿಕೊಳ್ಳಲು ಬಯಸುವುದಿಲ್ಲ. ನಾನು ಈಗಿರುವ ಕೆಲ ಸಿನಿಮಾಗಳನ್ನು ಮುಗಿಸಿ ನಿರ್ದೇಶನ ಕೈಗೆತ್ತಿಕೊಳ್ಳುತ್ತೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಪೋಲೆಂಡ್‌ನ ಕ್ರಾಕೋವ್‌ನಲ್ಲಿ ಗುಂಡಿನ ದಾಳಿ; 5 ಜನ ಸಾವು
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸ್ಟಿಂಗ್​​​ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್