ಮಹಾಭಾರತದಲ್ಲಿ ಇಲ್ಲದ್ದನ್ನು ತೋರಿಸಿದ್ದಾರೆ: ‘ಕಲ್ಕಿ’ ಬಗ್ಗೆ ಅವಧಾನಿ ನರಸಿಂಹ ರಾವ್

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಕೆಲ ತಿಂಗಳ ಹಿಂದೆ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿದೆ. ಆದರೆ ಅವಧಾನಿ ಗರಿಕಪಟ್ಟಿ ನರಸಿಂಹ ರಾವ್, ‘ಕಲ್ಕಿ 2898 ಎಡಿ’ ಸಿನಿಮಾದಲ್ಲಿ ತೋರಿಸಲಾಗಿರುವ ಮಹಾಭಾರತದ ದೃಶ್ಯಗಳ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ.

ಮಹಾಭಾರತದಲ್ಲಿ ಇಲ್ಲದ್ದನ್ನು ತೋರಿಸಿದ್ದಾರೆ: ‘ಕಲ್ಕಿ’ ಬಗ್ಗೆ ಅವಧಾನಿ ನರಸಿಂಹ ರಾವ್
Follow us
|

Updated on: Sep 24, 2024 | 12:51 PM

ಪೌರಾಣಿಕ ಕತೆಗಳನ್ನು ತೆರೆಗೆ ತರುವ ಇಂದು ನೆನ್ನೆಯದಲ್ಲ. ಸಿನಿಮಾ ಪ್ರಾರಂಭವಾದಾಗಿನಿಂದಲೂ ಪೌರಾಣಿಕ ಕತೆಗಳನ್ನು ಸಿನಿಮಾ ಮಾಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಆದರೆ ಮೊದಲೆಲ್ಲ ಕತೆಗಳಿಗೆ ಭಂಗ ತರದೆ ಕತೆಗಳು ಇದ್ದಂತೆ ತೋರಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಟ್ರೆಂಡ್ ಉಲ್ಟಾ ಆಗಿದೆ. ತಮಗೆ ಬೇಕಾದ ಪಾತ್ರಗಳನ್ನು ಹೆಕ್ಕಿ ಅವುಗಳನ್ನು ಹೀರೋ ರೀತಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡದಲ್ಲಿ ಬಂದ ‘ಕುರುಕ್ಷೇತ್ರ’ ಸಿನಿಮಾನಲ್ಲಿ ಧುರ್ಯೋಧನನ್ನು ಹೀರೋ ರೀತಿ ಬಿಂಬಿಸಲಾಗಿತ್ತು. ಇತ್ತೀಚೆಗೆ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾನಲ್ಲಿ ಕರ್ಣನನ್ನು ನಾಯಕನಂತೆ ಚಿತ್ರಿಸಲಾಗಿದೆ. ಆದರೆ ಈ ಸಿನಿಮಾ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿರುವ ಅವಧಾನಿ ಗರಿಕಪಟ್ಟಿ ನರಸಿಂಹ ರಾವ್, ‘ಮಹಾಭಾರತದಲ್ಲಿ ಇಲ್ಲದ್ದನೆಲ್ಲ ತೋರಿಸಲಾಗಿದೆ’ ಎಂದಿದ್ದಾರೆ.

ಪ್ರವಚನವೊಂದರಲ್ಲಿ ಮಾತನಾಡಿರುವ ಗರಿಕಪಟ್ಟಿ ನರಸಿಂಹ ರಾವ್, ‘ಕರ್ಣ ಯಾರು ಎಂಬುದು ಗೊತ್ತಿಲ್ಲವರು ‘ಕಲ್ಕಿ’ ಸಿನಿಮಾದಲ್ಲಿ ತೋರಿಸಿದಾತನನ್ನೇ ಕರ್ಣ ಎಂದುಕೊಳ್ಳುತ್ತಾರೆ ನಾವೇನು ಮಾಡಲು ಸಾಧ್ಯ? ಸಿನಿಮಾದವರು ಏನು ತೋರಿಸುತ್ತಾರೋ ಅದು ನಿಜ ಎಂದುಕೊಳ್ಳುವ ಕಾಲ ಇದು. ಇಡೀ ಮಹಾಭಾರತದಲ್ಲಿ ಇರುವುದೇ ಒಂದು ಆದರೆ ‘ಕಲ್ಕಿ’ ಸಿನಿಮಾದಲ್ಲಿ ತೋರಿಸಿರುವುದೇ ಒಂದು. ಕರ್ಣ, ಅಶ್ವತ್ಥಾಮ ಅವರುಗಳು ಹೀರೋ ಆಗಿಬಿಟ್ಟರು, ಅರ್ಜುನ್, ಭೀಮ, ಕೃಷ್ಣ ಇವರೆಲ್ಲರೂ ವಿಲನ್ ಆಗಿಬಿಟ್ಟರು’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:‘ಬಾಹುಬಲಿ’ ಸಿನಿಮಾದ ರೀಮೇಕ್ ‘ಕಲ್ಕಿ 2898 ಎಡಿ’ ಎಂಬುದು ನಿಮಗೆ ಗೊತ್ತೆ?

‘ಸರಿಯಾಗಿ ಮಹಾಭಾರತ ಓದಿದರೆ ಅರ್ಥವಾಗುತ್ತದೆ ಕರ್ಣನ್ನು ಅಶ್ವತ್ಥಾಮ ಕಾಪಾಡಿದನೆಂದು. ಆದರೆ ಸಿನಿಮಾದಲ್ಲಿ ಅಶ್ವತ್ಥಾಮನನ್ನು ಕರ್ಣ ಕಾಪಾಡಿದನೆಂದು ತೋರಿಸಲಾಗಿದೆ. ಅಂಥಹಾ ಕರ್ಮ ಅಶ್ವತ್ಥಾಮನಿಗೇನಿದೆ, ಆತ ಮಹಾ ಯೋಧ, ಮಹಾ ವೀರ. ಕರ್ಣ ಒಂದು ಬಾರಿ ಸಹ ಅಶ್ವತ್ಥಾಮನನ್ನು ಕಾಪಾಡಲಿಲ್ಲ. ಸಿನಿಮಾದಲ್ಲಿ ಡೈಲಾಗ್ ಬೇರೆ ಇಟ್ಟಿದ್ದಾರೆ, ‘ಆಚಾರ್ಯ ಪುತ್ರ ಆಲಸ್ಯವಾಯ್ತಾ’ ಎಂದು. ಈ ಡೈಲಾಗ್ ಅದೆಲ್ಲಿಂದ ಬಂತೋ ಗೊತ್ತಿಲ್ಲ. ಡೈಲಾಗ್ ಬರೆಯುವುದಕ್ಕೆ ಏನಿದೆ? ಏನು ಬೇಕಾದರೂ ಬರೆದುಬಿಡುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಗರಿಕಪಟ್ಟಿ ನರಸಿಂಹ ರಾವ್.

‘ಕಲ್ಕಿ 2898 ಎಡಿ’ ಸಿನಿಮಾವು ಮಹಾಭಾರತದ ಕುರುಕ್ಷೇತ್ರ ಯುದ್ಧದ ಕೆಲವು ಸನ್ನಿವೇಶಗಳನ್ನು ಒಳಗೊಂಡಿದೆ. ಸಿನಿಮಾದ ಕತೆಯಲ್ಲಿ ಅಶ್ವತ್ಥಾಮ ಹಾಗೂ ಕರ್ಣರದ್ದು ಪ್ರಮುಖ ಪಾತ್ರವಿದೆ. ಸಿನಿಮಾದ ಕೊನೆಯಲ್ಲಿ ಅರ್ಜುನ ಹಾಗೂ ಅಶ್ವತ್ಥಾಮರ ನಡುವೆ ನಡೆಯುವ ಯುದ್ಧದ ಸನ್ನಿವೇಶವಿದೆ. ಅಶ್ವತ್ಥಾಮನ ಮೇಲೆ ಅರ್ಜುನ ಬಾಣ ಪ್ರಯೋಗಿಸಿದಾಗ ಅದನ್ನು ಕರ್ಣ (ಪ್ರಭಾಸ್) ತಡೆಯುತ್ತಾನೆ. ಆ ದೃಶ್ಯದಲ್ಲಿ ಕರ್ಣನನ್ನು ಹೀರೋ ರೀತಿ ತೋರಿಸಲಾಗಿದೆ. ಆದರೆ ಅರ್ಜುನನ್ನು ವಿಲನ್ ರೀತಿ, ಅಶ್ವತ್ಥಾಮನನ್ನು ಕಡಿಮೆ ಶಕ್ತಿವಂತನ ರೀತಿ ತೋರಿಸಲಾಗಿದೆ. ಸಿನಿಮಾದಲ್ಲಿ ಕರ್ಣನ ಪಾತ್ರದಲ್ಲಿ ಪ್ರಭಾಸ್, ಅಶ್ವತ್ಥಾಮನ ಪಾತ್ರದಲ್ಲಿ ಅಮಿತಾಬ್ ಬಚ್ಚನ್, ಅರ್ಜುನನ ಪಾತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದಾರೆ. ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗ ಸಹ ಬರಲಿದೆ. ಸಿನಿಮಾದ ಚಿತ್ರೀಕರಣ ಇನ್ನಷ್ಟೆ ಪ್ರಾರಂಭವಾಗಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಮುಡಾ ತೀರ್ಪು: ಸಿಎಂ ಮನೆ ಸೇರಿದಂತೆ ರಾಜ್ಯಾದ್ಯಂತ ಬಿಗಿ ಭದ್ರತೆ ಲೈವ್​
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಫ್ಲಿಪ್​ಕಾರ್ಟ್​ ಬಿಗ್ ಬಿಲಿಯನ್ ಡೇ ಸೇಲ್​ ₹49,999ಕ್ಕೆ ಆ್ಯಪಲ್ ಐಫೋನ್ 15
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ಲೆಬನಾನ್​ ಮೇಲೆ ಇಸ್ರೇಲ್​ ರಾಕೆಟ್​ ದಾಳಿ ಹೇಗಿತ್ತು
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
ನಮ್ಮ ಪರ ತೀರ್ಪು ಬರದಿದ್ದರೆ ಸುಪ್ರೀಂ ಮೊರೆ ಹೋಗುತ್ತೇವೆಂದ ಸ್ನೇಹಮಯಿ ಕೃಷ್ಣ
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
ಕೆಸರಿನ ಗುಂಡಿಯಲ್ಲಿ ಸಿಲುಕಿದ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್​ ಕಾರು
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
‘ಬಿಗ್ ಬಾಸ್ ಶೋನ ಈ ಹೀರೋ ನಡೆಸಿಕೊಡಲಿ ಎಂದು ನಾನೇಕೆ ಕೇಳಲಿ’; ಸುದೀಪ್
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Daily Devotional: ಎಡಗೈಯಲ್ಲಿ ಬರೆಯುತ್ತಿದ್ದರೆ ಅರ್ಥವೇನು? ವಿಡಿಯೋ ನೋಡಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸದ 4ನೇ ಮಂಗಳವಾರದ ದಿನ ಭವಿಷ್ಯ ತಿಳಿಯಿರಿ
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?