ಪಂಚಾಯತ್​ ಎಲೆಕ್ಷನ್​ಗೆ ಸ್ಪರ್ಧಿಸಿದ ಮಾಜಿ ಮಿಸ್​ ಇಂಡಿಯಾ ಫೈನಲಿಸ್ಟ್​; ಇವರ​ ನೋಡೋಕೆ ಜನವೋ ಜನ

ದೀಕ್ಷಾ ಈಗಾಗಲೇ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಕಪ್ಪು ಗ್ಲಾಸ್​ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇವರನ್ನು ನೋಡೋಕೆ ಜನಸಾಗರವೇ ಹರಿದು ಬರುತ್ತಿದೆ.

ಪಂಚಾಯತ್​ ಎಲೆಕ್ಷನ್​ಗೆ ಸ್ಪರ್ಧಿಸಿದ ಮಾಜಿ ಮಿಸ್​ ಇಂಡಿಯಾ ಫೈನಲಿಸ್ಟ್​; ಇವರ​ ನೋಡೋಕೆ ಜನವೋ ಜನ
ದೀಕ್ಷಾ ಸಿಂಗ್​

Updated on: Apr 04, 2021 | 6:41 PM

ಲಖನೌ: ಉತ್ತರ ಪ್ರದೇಶದಲ್ಲಿ ಪಂಚಾಯತ್​ ಚುನಾವಣೆಯ ಕಾವು ಹೆಚ್ಚಾಗಿದೆ. ಲಕ್ಷಾಂತರ ಸ್ಪರ್ಧಿಗಳು ಪಂಚಾಯತ್​ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಈ ಮಧ್ಯೆ 2015ರ ಫೆಮಿನಾ ಮಿಸ್​ ಇಂಡಿಯಾ ಫೈನಲಿಸ್ಟ್ ದೀಕ್ಷಾ ಸಿಂಗ್​ ಕೂಡ ಜಿಲ್ಲಾ ಪಂಚಾಯತ್​ ಚುನಾವಣೆಗೆ ಸ್ಪರ್ಧೆ ಮಾಡಿದ್ದಾರೆ. ಪ್ರಚಾರದ ವೇಳೆ ಇವರನ್ನು ನೋಡೋಕೆ ಜನ ಸಾಗರವೇ ಹರಿದು ಬರುತ್ತಿದೆ.

ದೀಕ್ಷಾ ಅವರು ಉತ್ತರ ಪ್ರದೇಶದ ಭಾಕ್ಷಾದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇಂದು ಅವರು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್​ 15ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಹೊರ ಬೀಳಲಿದೆ.

ಜೌನ್​ಪುರ್​ನ ಚಿತ್ತೋರಿ ಗ್ರಾಮದವರಾದ ದೀಕ್ಷಾ ಪ್ರಾಥಮಿಕ ಶಿಕ್ಷಣ ಪಡೆದಿದ್ದು ಇದೇ ಊರಿನಲ್ಲಿ. ಪಾಲಕರು ಮುಂಬೈಗೆ ಶಿಫ್ಟ್​ ಆದ ನಂತರ ಇವರು ಕೂಡ ಅಲ್ಲಿಗೆ ತೆರಳಿದರು. ಅಲ್ಲಿಯೇ ಶಿಕ್ಷಣ ಪಡೆದರು. ಅವರು ಸೆಕೆಂಡ್ ಪಿಯುಸಿಯಲ್ಲಿರುವಾಗ ಫೆಮಿನಾ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದರು. 21 ಫೈನಲಿಸ್ಟ್​ಗಳಲ್ಲಿ ಇವರು ಕೂಡ ಒಬ್ಬರಾಗಿದ್ದರು. ನಂತರ ಸಾಕಷ್ಟು ಮಾಡೆಲಿಂಗ್​ ಸ್ಪರ್ಧೆಗಳಲ್ಲಿ ದಿಶಾ ಪಾಲ್ಗೊಂಡಿದ್ದರು. ಮ್ಯೂಸಿಕ್​ ವಿಡಿಯೋಗಳಲ್ಲೂ ಕಾಣಿಸಿಕೊಂಡರು.

ಗ್ರಾಮ ಪಂಚಾಯಿತಿ ಚುನಾವಣೆಗೆ ದೀಕ್ಷಾ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರ ಇತ್ತೀಚೆಗೆ ಭಾರೀ ಚರ್ಚೆ ಆಗಿತ್ತು. ಅವರ ತಂದೆ ಜಿತೇಂದ್ರ ಸಿಂಗ್ ಈ ಕ್ಷೇತ್ರದಿಂದ ಸ್ಪರ್ಧಿಸುವ ಕನಸು ಇಟ್ಟುಕೊಂಡಿದ್ದರು. ಆದರೆ, ಮಹಿಳಾ ಅಭ್ಯರ್ಥಿಗಳಿಗೆ ಈ ಸ್ಥಾನವನ್ನು ಕಾಯ್ದಿರಿಸಲಾಗಿದೆ. ಹೀಗಾಗಿ, ತಂದೆ ಆಸೆ ಈಡೇರಿಸಲು ಚುನಾವಣೆಗೆ ಇವರು ಸ್ಪರ್ಧೆ ಮಾಡುತ್ತಿದ್ದಾರೆ ಎನ್ನಲಾಗಿತ್ತು.

ಆದರೆ ದೀಕ್ಷಾ ಈ ವಿಚಾರ ನಿರಾಕರಿಸಿದ್ದಾರೆ. ನಾನು ಸ್ವ ಇಚ್ಛೆಯಿಂದ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಹಲವು ವರ್ಷಗಳಿಂದ ಇಲ್ಲಿಯ ಜನರ ಜೀವನ ಸುಧಾರಿಸಿಲ್ಲ. ನಾನು ಹುಟ್ಟಿ ಬೆಳೆದ ಸ್ಥಳ ಕೂಡ ಅಭಿವೃದ್ಧಿ ಕಾಣುತ್ತಿಲ್ಲ. ನಾನು ಇಲ್ಲಿಗೆ ಬಂದಾಗೆಲ್ಲ ಈ ಭಾವನೆ ನಿರಂತರವಾಗಿ ಕಾಡಿತ್ತು. ಹೀಗಾಗಿ, ಚುನಾವಣೆಗೆ ನಿಲ್ಲುವ ನಿರ್ಧಾರಕ್ಕೆ ಬಂದೆ. ಈ ಮೂಲಕ ಹಳ್ಳಿ ಅಭಿವೃದ್ಧಿಪಡಿಸುವ ಕನಸು ಕಂಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ದೀಕ್ಷಾ ಈಗಾಗಲೇ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ. ಕಪ್ಪು ಗ್ಲಾಸ್​ ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇವರನ್ನು ನೋಡೋಕೆ ಜನಸಾಗರವೇ ಹರಿದು ಬರುತ್ತಿದೆ.

ಇದನ್ನೂ ಓದಿ: ಒಂದೇ ಶೋನಲ್ಲಿ ಪ್ರಥಮ್​, ಸಿಹಿಕಹಿ ಚಂದ್ರು, ಅಕುಲ್​ ಬಾಲಾಜಿ! ಕಿರುತೆರೆ ಪ್ರೇಕ್ಷಕರಿಗೆ ಮಸ್ತ್​​ ಮನರಂಜನೆ

Published On - 6:38 pm, Sun, 4 April 21

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us