ಅಕ್ರಮ ಬೆಟ್ಟಿಂಗ್ ಆ್ಯಪ್: ಪ್ರಕಾಶ್ ರಾಜ್, ರಾಣಾ ಮುಂತಾದ ನಟರಿಗೆ ಇಡಿ ನೋಟಿಸ್

ಅಕ್ರಮ್ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದಕ್ಕಾಗಿ ಹೈದರಾಬಾದ್​ನಲ್ಲಿ ಇಡಿ ಕೇಸ್ ದಾಖಲು ಮಾಡಿದೆ. ಪ್ರಕಾಶ್ ರಾಜ್, ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಲಕ್ಷ್ಮಿ ಮಂಚು ಮುಂತಾದವರಿಗೆ ನೋಟಿಸ್ ನೀಡಲಾಗಿದೆ. ವಿವಿಧ ದಿನಾಂಕಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಈ ಸೆಲೆಬ್ರಿಟಿಗಳಿಗೆ ಇಡಿ ಸೂಚನೆ ನೀಡಿದೆ.

ಅಕ್ರಮ ಬೆಟ್ಟಿಂಗ್ ಆ್ಯಪ್: ಪ್ರಕಾಶ್ ರಾಜ್, ರಾಣಾ ಮುಂತಾದ ನಟರಿಗೆ ಇಡಿ ನೋಟಿಸ್
Vijay Deverakonda, Prakash Raj, Rana Daggubati

Updated on: Jul 21, 2025 | 7:38 PM

ಸೋಶಿಯಲ್ ಮೀಡಿಯಾದಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ್ದಕ್ಕಾಗಿ ಜಾರಿ ನಿರ್ದೇಶನಾಲಯ (ED) ಹೈದರಾಬಾದ್​ನಲ್ಲಿ ಕೇಸ್ ದಾಖಲು ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ತೆಲುಗು ಚಿತ್ರರಂಗದ ಸ್ಟಾರ್ ನಟರಿಗೆ ನೋಟಿಸ್ ನೀಡಲಾಗಿದೆ. ಪ್ರಕಾಶ್ ರಾಜ್ (Prakash Raj), ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಸೇರಿದಂತೆ ಹಲವರಿಗೆ ನೋಟಿಸ್ ಜಾರಿಮಾಡಲಾಗಿದೆ. ಅಕ್ರಮ ಬೆಟ್ಟಿಂಗ್ ಆ್ಯಪ್ (Illegal Betting App) ಕುರಿತ ವಿಚಾರಣೆಯಲ್ಲಿ ಪಾಲ್ಗೊಳ್ಳುವಂತೆ ಟಾಲಿವುಡ್ ಸೆಲೆಬ್ರಿಟಿಗಳಿಗೆ ಸೂಚಿಸಲಾಗಿದೆ. ಇದರಿಂದಾಗಿ ತೆಲುಗು ಚಿತ್ರಂಗದ ಹಲವು ನಟ-ನಟಿಯರಿಗೆ ಸಂಕಷ್ಟ ಎದುರಾಗಿದೆ.

ಹಣ ಗಳಿಸುವ ಆಸೆ ತೋರಿಸಿ ಯುವ ಜನತೆಯನ್ನು ಬೆಟ್ಟಿಂಗ್ ಆ್ಯಪ್​ಗಳು ದಾರಿ ತಪ್ಪಿಸುತ್ತಿವೆ. ಇದಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಮಿಲಿಯನ್​ಗಟ್ಟಲೆ ಫಾಲೋವರ್ಸ್ ಹೊಂದಿರುವ ವ್ಯಕ್ತಿಗಳು ಪ್ರಚಾರ ನೀಡುತ್ತಿದ್ದಾರೆ. ಇಂತಹ ಅಕ್ರಮ ಬೆಟ್ಟಿಂಗ್ ಆ್ಯಪ್​​ಗಳಿಂದ ಅನೇಕ ಯುವಕರು ಹಣ ಕಳೆದುಕೊಂಡಿದ್ದಾರೆ. ಹಾಗಾಗಿ ಇಡಿ ತನಿಖೆ ಆರಂಭಿಸಿದೆ.

ಈ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ತೀವ್ರಗೊಂಡಿದೆ. ಜುಲೈ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗುವಂತೆ ನಟ ರಾಣಾ ದಗ್ಗುಬಾಟಿ ಅವರಿಗೆ ನೋಟಿಸ್ ನೀಡಲಾಗಿದೆ. ಜುಲೈ 30ರಂದು ಪ್ರಕಾಶ್ ರಾಜ್, ಆಗಸ್ಟ್ 6ರಂದು ವಿಜಯ್ ದೇವರಕೊಂಡ, ಆಗಸ್ಟ್ 13ರಂದು ಲಕ್ಷ್ಮಿ ಮಂಚು ಅವರು ಇಡಿ ವಿಚಾರಣೆಗೆ ಹಾಜರಾಗಬೇಕಿದೆ.

ಇದನ್ನೂ ಓದಿ
ಬೆಟ್ಟಿಂಗ್ ಚಟಕ್ಕೆ ಬಿದ್ದು ತಂದೆ ಆಸ್ತಿ ಮಾರಿಸಿದ ಮಗ: ಇಂಜಿನಿಯರ್‌ ಕಳ್ಳನಾದ
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಐಪಿಎಲ್ ಬೆಟ್ಟಿಂಗ್ ಪ್ರಮೋಷನ್ ಮಾಡೋ ಇನ್​ಫ್ಲ್ಯುಯೆನ್ಸ್​ರಗಳಿಗೆ ನೋಟಿಸ್
ಬೆಟ್ಟಿಂಗ್ ಆಪ್ ಪ್ರಕರಣ: ವಿಡಿಯೋ ಮೂಲಕ ಉತ್ತರ ಕೊಟ್ಟ ಪ್ರಕಾಶ್ ರೈ

ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಚಾರ ಮಾಡಿದ ಸೆಲೆಬ್ರಿಟಿಗಳ ಮೇಲೆ ಇಡಿ ಕೇಸ್ ದಾಖಲು ಮಾಡಿಕೊಂಡಿರುವುದರಿಂದ ತೆಲುಗು ಚಿತ್ರರಂಗದ ಇನ್ನಿತರ ನಟ-ನಟಿಯರಿಗೆ ಢವಢವ ಶುರುವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ರಮ ಬೆಟ್ಟಿಂಗ್ ಆ್ಯಪ್​ಗಳ ಪ್ರಚಾರ ಮಾಡುವುದು ಹೊಸ ರೀತಿಯ ಅಪರಾಧ ಎಂದು ಪರಿಗಣಿಸಲಾಗುತ್ತಿದೆ. ಇದಕ್ಕೆ ನಟ-ನಟಿಯರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಆನ್​ಲೈನ್​ ಬೆಟ್ಟಿಂಗ್​, ಗ್ಯಾಂಬ್ಲಿಂಗ್​ಗೆ ಕಡಿವಾಣ ಹಾಕಲು ಮುಂದಾದ ಸರ್ಕಾರ: ಬರಲಿದೆ ಹೊಸ ಕಾನೂನು

ಬೆಟ್ಟಿಂಗ್ ಆ್ಯಪ್​​ಗಳ ಬಳಕೆ ಮತ್ತು ಪ್ರಚಾರಕ್ಕೆ ಸಂಬಂಧಿಸಿಂತೆ ಸರ್ಕಾರದಿಂದ ಹೊಸ ಕಾನೂನು ರಚನೆ ಆಗುವ ನಿರೀಕ್ಷೆ ಇದೆ. ಇಡಿ ಕೇಸ್ ದಾಖಲು ಮಾಡಿರುವುದರಿಂದ ಇನ್ಮುಂದೆ ಇಂತಹ ಆ್ಯಪ್​ಗಳಿಗೆ ಪ್ರಚಾರ ರಾಯಭಾರಿಗಳಾಗಿ ಆಯ್ಕೆ ಆಗಲು ಸೆಲೆಬ್ರಿಟಿಗಳು ಹಿಂದೇಟು ಹಾಕುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.