‘ಅರ್ಜುನ್ ರೆಡ್ಡಿ, ಗೀತ ಗೋವಿಂದಂ..’; ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ ಈ 5 ಚಿತ್ರಗಳು ಸೂಪರ್​ಹಿಟ್! ಇಲ್ಲಿದೆ ಕುತೂಹಲಕರ ಮಾಹಿತಿ

| Updated By: shivaprasad.hs

Updated on: Feb 15, 2022 | 9:38 AM

Allu Arjun: ಚಿತ್ರರಂಗದಲ್ಲಿ ನಟರಿಗೆ ವಿವಿಧ ಆಫರ್ ಬರುವುದು, ನಟರು ಅದನ್ನು ನಿರಾಕರಿಸುವುದು ಸಾಮಾನ್ಯ. ಟಾಲಿವುಡ್ ನಟ, ಪುಷ್ಪ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಅಲ್ಲು ಅರ್ಜುನ್ ನಿರಾಕರಿಸಿದ್ದ ಹಲವು ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಸೂಪರ್ ಹಿಟ್ ಆಗಿದ್ದ ವಿಚಾರ ನಿಮಗೆ ಗೊತ್ತೇ? ಇಲ್ಲಿದೆ ಕುತೂಹಲಕರ ಮಾಹಿತಿ.

‘ಅರ್ಜುನ್ ರೆಡ್ಡಿ, ಗೀತ ಗೋವಿಂದಂ..’; ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ್ದ ಈ 5 ಚಿತ್ರಗಳು ಸೂಪರ್​ಹಿಟ್! ಇಲ್ಲಿದೆ ಕುತೂಹಲಕರ ಮಾಹಿತಿ
ಅಲ್ಲು ಅರ್ಜುನ್
Follow us on

‘ಪುಷ್ಪ: ದಿ ರೈಸ್’ (Pushpa: The Rise) ಚಿತ್ರದ ಮೂಲಕ ಟಾಲಿವುಡ್ ನಟ ಅಲ್ಲು ಅರ್ಜುನ್ (Allu Arjun) ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ವಿಮರ್ಶಕರಿಂದ, ವೀಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡ ಈ ಚಿತ್ರ ಬಾಕ್ಸಾಫೀಸ್​​ನಲ್ಲೂ ಧೂಳೆಬ್ಬಿಸಿದೆ. ಬಾಲಿವುಡ್ ಚಿತ್ರಗಳಿಗೆ ಸಡ್ಡು ಹೊಡೆದಿದ್ದ ಪುಷ್ಪದ ಹಿಂದಿ ಅವತರಣಿಕೆ ನೂರು ಕೋಟಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು. ಚಿತ್ರದ ಒಟ್ಟಾರೆ ಕಲೆಕ್ಷನ್ 300 ಕೋಟಿ ರೂ ದಾಟಿದೆ ಎನ್ನುತ್ತವೆ ವರದಿಗಳು. ಇದೀಗ ಅಮೆಜಾನ್ ಪ್ರೈಮ್ ನಲ್ಲಿ ಬಿತ್ತರವಾಗುತ್ತಿರುವ ಚಿತ್ರ ಅಲ್ಲೂ ಜನರನ್ನು ಸೆಳೆಯುತ್ತಿದೆ. ಅಲ್ಲು ಅರ್ಜುನ್ ವೃತ್ತಿ ಜೀವನದಲ್ಲಿ ಇದೊಂದು ಮಹತ್ತರ ಚಿತ್ರವಾಗಿ ದಾಖಲಾಗಿದೆ. ಇದೀಗ ಸಾಲು ಸಾಲು ಯಶಸ್ಸಿನಿಂದ ಬೀಗುತ್ತಿರುವ ಅಲ್ಲು ಅರ್ಜುನ್, ರಿಜೆಕ್ಟ್ ಮಾಡಿದ್ದ ಹಲವು ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಸಖತ್ ಕಮಾಯಿ ಮಾಡಿದ್ದವು ಎಂಬ ವಿಚಾರ ನಿಮಗೆ ಗೊತ್ತೇ? ಹೌದು. ಅಲ್ಲು ವಿವಿಧ ಕಾರಣಗಳಿಗೆ ರಿಜೆಕ್ಟ್ ಮಾಡಿದ್ದ ಚಿತ್ರಗಳು ಬಾಕ್ಸಾಫೀಸ್​ನಲ್ಲಿ ಕೋಟಿಗಟ್ಟಲೆ ಬಾಚಿಕೊಂಡಿದ್ದವು. ಅಷ್ಟೇ ಅಲ್ಲ‌, ಆ ನಟರ ವೃತ್ತಿ ಬದುಕಿಗೆ ಮಹತ್ತರ ತಿರುವುಗಳನ್ನೂ ನೀಡಿದ್ದವು. ಅಂತಹ ಚಿತ್ರಗಳ ಪಟ್ಟಿ ಇಲ್ಲಿದೆ.

1. ಭಜರಂಗಿ ಭಾಯಿಜಾನ್: ಸಲ್ಮಾನ್ ಖಾನ್ ನಟನೆಯ ಈ ಚಿತ್ರ ದೊಡ್ಡ ಕ್ಯಾನ್ವಾಸ್​ನಲ್ಲಿ ತಯಾರಾಗಿತ್ತು. ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕತೆ ಬರೆದಿದ್ದರು. ಕಬೀರ್ ಖಾನ್ ನಿರ್ದೇಶನದ ಈ ಚಿತ್ರ 2015ರಲ್ಲಿ ತೆರೆಕಂಡಿತ್ತು. ಬಾಕ್ಸಾಫೀಸ್​ನಲ್ಲೂ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ‘ಭಜರಂಗಿ ಭಾಯಿಜಾನ್ 2’ ಬಗ್ಗೆ ಇತ್ತೀಚೆಗೆ ನಟ ಸಲ್ಮಾನ್ ಖಾನ್ ಸುಳಿವು ಕೂಡ ನೀಡಿದ್ದಾರೆ.

2. ಗೀತಗೋವಿಂದಂ: ‘ಸರೈನೋಡು’ ಚಿತ್ರದ ಯಶಸ್ಸಿನಲ್ಲಿದ್ದ ಅಲ್ಲು ಅರ್ಜುನ್ ಗೆ ‘ಗೀತ ಗೋವಿಂದಂ’ ಆಫರ್ ಬಂದಿತ್ತು. ಆದರೆ ಚಿತ್ರವು ತಮಗೆ ಹೊಂದುವುದಿಲ್ಲ ಎಂಬ ಕಾರಣಕ್ಕೆ ಅವರು ನಿರಾಕರಿಸಿದ್ದರು.‌ ನಂತರ ವಿಜಯ್ ದೇವರಕೊಂಡ ನಟಿಸಿದ್ದ ಈ ಚಿತ್ರ 2018ರಲ್ಲಿ ತೆರೆಕಂಡು ಹಿಟ್ ಆಗಿತ್ತು.

3. ಅರ್ಜುನ್ ರೆಡ್ಡಿ: ವಿಜಯ್ ದೇವರಕೊಂಡ ವೃತ್ತಿ ಜೀವನಕ್ಕೆ ದೊಡ್ಡ ತಿರುವು ಕೊಟ್ಟ ಈ ಚಿತ್ರಕ್ಕೆ‌‌‌ ಮೊದಲಿಗೆ ಅಲ್ಲು ಅರ್ಜುನ್ ಅವರಿಗೆ ಆಫರ್ ಬಂದಿತ್ತು.‌ ಆದರೆ ಕತೆಯ ನಾಯಕ ಪಾತ್ರ ತಮಗೆ ಹೊಂದಿಕೆಯಾಗುವುದಿಲ್ಲ ಎಂಬ ಕಾರಣದಿಂದ ನಿರಾಕರಿಸಿದ್ದರು. 2017ರಲ್ಲಿ ತೆರೆಕಂಡ ಈ ಚಿತ್ರ ಸೂಪರ್ ಹಿಟ್ ಆಗಿತ್ತು.‌ ಅಲ್ಲದೇ ಹಿಂದಿಗೆ ರಿಮೇಕ್ ಕೂಡ ಆಗಿತ್ತು.

4. ಭದ್ರ: ನಿರ್ದೇಶಕ ಬೋಯಪಟಿ ಶ್ರೀನು ಭದ್ರ ಚಿತ್ರದ ನಾಯಕ‌ ಪಾತ್ರಕ್ಕೆ ಅಲ್ಲು ಅರ್ಜುನ್ ಅವರಿಗೆ ಆಫರ್ ನೀಡಿದ್ದರು. ‘ಗಂಗೋತ್ರಿ’ ಹಾಗೂ ‘ಆರ್ಯ’ ಮೊದಲಾದ ರೊಮ್ಯಾಂಟಿಕ್ ಚಿತ್ರಗಳ ಯಶಸ್ಸಿನಲ್ಲಿದ್ದ ಅಲ್ಲು ಅರ್ಜುನ್, ಆಕ್ಷನ್‌ ಚಿತ್ರ ಒಪ್ಪಲು ಮನಸ್ಸು ಮಾಡಿರಲಿಲ್ಲ. ಕೊನೆಗೆ ಈ ಆಫರ್ ರವಿ ತೇಜ ಪಾಲಾಗಿತ್ತು.

5. ಗ್ಯಾಂಗ್ ಲೀಡರ್: ನಿರ್ದೇಶಕ ವಿಕ್ರಮ್‌ ಕುಮಾರ್ ‘ಗ್ಯಾಂಗ್ ಲೀಡರ್’ ಚಿತ್ರಕ್ಕೆ ಅಲ್ಲು ಅರ್ಜುನ್ ಅವರನ್ನು ಸಂಪರ್ಕಿಸಿದ್ದರು. ಆದರೆ ಅಲ್ಲು ಅರ್ಜುನ್ ಆಫರ್ ನಿರಾಕರಿಸಿದ್ದರು. ಕೊನೆಗೆ ನಾನಿ ನಟಿಸಿದ್ದ ಈ ಚಿತ್ರ ವೀಕ್ಷಕರಿಂದ ಉತ್ತ‌ಮ ಪ್ರತಿಕ್ರಿಯೆ ಪಡೆದಿತ್ತು.

ಇದನ್ನೂ ಓದಿ:

‘ಕಳ್ಳರಿಗೆ ಕಾಂಗ್ರೆಸ್ ಇಷ್ಟವಾಗುತ್ತದೆ, ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕುತ್ತಾರೆ’- ವಿವಾದ ಸೃಷ್ಟಿಸಿದ ಕಂಗನಾ ಹೇಳಿಕೆ

ನೆಟ್​ಫ್ಲಿಕ್ಸ್​ ಜತೆ ಕೈ ಜೋಡಿಸಲಿರುವ ರಾಮ್​ ಚರಣ್​? ಹೊಸ ಡೀಲ್​ ಸಲುವಾಗಿ ಮುಂಬೈನಲ್ಲಿ ಮಾತುಕತೆ