ಅಪರೂಪದ ಮೇಕೆಯನ್ನು ಸಲ್ಮಾನ್ ಖಾನ್ಗೆ ಮಾರುವಾಸೆ, ಬೆಲೆ ಎಷ್ಟು ಲಕ್ಷ ಗೊತ್ತೆ?
Salman Khan Goat: ಇಲ್ಲೊಬ್ಬ ರೈತನಿಗೆ ತಾನು ಸಾಕಿರುವ ಅಪರೂಪದ ಆಡನ್ನು ಸಲ್ಮಾನ್ ಖಾನ್ಗೆ ಮಾರಾಟ ಮಾಡಬೇಕು ಎಂಬ ಆಸೆಯಂತೆ. ಅದೂ ಕಡಿಮೆ ಮೊತ್ತಕ್ಕಲ್ಲ ಬರೋಬ್ಬರಿ 15 ಲಕ್ಷ ರೂಪಾಯಿಗಳಿಗೆ. ಮಹಾರಾಷ್ಟ್ರದ ರೈತ ಧನಾಜಿ ವಿರ್ಕರ್ ಈ ರೀತಿಯ ವಿಚಿತ್ರ ಆಸೆಯನ್ನು ಹೊಂದಿರುವ ರೈತ. ಅಷ್ಟಕ್ಕೂ ಆತ ಸಾಕಿರುವ ಆಡಿನ ವಿಶೇಷತೆಯೇನು? ಇಲ್ಲಿದೆ ಮಾಹಿತಿ...

ಸಿನಿಮಾ (Cinema) ನಟರನ್ನು ಭೇಟಿಯಾಗುವುದು, ಅವರಿಂದ ಉಡುಗೊರೆ ಪಡೆಯುವುದು, ಉಡುಗೊರೆ ನೀಡುವುದು, ಸೆಲ್ಫಿ ತೆಗೆಸಿಕೊಳ್ಳುವುದು ಅಭಿಮಾನಿಗಳ ಆಸೆ. ಆದರೆ ಇಲ್ಲೊಬ್ಬ ರೈತನಿಗೆ ತಾನು ಸಾಕಿರುವ ಅಪರೂಪದ ಆಡನ್ನು ಸಲ್ಮಾನ್ ಖಾನ್ಗೆ ಮಾರಾಟ ಮಾಡಬೇಕು ಎಂಬ ಆಸೆಯಂತೆ. ಅದೂ ಕಡಿಮೆ ಮೊತ್ತಕ್ಕಲ್ಲ ಬರೋಬ್ಬರಿ 15 ಲಕ್ಷ ರೂಪಾಯಿಗಳಿಗೆ. ಮಹಾರಾಷ್ಟ್ರದ ರೈತ ಧನಾಜಿ ವಿರ್ಕರ್ ಈ ರೀತಿಯ ವಿಚಿತ್ರ ಆಸೆಯನ್ನು ಹೊಂದಿರುವ ರೈತ. ಅಷ್ಟಕ್ಕೂ ಆತ ಸಾಕಿರುವ ಆಡಿನ ವಿಶೇಷತೆಯೇನು?
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ರೈತ ಧನಾಜಿ ವಿರ್ಕರ್ ಅಪರೂಪದ ಮೇಕೆ ಸಾಕಿದ್ದು, ಆ ಮೇಕೆಯನ್ನು ಸಲ್ಮಾನ್ ಖಾನ್ ಅವರಿಗೆ ಮಾರಾಟ ಮಾಡಬೇಕು ಎಂಬ ಆಸೆ ಹೊಂದಿದ್ದಾರೆ. ಅದೂ ಬರೋಬ್ಬರಿ 15 ಲಕ್ಷ ರೂಪಾಯಿಗೆ. ತಮ್ಮ ಮೇಕೆಗೆ 15 ಲಕ್ಷ ರೂಪಾಯಿ ಕೇಳುತ್ತಿರಲು ಕಾರಣ, ಆ ಮೇಕೆಯ ವಿಶೇಷತೆ. ಧನಾಜಿ ವೀರ್ಕರ್ ಅವರು ಸಾಕಿರುವ ಮೇಕೆಯ ಹಣೆಯ ಮೇಲೆ ಚಂದ್ರನ ಆಕಾರದ ಮಚ್ಚೆಯಿದೆ. ಬಕ್ರೀದ್ ಹಬ್ಬಕ್ಕಾಗಿ ಬಲಿ ಕೊಡಲು ಸೂಕ್ತವಾದ ಮೇಲೆ ಅದಾಗಿದೆ. ಹಾಗಾಗಿ ತನ್ನ ಮೇಕೆಯನ್ನು 15 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ ರೈತ ಧನಾಜಿ ವೀರ್ಕರ್.
ವಿರ್ಕರ್ ಅವರು ಈ ಮೇಕೆಯನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಮಾರಾಟ ಮಾಡುವ ಮನಸ್ಸು ಹೊಂದಿದ್ದಾರೆ. ತಮ್ಮ ವಿಶೇಷ ಆಡನ್ನು ಬಾಲಿವುಡ್ ಸೂಪರ್ ಸ್ಟಾರ್ ಖರೀದಿಸಬೇಕು ಎಂಬುದು ಅವರ ಆಸೆ. ಆದರೆ ಸಲ್ಮಾನ್ ಖಾನ್ ಅವರನ್ನು ಹೇಗೆ ಸಂಪರ್ಕಿಸಬೇಕು ಎಂಬುದು ಅವರಿಗೆ ತಿಳಿದಿಲ್ಲವಂತೆ. ಆ ಬಗ್ಗೆ ಪ್ರಯತ್ನ ಮಾಡುತ್ತಿರುವುದಾಗಿಯೂ ಧನಾಜಿ ಹೇಳಿದ್ದಾರೆ.
ಪ್ರತಿ ವರ್ಷ ಬಕ್ರೀದ್ ಅಥವಾ ಈದ್ ಸಂದರ್ಭದಲ್ಲಿ ವಿಶೇಷ ಗುರುತುಗಳಿರುವ ಮೇಕೆಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕೆಲವರು ‘ಅಲ್ಹಾ’ ಅಥವಾ ‘ಮೊಹಮ್ಮದ್’ ಎಂಬ ಆಕಾರದ ಗುರುತುಗಳಿವೆ ಎಂದು ನಂಬುತ್ತಾರೆ. ಇಂತಹ ಮೇಕೆಗಳು ಲಕ್ಷಾಂತರ ರೂಪಾಯಿಗಳಿಗೆ ಮಾರಾಟವಾಗುತ್ತವೆಯಂತೆ. ಈಗ ಧನಾಜಿ ಬಳಿ ಇರುವ ಮೇಕೆಯನ್ನು ಅವರು ಮಾರುಕಟ್ಟೆಯಿಂದ ಖರೀದಿಸಿದ್ದಲ್ಲವಂತೆ. ಸುಮಾರು ಎರಡು ವರ್ಷಗಳ ಹಿಂದೆ ವಿರ್ಕರ್ ಅವರ ಮನೆಯಲ್ಲೇ ಹುಟ್ಟಿದ ಮೇಕೆ ಅದಾಗಿದ್ದು. ಆರಂಭದಲ್ಲಿ ಸಾಮಾನ್ಯ ಮೇಕೆಯಂತೆಯೇ ಕಂಡರೂ, ಬೆಳೆದಂತೆ ಅದರ ನೆತ್ತಿಯ ಮೇಲಿನ ಬಿಳಿ ಗುರುತು ಸ್ಪಷ್ಟವಾಗಿ ಚಂದ್ರಾಕಾರ ಪಡೆಯಿತಂತೆ.
ಇದನ್ನೂ ಓದಿ:ಬ್ಲಾಕ್ ಬಸ್ಟರ್ ಸಿನಿಮಾ ಅವಕಾಶ ನಿರಾಕರಿಸಿದ್ದ ಸ್ಟಾರ್ ನಟ: ಕಾರಣ?
ಗ್ರಾಮದಲ್ಲಿ ಈ ಮೇಕೆಯ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ನೆರೆ ಹೊರೆಯ ಊರುಗಳಿಂದ ಜನ ಮೇಕೆಯನ್ನು ನೋಡಲು ಬರುತ್ತಿದ್ದಾರಂತೆ. ಗ್ರಾಮೀಣ ಪ್ರದೇಶದಲ್ಲಿ ಈ ಮೇಕೆಗೆ ಸರಿಯಾದ ಬೆಲೆ ಸಿಗುವುದಿಲ್ಲ ಎಂದು ವಿರ್ಕರ್, ಇದನ್ನು ದೊಡ್ಡ ನಗರಗಳಿಗೆ ಕೊಂಡೊಯ್ಯುವ ಬಗ್ಗೆ ಯೋಚಿಸಿದರು. ಆದರೆ ಪ್ರಯಾಣ ವೆಚ್ಚ ಮತ್ತು ಇತರ ತೊಂದರೆಗಳಿಂದ ಅದು ಸಾಧ್ಯವಾಗಿರಲಿಲ್ಲ. ನಂತರ ಅವರು ಮೇಕೆಯ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡರು. ಆ ವಿಡಿಯೋ ವೈರಲ್ ಆಗಿ ಮುಂಬೈ, ಪುಣೆ, ಹೈದರಾಬಾದ್ ಸೇರಿದಂತೆ ಹಲವೆಡೆಗಳಿಂದ ಖರೀದಿದಾರರು ಸಂಪರ್ಕಿಸಲು ಆರಂಭಿಸಿದ್ದಾರಂತೆ.
ಕೆಲವು ಮುಸ್ಲಿಮರು ತಮ್ಮ ಮನಸಿನ ಆಶೆಗಳು ಈಡೇರಿದರೆ ಬಕ್ರೀದ್ ಸಮಯದಲ್ಲಿ ಚಂದ್ರಾಕಾರದ ಗುರುತು ಇರುವ ಮೇಕೆಯನ್ನು ಬಲಿ ನೀಡುವ ಪ್ರತಿಜ್ಞೆ ಮಾಡುತ್ತಾರೆ. ಅದರಿಂದ ಇಂತಹ ಮೇಕೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನುವ ಧನಾಜಿ, ಈಗಾಗಲೇ ತಮ್ಮ ಮೇಕೆಗೆ 10 ಲಕ್ಷದಿಂದ 12 ಲಕ್ಷದವರೆಗೆ ಆಫರ್‌ಗಳು ಬಂದಿವೆ. ಆದರೆ ವಿರ್ಕರ್ ಅವರಿಗೆ ಸುಮಾರು ರೂ 15 ಲಕ್ಷಕ್ಕೆ ತಮ್ಮ ಮೇಕೆಯನ್ನು ಮಾರಬೇಕು ಎಂದುಕೊಂಡಿದ್ದಾರೆ. ‘ನಮ್ಮ ಮೇಕೆ ಸಲ್ಮಾನ್ ಭಾಯ್ ಅವರ ಬಳಿ ಹೋಗಬೇಕು ಎಂಬುದೇ ನಮ್ಮ ಆಸೆ. ಅವರು ಸಂಪರ್ಕಿಸಿದರೆ ಬೆಲೆಯನ್ನು ಕಡಿಮೆ ಮಾಡಲು ಸಿದ್ಧ’ ಎಂದು ರೈತ ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





