AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಕಿಯ ಕನ್ನಡ ಭಕ್ತಿಗೀತೆ ಕೇಳಿ ಮೋದಿ ಮೆಚ್ಚುಗೆ; ಸೂರ್ಯಕುಮಾರ್ ಜೊತೆಗಿನ ವಿಡಿಯೋದಲ್ಲಿ ಏನಿದೆ?

ಭಾರತದ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ಪ್ರಧಾನಿ ಮೋದಿ ಅವರನ್ನು ಕುಟುಂಬದೊಂದಿಗೆ ಭೇಟಿಯಾದರು. 2026ರ T20 ವಿಶ್ವಕಪ್ ಗೆಲುವಿನ ಪದಕವನ್ನು ಪ್ರಧಾನಿಯೊಂದಿಗೆ ಹಂಚಿಕೊಂಡರು. ಮೋದಿ ಅವರು ಕನ್ನಡ ಗಣೇಶ ಭಕ್ತಿಗೀತೆ ಹಾಡಿದ ಬಾಲಕಿಯ ವಿಡಿಯೋವನ್ನು ಹಂಚಿಕೊಂಡು, ಸೂರ್ಯಕುಮಾರ್ ಯಾದವ್ ಅವರನ್ನು ಟ್ಯಾಗ್ ಮಾಡಿದರು. ಈ ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರೀಡೆ ಮತ್ತು ಸಂಸ್ಕೃತಿಯ ಸಮ್ಮಿಲನವನ್ನು ಎತ್ತಿ ಹಿಡಿದಿದೆ.

ಬಾಲಕಿಯ ಕನ್ನಡ ಭಕ್ತಿಗೀತೆ ಕೇಳಿ ಮೋದಿ ಮೆಚ್ಚುಗೆ; ಸೂರ್ಯಕುಮಾರ್ ಜೊತೆಗಿನ ವಿಡಿಯೋದಲ್ಲಿ ಏನಿದೆ?
Pm Modi
ಪೃಥ್ವಿಶಂಕರ
|

Updated on:Nov 06, 2026 | 5:10 PM

Share

ಭಾರತದ ಮಾಜಿ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಅವರು ತಮ್ಮ ಕುಟುಂಬದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಪತ್ನಿ ದೇವಿಶಾ ಶೆಟ್ಟಿ ಹಾಗೂ ಮಗಳು ರಿದ್ಧಿಮಾ ಕೂಡ ಉಪಸ್ಥಿತರಿದ್ದು, ಇವರ ಭೇಟಿಯ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಅವರು 2026ರ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಚಿನ್ನದ ಪದಕವನ್ನು ಧರಿಸಿದ್ದರು. ಈ ವೇಳೆ ಪ್ರಧಾನಿ ಮೋದಿ ಅವರು ಸೂರ್ಯಕುಮಾರ್ ಅವರ ಪದಕವನ್ನು ಕೈಯಲ್ಲಿ ಹಿಡಿದುಕೊಂಡು ಸಂಭ್ರಮದ ಕ್ಷಣವನ್ನು ಹಂಚಿಕೊಂಡರು. ಭಾರತದ ಐತಿಹಾಸಿಕ ವಿಶ್ವಕಪ್ ಸಾಧನೆಯನ್ನು ನೆನಪಿಸುವ ಈ ಕ್ಷಣ ವಿಶೇಷ ಗಮನ ಸೆಳೆಯಿತು.

ಕನ್ನಡದಲ್ಲಿ ಗಣೇಶನನ್ನು ಸ್ತುತಿಸಿದ ಬಾಲಕಿ

ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ವಿಡಿಯೋವೊಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಈ ವಿಡಿಯೋದಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಕಾಣಿಸಿಕೊಂಡಿದ್ದು, ಪುಟ್ಟ ಬಾಲಕಿಯೊಬ್ಬಳು ಕನ್ನಡದಲ್ಲಿ ಸುಮಧುರವಾಗಿ ಗಣೇಶನ ಭಕ್ತಿಗೀತೆಯನ್ನು ಹಾಡಿದ್ದಾಳೆ. ಈ ಹಾಡಿಗೆ ಮೋದಿ ಅವರು ತಲೆದೂಗುತ್ತಿರುವುದನ್ನು ಕಾಣಬಹುದಾಗಿದೆ. ಆ ಬಾಲಕಿ ಭಕ್ತಿಗೀತೆಯನ್ನು ಹಾಡುತ್ತಿದ್ದರೆ, ಇತ್ತ ಮೋದಿ ತಮ್ಮ ಕೈಗಳಿಂದ ತಾಳ ಹಾಕುವ ಮೂಲಕ ಬಾಲಕಿಗೆ ಹುರಿದುಂಬಿಸಿದ್ದಾರೆ. ಆದರೆ ಪ್ರಧಾನಿಯ ಮುಂದೆ ಈ ಭಕ್ತಿಗೀತೆಯನ್ನು ಹಾಡಿದ ಈ ಪೋರಿ ಯಾರು ಎಂಬುದು ಇದುವರೆಗೆ ಖಚಿತವಾಗಿಲ್ಲ. ಆದರೆ ಆಕೆಯ ಮುಗ್ತ ಭಕ್ತಿಗೆ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಸೂರ್ಯಕುಮಾರ್ ಸಾಧನೆ

ಸೂರ್ಯಕುಮಾರ್ ಯಾದವ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಹಲವು ಮಹತ್ವದ ಸಾಧನೆಗಳನ್ನು ಮಾಡಿದ್ದಾರೆ. 2022 ಮತ್ತು 2023ರಲ್ಲಿ ಸತತವಾಗಿ ಐಸಿಸಿ ವರ್ಷದ ಟಿ20 ಅಂತಾರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. 2022ರ ಅಕ್ಟೋಬರ್‌ನಲ್ಲಿ ಐಸಿಸಿ ಟಿ20 ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಮೊದಲ ಸ್ಥಾನಕ್ಕೇರಿದ್ದ ಸೂರ್ಯಕುಮಾರ್, 2023ರ ಜನವರಿಯಲ್ಲಿ ವೃತ್ತಿಜೀವನದ ಗರಿಷ್ಠ 910 ರೇಟಿಂಗ್ ಅಂಕಗಳನ್ನು ಗಳಿಸಿದ್ದರು. ಇದು ಟಿ20 ಕ್ರಿಕೆಟ್ ಇತಿಹಾಸದ ಅತ್ಯುತ್ತಮ ರೇಟಿಂಗ್‌ಗಳಲ್ಲಿ ಒಂದಾಗಿದೆ.

ಪಂದ್ಯ ನಡೆಯುವಾಗಲೇ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ..!

2024ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ಸೂರ್ಯಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡ ಅವರು, 2026ರ ಟಿ20 ವಿಶ್ವಕಪ್‌ನಲ್ಲೂ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. ಈ ಮೂಲಕ ಸತತ ಎರಡು ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಇಷ್ಟೇ ಅಲ್ಲದೆ, ಅವರ ನಾಯಕತ್ವದಲ್ಲಿ ಭಾರತ ತಂಡ 2025ರಲ್ಲಿ ಯುಎಇಯಲ್ಲಿ ನಡೆದ ಟಿ20 ಏಷ್ಯಾಕಪ್‌ನಲ್ಲೂ ಪ್ರಶಸ್ತಿ ಗೆದ್ದುಕೊಂಡಿತ್ತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:03 pm, Fri, 6 November 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More