AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಮಾಯಣ’ದ ನಡುವೆಯೂ ಸ್ಟಡಿಯಾಗಿ ನಿಂತ ಸೂರ್ಯ, ಗಳಿಕೆ ಎಷ್ಟು?

ತಮಿಳಿನ ಸ್ಟಾರ್ ನಟ ಸೂರ್ಯ ನಟಿಸಿದ್ದ ‘ಎತ್ತರಕ್ಕುಮ್’ (ಇಟಿ), ‘ಕಂಗುವ’, ‘ರೆಟ್ರೊ’ ಸಿನಿಮಾಗಳು ಸೋತಿದ್ದವು. ಒಂದು ಒಳ್ಳೆಯ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದ ಸೂರ್ಯಗೆ ಈ ವರ್ಷ ಅದೃಷ್ಟ ಖುಲಾಯಿಸಿದೆ. ಈ ವರ್ಷ ಸೂರ್ಯ ನಟಿಸಿದ ಎರಡು ಸಿನಿಮಾಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಇದೀಗ ಮೂರನೇ ಸಿನಿಮಾ ರಿಲೀಸ್ ಆಗಿದ್ದು ಆ ಸಿನಿಮಾ ಸಹ ಸೂಪರ್ ಹಿಟ್ ಆಗುವತ್ತ ದಾಪುಗಾಲಿಟ್ಟಿದೆ.

‘ರಾಮಾಯಣ’ದ ನಡುವೆಯೂ ಸ್ಟಡಿಯಾಗಿ ನಿಂತ ಸೂರ್ಯ, ಗಳಿಕೆ ಎಷ್ಟು?
Suriya Scene
ಮಂಜುನಾಥ ಸಿ.
|

Updated on: Nov 08, 2026 | 2:13 PM

Share

ಮುಖ್ಯಾಂಶಗಳು

  • ಸೂರ್ಯ ನಟನೆಯ ‘ಸೀನ್’ ಸಿನಿಮಾ ಕಲೆಕ್ಷನ್
  • ‘ಸೀನ್’ ಸಿನಿಮಾದ ಎರಡನೇ ಕಲೆಕ್ಷನ್
  • ಎರಡನೇ ದಿನ ಒಳ್ಳೆ ಗಳಿಕೆ ಮಾಡಿದೆ ಈ ಸಿನಿಮಾ

ತಮಿಳು ನಟ ಸೂರ್ಯ ಪಾಲಿಗೆ ಈ ವರ್ಷ ಅತ್ಯಂತ ಅದೃಷ್ಟದ ವರ್ಷ. 2021 ರ ‘ಜೈ ಭೀಮ್’ ಬಳಿಕ ಸೂರ್ಯ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸಿದ ಯಾವ ಸಿನಿಮಾ ಸಹ ಹಿಟ್ ಆಗಿರಲಿಲ್ಲ. ‘ಎತ್ತರಕ್ಕುಮ್’ (ಇಟಿ), ‘ಕಂಗುವ’, ‘ರೆಟ್ರೊ’ ಸಿನಿಮಾಗಳು ಸೋತಿದ್ದವು. ಒಂದು ಒಳ್ಳೆಯ ಹಿಟ್ ಸಿನಿಮಾಕ್ಕಾಗಿ ಕಾಯುತ್ತಿದ್ದ ಸೂರ್ಯಗೆ ಈ ವರ್ಷ ಅದೃಷ್ಟ ಖುಲಾಯಿಸಿದೆ. ಈ ವರ್ಷ ಸೂರ್ಯ ನಟಿಸಿದ ಎರಡು ಸಿನಿಮಾಗಳು ಈಗಾಗಲೇ ಸೂಪರ್ ಹಿಟ್ ಆಗಿವೆ. ಇದೀಗ ಮೂರನೇ ಸಿನಿಮಾ ರಿಲೀಸ್ ಆಗಿದ್ದು ಆ ಸಿನಿಮಾ ಸಹ ಸೂಪರ್ ಹಿಟ್ ಆಗುವತ್ತ ದಾಪುಗಾಲಿಟ್ಟಿದೆ.

ಸೂರ್ಯ ನಟನೆಯ ‘ಸೀನ್’ ಸಿನಿಮಾ ‘ರಾಮಾಯಣ’ದ ಜೊತೆಗೆ ರಿಲೀಸ್ ಆಗಿದೆ. ನವೆಂಬರ್ 6ರಂದು ಬಿಡುಗಡೆ ಆದ ಈ ಆಕ್ಷನ್ ಥ್ರಿಲ್ಲರ್ ಜೊತೆಗೆ ಹಾಸ್ಯವೂ ಬೆರೆತ ಸಿನಿಮಾ ಮೊದಲ ಹಾಗೂ ಎರಡನೇ ದಿನ ಭರ್ಜರಿ ಗಳಿಕೆ ಮಾಡಿದೆ ಆ ಮೂಲಕ ಸಿನಿಮಾ ಹಿಟ್ ಆಗುವ ಸ್ಪಷ್ಟ ಲಕ್ಷಣಗಳನ್ನು ಬಾಕ್ಸ್ ಆಫೀಸ್​​ನಲ್ಲಿ ತೋರಿಸಿದೆ.

‘ಸೀನ್’ ಸಿನಿಮಾ ಮೊದಲ ದಿನ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 33 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಸಿನಿಮಾ ಇದೇ ವರ್ಷ ಬಿಡುಗಡೆ ಆದ ಸೂರ್ಯ ನಟನೆಯ ‘ಕರುಪ್ಪು’ ಮತ್ತು ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾದ ಮೊದಲ ದಿನದ ಗಳಿಕೆಯನ್ನೂ ಸಹ ಹಿಂದಿಕ್ಕಿದೆ. ಇನ್ನು ಇದೇ ಸಿನಿಮಾ ಎರಡನೇ ದಿನ ಅಂದರೆ ಶನಿವಾರ ಗಳಿಕೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದು, ಎರಡನೇ ದಿನ ಈ ಸಿನಿಮಾ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 38 ಕೋಟಿ ಗಳಿಕೆ ಮಾಡಿದೆ. ಇನ್ನೂ ಭಾರತದಲ್ಲಿ ಸುಮಾರು 20 ಕೋಟಿ ಗಳಿಕೆ ಮಾಡಿದೆ. ಅಲ್ಲಿಗೆ ಸಿನಿಮಾದ ಈ ವರೆಗಿನ ಒಟ್ಟು ಗಳಿಕೆ 60 ಕೋಟಿ ದಾಟಿದೆ. ಕೆಲವೇ ದಿನಗಳಲ್ಲಿ ಈ ಸಿನಿಮಾ ಸಹ 100 ಕೋಟಿ ಗಳಿಕೆಯನ್ನು ದಾಟುವುದು ಖಾತ್ರಿ ಎನ್ನಲಾಗಿದೆ.

ಇದನ್ನೂ ಓದಿ:ಸನ್ನಿ ಡಿಯೋಲ್ ನಟನೆಯ ‘ಸೂರ್ಯ’ ಸಿನಿಮಾ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಣೆ

ಇನ್ನು ‘ಸೀನ್’ ಸಿನಿಮಾ ಅನ್ನು ಮಲಯಾಳಂನ ಸ್ಟಾರ್ ನಿರ್ದೇಶಕ ಜೀತು ಮಾಧವನ್ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಮಲಯಾಳಂನ ಸೂಪರ್ ಹಿಟ್ ‘ರೋಮಾಂಚನಂ’ ಮತ್ತು ‘ಆವೇಷಂ’ ಸಿನಿಮಾಗಳನ್ನು ಇವರೇ ನಿರ್ದೇಶಿಸಿದ್ದರು. ಮಲಯಾಳಂನ ‘ಬಾಲನ್’ ಸಿನಿಮಾಕ್ಕೆ ಕತೆ ಇವರದ್ದೇ ಆಗಿತ್ತು. ಇದೇ ಮೊದಲ ಬಾರಿಗೆ ಇವರು ತಮಿಳು ಸಿನಿಮಾ ನಿರ್ದೇಶಿಸಿದ್ದು ಸಿನಿಮಾ ಹಿಟ್ ಆಗಿದೆ. ಸಿನಿಮಾನಲ್ಲಿ ನಟಿ ನಾಜರಿಯಾ ನಾಯಕಿ. ವಿಲನ್ ಆಗಿ ಮಲಯಾಳಂ ಯುವ ಸ್ಟಾರ್ ನಟ ನಸ್ಲಿನ್ ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಹಾಸನಾಂಬೆ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಮುಗಿಬಿದ್ದ ಭಕ್ತರು
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ಕಾರ್ತಿಕ ಮಾಸದ ಆರಂಭದಲ್ಲೇ ಈ 4 ರಾಶಿಗಳಿಗೆ ರಾಜಯೋಗ! ನಿಮ್ಮ ರಾಶಿ ಹೇಗಿದೆ?
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ದೀಪಾವಳಿ ಹಬ್ಬದ ಖರೀದಿ ಭರಾಟೆ:  ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ಇಂದು ಈ ರಾಶಿಯವರು ಸಂಗಾತಿಯ ಸಲಹೆಯನ್ನು ಪಡೆದು ನಿರ್ಧಾರ ತೆಗೆದುಕೊಳ್ಳಿ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ದೇವಿರಮ್ಮ ಬೆಟ್ಟದಿಂದ ಜಾರಿಬಿದ್ದ ಯುವಕ: ಗಂಭೀರ ಗಾಯ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ
ಕರ್ನಾಟಕದ ಡಿಪಿಆರ್‌ ತಿರಸ್ಕರಿಸಲು ಪ್ರಧಾನಿಗೆ ತಮಿಳುನಾಡು ಸಿಎಂ ಪತ್ರ