ನಿಂತೇ ಹೋಯ್ತು ಫಹಾದ್ ಫಾಸಿಲ್ ನಟಿಸಲಿದ್ದ ಮೊದಲ ಬಾಲಿವುಡ್ ಸಿನಿಮಾ

ಮಲಯಾಳಂ ನಟರಾಗಿರುವ ಫಹಾದ್ ಫಾಸಿಲ್ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಅತ್ಯದ್ಭುತ ನಟರಾಗಿರುವ ಫಹಾದ್ ಫಾಸಿಲ್ ಅವರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಫಹಾದ್ ಫಾಸಿಲ್ ಅವರ ಅದ್ಭುತ ನಟನೆಯನ್ನು ಮೆಚ್ಚಿ, ಬಾಲಿವುಡ್​​ನ ಪ್ರತಿಭಾವಂತ ನಿರ್ದೇಶಕ ಇಮ್ತಿಯಾಜ್ ಅಲಿ, ಅದ್ಭುತ ಆಫರ್ ಒಂದನ್ನು ಫಹಾದ್ ಅವರಿಗೆ ನೀಡಿದ್ದರು. ಸಿನಿಮಾ ಬಗ್ಗೆ ಮೌಖಿಕ ಘೋಷಣೆಯೂ ಆಗಿತ್ತು, ಆದರೆ ಈಗ ಸಿನಿಮಾ ನಿಂತು ಹೋಗಿದೆ.

ನಿಂತೇ ಹೋಯ್ತು ಫಹಾದ್ ಫಾಸಿಲ್ ನಟಿಸಲಿದ್ದ ಮೊದಲ ಬಾಲಿವುಡ್ ಸಿನಿಮಾ
Fahad Faasil

Updated on: Oct 31, 2026 | 1:41 PM

ಮುಖ್ಯಾಂಶಗಳು

  • ಮಲಯಾಳಂ ಸ್ಟಾರ್ ನಟ ಫಹಾದ್ ಫಾಸಿಲ್
  • ಹಿಂದಿ ಸಿನಿಮಾನಲ್ಲಿ ನಟಿಸಬೇಕಿತ್ತು ಫಹಾದ್
  • ಆದರೆ ಸಿನಿಮಾ ಶುರುವಾಗುವ ಮೊದಲೇ ನಿಂತು ಹೋಗಿದೆ

ಫಹಾದ್ ಫಾಸಿಲ್, ಭಾರತೀಯ ಚಿತ್ರರಂಗದ ಬಲು ಪ್ರತಿಭಾವಂತ ನಟರಲ್ಲಿ ಪ್ರಮುಖರು. ಮೂಲತಃ ಮಲಯಾಳಂ ನಟರಾಗಿರುವ ಫಹಾದ್ ಫಾಸಿಲ್ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಅತ್ಯದ್ಭುತ ನಟರಾಗಿರುವ ಫಹಾದ್ ಫಾಸಿಲ್ ಅವರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಫಹಾದ್ ಫಾಸಿಲ್ ಅವರ ಅದ್ಭುತ ನಟನೆಯನ್ನು ಮೆಚ್ಚಿ, ಬಾಲಿವುಡ್​​ನ ಪ್ರತಿಭಾವಂತ ನಿರ್ದೇಶಕ ಇಮ್ತಿಯಾಜ್ ಅಲಿ, ಅದ್ಭುತ ಆಫರ್ ಒಂದನ್ನು ಫಹಾದ್ ಅವರಿಗೆ ನೀಡಿದ್ದರು. ಸಿನಿಮಾ ಬಗ್ಗೆ ಮೌಖಿಕ ಘೋಷಣೆಯೂ ಆಗಿತ್ತು, ಆದರೆ ಈಗ ಸಿನಿಮಾ ನಿಂತು ಹೋಗಿದೆ.

ಇಮ್ತಿಯಾಜ್ ಅಲಿ ನಿರ್ದೇಶಿಸಿ ಫಹಾದ್ ಫಾಸಿಲ್ ನಾಯಕನಾಗಿ ನಟಿಸಬೇಕಿದ್ದ ಸಿನಿಮಾಕ್ಕೆ ‘ದಿ ಇಡಿಯಟ್ ಆಫ್ ಇಸ್ತಾನ್‌ಬುಲ್’ ಎಂದು ಹೆಸರು ಸಹ ಇಡಲಾಗಿತ್ತು. ಆದರೆ ಈಗ ಆ ಸಿನಿಮಾವನ್ನು ಅಧಿಕೃತವಾಗಿ ಕೈಬಿಡಲಾಗಿದೆ. ಈ ಬಗ್ಗೆ ಖುದ್ದು ಇಮ್ತಿಯಾಜ್ ಅಲಿ ಮಾತನಾಡಿದ್ದು, ‘ಪ್ರಸ್ತುತ ಈ ಸಿನಿಮಾ ಸಾಧ್ಯವಾಗುತ್ತಿಲ್ಲ. ಸಿನಿಮಾ ಅಧಿಕೃತವಾಗಿ ನಿಲ್ಲಿಸಲ್ಪಟ್ಟಿದೆ. ಈ ಸಿನಿಮಾ ಮಾಡಲಾಗದಿದ್ದರೂ, ನಾವಿಬ್ಬರೂ (ಫಹಾದ್-ಇಮ್ತಿಯಾಜ್) ಭವಿಷ್ಯದಲ್ಲಿ ಒಟ್ಟಿಗೆ ಕೆಲಸ ಮಾಡಲು ಉತ್ಸುಕರಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮುಂಬೈನ ಜಾಗರಣ್ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಇಮ್ತಿಯಾಜ್ ಅಲಿ, ಈ ಬಗ್ಗೆ ಮಾತನಾಡಿದ್ದು, ‘ನಾನು ಹಾಗೂ ಫಹಾದ್ ಫಾಸಿಲ್ ಇಬ್ಬರೂ ಈ ಚಿತ್ರಕ್ಕಾಗಿ ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದರೂ ಆ ಪ್ರಾಜೆಕ್ಟ್ ಕಾರ್ಯರೂಪಕ್ಕೆ ಬರಲಿಲ್ಲ ಎಂದಿದ್ದಾರೆ. ಆದರೆ ಫಹಾದ್ ಫಾಸಿಲ್ ಮತ್ತು ತಾವು ಸಂಪರ್ಕದಲ್ಲಿದ್ದೇವೆ ಮತ್ತು ಇಬ್ಬರಿಗೂ ಒಟ್ಟಿಗೆ ಕೆಲಸ ಮಾಡುವ ತೀವ್ರಾಸಕ್ತಿ ಇದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಫಹಾದ್ ಫಾಸಿಲ್ ಡ್ಯಾನ್ಸ್ ವಿಡಿಯೋ ಹಂಚಿಕೊಂಡ ರಾಜಮೌಳಿ

ಉತ್ಸವದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅಲಿ, “ನಾನು ಫಹಾದ್ ಫಾಸಿಲ್ ಜೊತೆ ಕೆಲಸ ಮಾಡಲು ಬಯಸುತ್ತೇನೆ. ನಾವು ಒಟ್ಟಿಗೆ ಒಂದು ಸಿನಿಮಾ ಮಾಡಲು ಪ್ರಯತ್ನಿಸಿದೆವು ಆದರೆ ಪ್ರಾಜೆಕ್ಟ್ ಕಾರ್ಯರೂಪಕ್ಕೆ ಬರಲಿಲ್ಲ. ನಾವು ಪರಸ್ಪರ ಸಂಪರ್ಕದಲ್ಲಿದ್ದೇವೆ, ಮತ್ತು ‘ದೋನೋ ತರಫ್ ಹೈ ಆಗ್ ಬರಾಬರ್ ಲಗಿ ಹುಯಿ’ (ಇಬ್ಬರ ಕಡೆಯಿಂದಲೂ ಸಮಾನ ಆಸಕ್ತಿ, ಉತ್ಸಾಹ ಇದೆ) ಎಂದು ನಾನು ಭಾವಿಸುತ್ತೇನೆ. ಯಾವುದೋ ಒಂದು ಹಂತದಲ್ಲಿ ಫಹಾದ್ ಜೊತೆ ಕೆಲಸ ಮಾಡುವ ಭಾಗ್ಯ ನನಗೆ ಸಿಗಲಿದೆ’ ಎಂದಿದ್ದಾರೆ.

ಫಹಾದ್ ಫಾಸಿಲ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರ ನಟನೆಯ ‘ಡೋಂಟ್ ಟ್ರಬಲ್ ದಿ ಟ್ರಬಲ್’ ಸಿನಿಮಾ ಕೆಲ ವಾರಗಳ ಹಿಂದಷ್ಟೆ ರಿಲೀಸ್ ಆಗಿತ್ತು. ಪ್ರಸ್ತುತ ಅವರು ಕರಾಟೆ ಚಂದ್ರನ್ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದರ ಬಳಿಕ ‘ಆವೇಶಂ 2’ ಸಿನಿಮಾನಲ್ಲೂ ನಟಿಸುವ ಸಾಧ್ಯತೆ ಇದೆ. ಇತ್ತೀಚೆಗಷ್ಟೆ ಫಹಾದ್ ನಿರ್ಮಾಣ ಮಾಡಿದ್ದ ನಿವಿನ್ ಪೋಲಿಶೆಟ್ಟಿ, ಮಮಿತಾ ಬಿಜು ನಟನೆಯ ‘ಬೆತ್ಲೆಹೇಮ್ ಕುಟುಂಬ ಯುನಿಟ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us