ಭಾರತ-ಪಾಕ್ ಯುದ್ಧ: ಮನರಂಜನಾ ಕ್ಷೇತ್ರದಲ್ಲಿ ಆಗುತ್ತಿದೆ ಭಾರಿ ಬದಲಾವಣೆ

ಯುದ್ಧದ ಪರಿಣಾಮದಿಂದಾಗಿ ದೇಶದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ಅನೇಕ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ. ಚಿತ್ರರಂಗ ಕೂಡ ಈ ವೇಳೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತಿದೆ. ಕೆಲವು ಸಿನಿಮಾಗಳ ರಿಲೀಸ್ ದಿನಾಂಕ ಮುಂದೂಡಿಕೆ ಆಗುವ ಸಾಧ್ಯತೆ ದಟ್ಟವಾಗಿದೆ. ಭಾರತ-ಪಾಕ್ ನಡುವಿನ ಯುದ್ಧದಿಂದಾಗಿ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿವೆ.

ಭಾರತ-ಪಾಕ್ ಯುದ್ಧ: ಮನರಂಜನಾ ಕ್ಷೇತ್ರದಲ್ಲಿ ಆಗುತ್ತಿದೆ ಭಾರಿ ಬದಲಾವಣೆ
Subham, Thug Life

Updated on: May 09, 2025 | 5:32 PM

ಭಾರತ ಮತ್ತು ಪಾಕಿಸ್ತಾನ (Pakistan) ನಡುವೆ ಯುದ್ಧ ಆರಂಭ ಆಗಿದೆ. ಇದರಿಂದಾಗಿ ಎಲ್ಲ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ ಕಟ್ಟೆಚರ ವಹಿಸಲಾಗುತ್ತಿದೆ. ಈಗಾಗಲೇ ಐಪಿಎಲ್ ಪಂದ್ಯಗಳನ್ನು ರದ್ದು ಮಾಡಲಾಗಿದೆ. ಯುದ್ಧದ (India Pakistan War) ಸಂದರ್ಭದಲ್ಲಿ ಜನರ ಮನರಂಜನೆಗಿಂತಲೂ ದೇಶದ ಭದ್ರತೆಯೇ ಮುಖ್ಯ. ಹಾಗಾಗಿ ಒಂದಷ್ಟು ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ. ಇನ್ನು, ಚಿತ್ರರಂಗದವರು (Film Industry) ಸ್ವತಃ ಪ್ರೇರಿತವಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸಿನಿಮಾಗೆ ಸಂಬಂಧಿಸಿದ ಒಂದಷ್ಟು ಕಾರ್ಯಕ್ರಮಗಳನ್ನು ಮುಂದಕ್ಕೆ ಹಾಕಲಾಗುತ್ತಿದೆ.

ಸ್ಟಾರ್​ ನಟರ ಸಿನಿಮಾಗಳಿಗೆ ಸಂಬಂಧಿಸಿದ ಇವೆಂಟ್​ಗಳು ನಡೆದರೆ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಯುದ್ಧದ ತೀವ್ರತೆ ಕ್ಷಣಕ್ಷಣವೂ ಹೆಚ್ಚುತ್ತಿರುವ ಪರಿಸ್ಥಿತಿ ಇರುವಾಗ ಈ ರೀತಿ ಸಾರ್ವಜನಿಕವಾಗಿ ಜನ ಸೇರುವುದು ಸೂಕ್ತವಲ್ಲ. ಹಾಗಾಗಿ ಆಡಿಯೋ ಲಾಂಚ್, ಪ್ರೀ-ರಿಲೀಸ್ ಇವೆಂಟ್ ಮುಂತಾದ ಕಾರ್ಯಕ್ರಮಗಳನ್ನು ಸದ್ಯಕ್ಕೆ ಮುಂದೂಡಲಾಗುತ್ತಿದೆ.

ಕಮಲ್ ಹಾಸನ್ ಅವರು ಥಗ್ ಲೈಫ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮೇ 16ರಂದು ಮಾಡಲು ತೀರ್ಮಾನಿಸಲಾಗಿತ್ತು. ಅದಕ್ಕಾಗಿ ಸಕಲ ಸಿದ್ಧತೆ ನಡೆದಿತ್ತು. ಆದರೆ ದೇಶದಲ್ಲಿ ಯುದ್ಧದ ಸಂದರ್ಭ ಎದುರಾಗಿರುವುದರಿಂದ ‘ಥಗ್ ಲೈಫ್’ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ಮಂದೂಡಲಾಗಿದೆ. ಈ ಬಗ್ಗೆ ಕಮಲ್ ಹಾಸನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ
ಭಾರತೀಯ ಸೇನೆ ಅಭಿನಂದನೆ ಸಲ್ಲಿಸಿದ ಯಶ್, ನಾಗರೀಕರಿಗೆ ಜಾಗೃತೆ ಸಂದೇಶ
ದೇಶ ಮೊದಲು, ಸಿನಿಮಾ ಕಾರ್ಯಕ್ರಮ ರದ್ದು ಮಾಡಿದ ಕಮಲ್ ಹಾಸನ್
ಯದ್ಧದ ಕತೆ ಹೊಂದಿರುವ ನೋಡಲೇ ಬೇಕಾದ ಅದ್ಭುತ ಸಿನಿಮಾಗಳಿವು
‘ಆಪರೇಷನ್ ಸಿಂದೂರ್’ ಖಂಡಿಸಿದ ಪಾಕ್ ನಟ ಫವಾದ್ ಖಾನ್; ಭಾರತದಲ್ಲಿ ಛೀಮಾರಿ

ಸಮಂತಾ ರುತ್ ಪ್ರಭು ನಿರ್ಮಾಣ ಮಾಡಿದ ‘ಶುಭಂ’ ಸಿನಿಮಾ ಇಂದು (ಮೇ 9) ಬಿಡುಗಡೆ ಆಗಿದೆ. ಇಂದು ಸಂಜೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಬೇಕಿತ್ತು. ಆದರೆ ಅದನ್ನು ಪೋಸ್ಟ್ ಪೋನ್ ಮಾಡಲಾಗಿದೆ. ಮನರಂಜನಾ ಕಾರ್ಯಕ್ರಮಗಳಿಗಿಂತಲೂ ಸುರಕ್ಷತೆಯೇ ಮುಖ್ಯ ಎಂಬ ಕಾರಣಕ್ಕೆ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ.

ಇದನ್ನೂ ಓದಿ: ನಿರ್ಮಾಪಕಿಯಾಗಿ ಸಮಂತಾ ಮೊದಲ ಚಿತ್ರಕ್ಕೆ ಕವಿದ ಕಾರ್ಮೋಡ

ಬಹುನಿರೀಕ್ಷಿತ ಸಿನಿಮಾಗಳ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಆದರೂ ಅಚ್ಚರಿ ಏನಿಲ್ಲ. ಒಟ್ಟಿನಲ್ಲಿ ಎಲ್ಲ ಕಡೆಗಳಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. ರಾಜ್​ಕುಮಾರ್ ರಾವ್ ನಟನೆಯ ‘ಭೂಲ್ ಚುಕ್ ಮಾಫ್’ ಸಿನಿಮಾವನ್ನು ಚಿತ್ರಮಂದಿರದ ಬದಲು ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.