‘ಜೈಲರ್ ಸಾಧಾರಣ ಸಿನಿಮಾದ ರೀತಿ ಕಂಡಿತ್ತು’; ಸಕ್ಸಸ್ ಮೀಟ್​ನಲ್ಲಿ ರಜನಿಕಾಂತ್ ಮಾತು

ಇತ್ತೀಚೆಗೆ ‘ಜೈಲರ್’ ಸಿನಿಮಾದ ಸಕ್ಸಸ್ ಮೀಟ್ ನಡೆದಿದೆ. ಇದರಲ್ಲಿ ರಜನಿಕಾಂತ್ ಮಾತನಾಡಿದ್ದಾರೆ. ಚಿತ್ರದ ಯಶಸ್ಸನ್ನು ಅವರು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ಗೆ ನೀಡಿದ್ದಾರೆ. ಇಡೀ ಸಿನಿಮಾ ಗೆಲ್ಲಲು ಅನಿರುದ್ಧ್​ ನೀಡಿದ ಬಿಜಿಎಂ ಕಾರಣ ಅನ್ನೋದು ರಜನಿ ಅಭಿಪ್ರಾಯ.

‘ಜೈಲರ್ ಸಾಧಾರಣ ಸಿನಿಮಾದ ರೀತಿ ಕಂಡಿತ್ತು’; ಸಕ್ಸಸ್ ಮೀಟ್​ನಲ್ಲಿ ರಜನಿಕಾಂತ್ ಮಾತು
ಜೈಲರ್

Updated on: Sep 19, 2023 | 7:37 AM

ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ (Jailer Movie) ಬಾಕ್ಸ್ ಆಫೀಸ್​ನಲ್ಲಿ 650 ಕೋಟಿ ರೂಪಾಯಿ ಗಳಿಕೆ ಮಾಡಿ ಗೆದ್ದು ಬೀಗಿದೆ. ಈ ಸಿನಿಮಾ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಇತ್ತೀಚೆಗೆ ರಿಲೀಸ್ ಆಗಿ ಅಲ್ಲಿಯೂ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಬಗ್ಗೆ ಒಬ್ಬೊಬ್ಬರದ್ದು ಒಂದೊಂದು ರೀತಿಯ ಅಭಿಪ್ರಾಯ. ಕೆಲವರು ಇದನ್ನು ಸಾಧಾರಣ ಸಿನಿಮಾ ಎಂದಿದ್ದಾರೆ. ಕೆಲವರು ಚಿತ್ರವನ್ನು ಕೊಂಡಾಡಿದ್ದಾರೆ. ರಜನಿಕಾಂತ್​ಗೆ (Rajanikanth) ಮೊದಲ ಬಾರಿಗೆ ಸಿನಿಮಾ ನೋಡಿದಾಗಲೂ ‘ಸಾಧಾರಣ ಚಿತ್ರ’ ಎನ್ನುವ ಅಭಿಪ್ರಾಯ ಬಂದಿತ್ತು. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ.

ಇತ್ತೀಚೆಗೆ ‘ಜೈಲರ್’ ಸಿನಿಮಾದ ಸಕ್ಸಸ್ ಮೀಟ್ ನಡೆದಿದೆ. ಇದರಲ್ಲಿ ರಜನಿಕಾಂತ್ ಮಾತನಾಡಿದ್ದಾರೆ. ಚಿತ್ರದ ಯಶಸ್ಸನ್ನು ಅವರು ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ಗೆ ನೀಡಿದ್ದಾರೆ. ಇಡೀ ಸಿನಿಮಾ ಗೆಲ್ಲಲು ಅನಿರುದ್ಧ್​ ನೀಡಿದ ಬಿಜಿಎಂ ಕಾರಣ ಅನ್ನೋದು ರಜನಿ ಅಭಿಪ್ರಾಯ. ಪ್ರೇಕ್ಷಕರು ಕೂಡ ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದಾರೆ.

‘ನಿಜ ಹೇಳಬೇಕು ಎಂದರೆ ನಾನು ರೀ-ರೆಕಾರ್ಡಿಂಗ್​ಗೂ ಮೊದಲು ನೋಡಿದಾಗ ಸಿನಿಮಾ ಸಾಧಾರಣ ಎನಿಸಿತ್ತು. ಸಿನಿಮಾನ ಮೇಲಕ್ಕೆ ಎತ್ತಿದ್ದು ಅನಿರುದ್ಧ್ ಅವರು. ಇದನ್ನು ಅವರು ಚಾಲೆಂಜ್ ಆಗಿ ತೆಗೆದುಕೊಂಡರು. ನನ್ನ ಸಿನಿಮಾ ಹಿಟ್ ಆಗಬೇಕು ಎಂಬುದು ಅವರ ಆಸೆ ಆಗಿತ್ತು’ ಎಂದಿದ್ದಾರೆ ರಜನಿಕಾಂತ್.

ರಜನಿಕಾಂತ್ ಅವರ ವಯಸ್ಸು ಈಗ 72. ಈ ಕಾರಣದಿಂದ ಅವರಿಗೆ ತುಂಬಾನೇ ಆ್ಯಕ್ಷನ್ ಮಾಡೋಕೆ ಸಾಧ್ಯವಾಗುವುದಿಲ್ಲ. ಆದರೆ, ಅನಿರುದ್ಧ್ ನೀಡಿರುವ ಬಿಜಿಎಂನಿಂದ ಸಿನಿಮಾಗೆ ಹೊಸ ಎನರ್ಜಿ ಬಂದಿದೆ. ಸಿನಿಮಾ ಯಶಸ್ಸು ಕಾಣಲು ಇದು ಕೂಡ ಕಾರಣ ಎಂದು ಅನೇಕರು ಒಪ್ಪಿಕೊಂಡಿದ್ದಾರೆ. ರಜನಿಕಾಂತ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಅಷ್ಟೇ ಅಲ್ಲ ಅನಿರುದ್ಧ್ ಅವರನ್ನು ರಜನಿ ಮಗ ಎಂದು ಕರೆದಿದ್ದಾರೆ.

ಇದನ್ನೂ ಓದಿ: ‘ಜೈಲರ್’ ಬಳಿಕ ದೊಡ್ಡ ಘೋಷಣೆ ಮಾಡಿದ ರಜನಿಕಾಂತ್​; ಲೋಕೇಶ್​ ಕನಗರಾಜ್​ ಜತೆ ಸಿನಿಮಾ

‘ಜೈಲರ್’ ಸಿನಿಮಾಗೆ ನೆಲ್ಸನ್ ದಿಲೀಪ್ ಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್, ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದಾರೆ. ತಮನ್ನಾ ಮಾಡಿರೋ ‘ಕವಾಲಾ..’ ಡ್ಯಾನ್ಸ್ ಹಿಟ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:25 am, Tue, 19 September 23