ED ವಿಚಾರಣೆ ಎದುರಿಸಿದ ಪುರಿ ಜಗನ್ನಾಥ್​, ಚಾರ್ಮಿ ಕೌರ್​; ‘ಲೈಗರ್​’ ಬಂಡವಾಳದ ಮೇಲೆ ಅನುಮಾನ

| Updated By: ಮದನ್​ ಕುಮಾರ್​

Updated on: Nov 18, 2022 | 7:33 AM

Enforcement Directorate | Charmi Kaur: ‘ಲೈಗರ್​’ ಚಿತ್ರದ ಹಣಕಾಸು ವ್ಯವಹಾರದಿಂದಾಗಿ ಪುರಿ ಜಗನ್ನಾಥ್​ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗ ಅವರು ಇಡಿ ವಿಚಾರಣೆಗೆ ಒಳಗಾಗಿದ್ದಾರೆ.

ED ವಿಚಾರಣೆ ಎದುರಿಸಿದ ಪುರಿ ಜಗನ್ನಾಥ್​, ಚಾರ್ಮಿ ಕೌರ್​; ‘ಲೈಗರ್​’ ಬಂಡವಾಳದ ಮೇಲೆ ಅನುಮಾನ
ವಿಜಯ್ ದೇವರಕೊಂಡ, ಪುರಿ ಜಗನ್ನಾಥ್, ಚಾರ್ಮಿ ಕೌರ್
Follow us on

ಟಾಲಿವುಡ್​ ನಟ ವಿಜಯ್​ ದೇವರಕೊಂಡ ಅಭಿನಯದ ‘ಲೈಗರ್​’ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿತ್ತು. ಬಹುಕೋಟಿ ರೂಪಾಯಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿತ್ತು. ಪುರಿ ಜಗನ್ನಾಥ್​ (Puri Jagannadh), ಚಾರ್ಮಿ ಕೌರ್​, ಕರಣ್​ ಜೋಹರ್​ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಈ ಸಿನಿಮಾಗೆ ಇಷ್ಟೊಂದು ಹಣ ಹೂಡಲು ಹೇಗೆ ಸಾಧ್ಯವಾಯ್ತು ಎಂಬ ಬಗ್ಗೆ ಅನುಮಾನ ಮೂಡಿದೆ. ಹಣದ ಮೂಲದ ಕುರಿತು ಈಗ ತನಿಖೆ ನಡೆಯುತ್ತಿದೆ. ಹಲವು ಕಂಪನಿಗಳು ‘ಲೈಗರ್​’ (Liger) ಮೇಲೆ ಹಣ ಹೂಡಿದ್ದವು ಹಾಗೂ ವಿದೇಶಿ ಮೂಲದಿಂದಲೂ ಹಣ ಬಂದಿರುವ ಸಾಧ್ಯತೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. ಹಣ ವರ್ಗಾವಣೆಗೆ ಸಂಬಂಧಿಸಿದಂತೆ ನಿಯಮ ಉಲ್ಲಂಘನೆ ಆಗಿರುವ ಸಾಧ್ಯತೆ ಇರುವುದರಿಂದ ಜಾರಿ ನಿರ್ದೇಶನಾಲಯದ (Enforcement Directorate) ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

ಮೂಲಗಳ ಪ್ರಕಾರ, ಗುರುವಾರ (ನ.17) ಪುರಿ ಜಗನ್ನಾಥ್​ ಮತ್ತು ಚಾರ್ಮಿ ಕೌರ್​ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಎದುರು ಹಾಜರಾಗಿದ್ದಾರೆ. ಹಲವು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. 15 ದಿನದ ಹಿಂದೆಯೇ ಇಬ್ಬರಿಗೂ ನೋಟಿಸ್​ ನೀಡಲಾಗಿತ್ತು ಎನ್ನಲಾಗಿದೆ.

‘ಲೈಗರ್​’ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ವಿದೇಶಿ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದರು. ವಿಶ್ವ ವಿಖ್ಯಾತ ಬಾಕ್ಸರ್​ ಮೈಕ್​ ಟೈಸನ್​ ಕೂಡ ಇದರಲ್ಲಿ ಒಂದು ಪಾತ್ರ ಮಾಡಿದ್ದರು. ಅವರ ದೃಶ್ಯಗಳನ್ನು ಚಿತ್ರೀಕರಿಸಲು ಇಡೀ ತಂಡ ಅಮೆರಿಕಕ್ಕೆ ತೆರಳಿತ್ತು. ಅದಕ್ಕಾಗಿ ನಿರ್ಮಾಪಕರು ದುಬಾರಿ ಮೊತ್ತವನ್ನೇ ಖರ್ಚು ಮಾಡಿದ್ದರು.

ಇದನ್ನೂ ಓದಿ
‘ಲೈಗರ್’ ಸಿನಿಮಾದ ಖಳನಟ ವಿಶ್​ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ
Liger Movie: ಪುನೀತ್​ ಸಮಾಧಿಗೆ ವಿಜಯ್​ ದೇವರಕೊಂಡ ಭೇಟಿ; ‘ಲೈಗರ್​’ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ನಟ
Liger: ‘ಲೈಗರ್ ಸಿನಿಮಾ ಬ್ಲಾಕ್​ ಬಸ್ಟರ್​’: ರಿಲೀಸ್​ಗೂ ಮುನ್ನ ಘೋಷಿಸಿದ ವಿಜಯ್​ ದೇವರಕೊಂಡ
Vijay Devarakonda: ಒಂದೇ ದಿನದಲ್ಲಿ 5 ಕೋಟಿ​ಗಿಂತ ಹೆಚ್ಚು ಬಾರಿ ವೀಕ್ಷಣೆ ಕಂಡ ‘ಲೈಗರ್​’ ಟ್ರೇಲರ್​

ಅಗಸ್ಟ್​ 25ರಂದು ‘ಲೈಗರ್​’ ಸಿನಿಮಾ ತೆರೆ ಕಂಡಿತು. ಇದು ವಿಜಯ್​ ದೇವರಕೊಂಡ ಅವರ ಮೊದಲ ಹಿಂದಿ ಸಿನಿಮಾ. ಅವರಿಗೆ ಜೋಡಿಯಾಗಿ ಬಾಲಿವುಡ್​ ನಟಿ ಅನನ್ಯಾ ಪಾಂಡೆ ನಟಿಸಿದರು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆದ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆಯ ಮಟ್ಟವನ್ನು ತಲುಪುವಲ್ಲಿ ‘ಲೈಗರ್​’ ಎಡವಿತು. ಪರಿಣಾಮವಾಗಿ ಬಾಕ್ಸ್​ ಆಫೀಸ್​ನಲ್ಲೂ ಮುಗ್ಗರಿಸಿತು.

‘ಲೈಗರ್​’ ಸಿನಿಮಾದ ಹಣಕಾಸು ವ್ಯವಹಾರದಿಂದಾಗಿ ಪುರಿ ಜಗನ್ನಾಥ್​ ಅವರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈ ಚಿತ್ರದ ವಿತರಕರ ಜೊತೆಗೆ ಪುರಿ ಕಿರಿಕ್​ ಮಾಡಿಕೊಂಡಿದ್ದರು. ಸಿನಿಮಾ ಸೋತ ಬಳಿಕ ತಮಗೆ ಹಣ ವಾಪಸ್​ ನೀಡಬೇಕು ಎಂದು ಕೆಲವು ವಿತರಕರು ಧಮ್ಕಿ ಹಾಕಿದ್ದರು. ಅಂಥವರಿಗೆ ಪುರಿ ಜಗನ್ನಾಥ್​ ಖಡಕ್​ ಆಗಿ ಉತ್ತರ ನೀಡಿದ ಆಡಿಯೋ ಕ್ಲಿಪ್​ ಇತ್ತೀಚೆಗೆ ವೈರಲ್​ ಆಗಿತ್ತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:33 am, Fri, 18 November 22