ಗ್ರ್ಯಾಮಿ ಅವಾರ್ಡ್​ ಗೆದ್ದ ಝಾಕಿರ್ ಹುಸೇನ್ ಬ್ಯಾಂಡ್; ಅಭಿನಂದನೆ ತಿಳಿಸಿದ ರಿಕ್ಕಿ

Grammy Awards 2024: ಝಾಕಿರ್ ಹುಸೇನ್ ಅವರ ‘ಶಕ್ತಿ ಬ್ಯಾಂಡ್’ ಈ ಬಾರಿ ಗ್ರ್ಯಾಮಿ ಅವಾರ್ಡ್ ಗೆದ್ದಿದೆ. ರಿಕ್ಕಿ ಕೇಜ್ ಅವರು ಗ್ರ್ಯಾಮಿಯಲ್ಲಿ ಹಲವು ಬಾರಿ ಅವಾರ್ಡ್​ ಗೆದ್ದು ದಾಖಲೆ ಬರೆದಿದ್ದಾರೆ. ಅವರು ಶಕ್ತಿ ಬ್ಯಾಂಡ್​ಗೆ ಅಭಿನಂದನೆ ಹೇಳಿದ್ದಾರೆ. ಶಕ್ತಿ ಬ್ಯಾಂಡ್ ಅವಾರ್ಡ್ ಸ್ವೀಕರಿಸಿ ಮಾತನಾಡುತ್ತಿರುವ ವಿಡಿಯೋನ ರಿಕ್ಕಿ ಕೇಜ್ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗ್ರ್ಯಾಮಿ ಅವಾರ್ಡ್​ ಗೆದ್ದ ಝಾಕಿರ್ ಹುಸೇನ್ ಬ್ಯಾಂಡ್; ಅಭಿನಂದನೆ ತಿಳಿಸಿದ ರಿಕ್ಕಿ
ಶಕ್ತಿ ಬ್ಯಾಂಡ್

Updated on: Feb 05, 2024 | 9:27 AM

Grammy Awards 2024: ಶಂಕರ್ ಮಹದೇವನ್ ಹಾಗೂ ಝಾಕಿರ್ ಹುಸೇನ್ (Zakir Hussain) ಅವರ ‘ಶಕ್ತಿ ಬ್ಯಾಂಡ್’ ಈ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್​ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ‘ದಿಸ್ ಮೂಮೆಂಟ್’ ಹೆಸರಿನ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ ವಿಭಾಗದಲ್ಲಿ ಅವಾರ್ಡ್ ಸಿಕ್ಕಿದೆ. ಈ ಬ್ಯಾಂಡ್​ನಲ್ಲಿ ಗಾಯಕ ಶಂಕರ್ ಮಹದೇವನ್, ವಯಲಿನ್ ವಾದಕ ಗಣೇಶ್ ರಾಜಗೋಪಾಲನ್ ಕೂಡ ಇದ್ದಾರೆ. ಈ ಬ್ಯಾಂಡ್​ಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ.

ಗ್ರ್ಯಾಮಿಯಲ್ಲಿ ರಿಕ್ಕಿ ಕೇಜ್ ಅವರು ಹಲವು ಬಾರಿ ಅವಾರ್ಡ್​ ಗೆದ್ದು ದಾಖಲೆ ಬರೆದಿದ್ದಾರೆ. ಅವರು ಶಕ್ತಿ ಬ್ಯಾಂಡ್​ಗೆ ಅಭಿನಂದನೆ ತಿಳಿಸಿದ್ದಾರೆ. ಶಕ್ತಿ ಬ್ಯಾಂಡ್ ಅವಾರ್ಡ್ ಸ್ವೀಕರಿಸಿ ಮಾತನಾಡುತ್ತಿರುವ ವಿಡಿಯೋನ ರಿಕ್ಕಿ ಕೇಜ್ ಹಂಚಿಕೊಂಡಿದ್ದಾರೆ. ‘ಶಕ್ತಿ ಗ್ರ್ಯಾಮಿ ಗೆದ್ದಿದೆ. ಇದರಿಂದ ನಾಲ್ಕು ಮೇಧಾವಿ ಭಾರತೀಯ ಸಂಗೀತಗಾರರು ಗ್ರ್ಯಾಮಿ ಗೆದ್ದಂತೆ ಆಗಿದೆ. ಭಾರತವು ಎಲ್ಲಾ ದಿಕ್ಕುಗಳಲ್ಲೂ ಮಿಂಚುತ್ತಿದೆ. ಸೆಲ್ವಗಣೇಶ್, ಗಣೇಶ್ ರಾಜಗೋಪಾಲನ್, ಝಾಕಿರ್ ಹುಸೇನ್​ಗೆ ಅಭಿನಂದನೆ’ ಎಂದು ಅವರು ಬರೆದುಕೊಂಡಿದ್ದಾರೆ.

ರಿಕ್ಕಿ ಮಾಡಿದ ಟ್ವೀಟ್..

ಶಂಕರ್ ಮಹದೇವನ್ ಅವರು ಗ್ರ್ಯಾಮಿ ವೇದಿಕೆ ಮೇಲೆ ವಿನ್ನಿಂಗ್ ಸ್ಪೀಚ್ ನೀಡಿದ್ದಾರೆ. ಪತ್ನಿಗೆ ಅವರು ಧನ್ಯವಾದ ಹೇಳಿದ್ದಾರೆ. ‘ನನ್ನ ಮಿತ್ರರರು, ದೇವರು, ಗೆಳೆಯರು ಹಾಗೂ ಭಾರತಕ್ಕೆ ಧನ್ಯವಾದ. ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ. ನಾನು ಈ ಅವಾರ್ಡ್​ನ ನನ್ನ ಪತ್ನಿಗೆ  ಸಮರ್ಪಿಸುತ್ತೇನೆ. ಅವರು ನನಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ರಾಷ್ಟ್ರಗೀತೆಗೆ ಸ್ಪೆಷಲ್ ಟ್ಯೂನ್ ಟಚ್ ಕೊಟ್ಟ ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್, ಆಗಸ್ಟ್ 15ಕ್ಕೆ ಬಿಡುಗಡೆ

ಅಮೆರಿಕನ್ ಸಿಂಗರ್ ಮೈಲಿ ಸೈರಸ್ ಅವರಿಗೆ ಮೊದಲ ಗ್ರ್ಯಾಮಿ ಅವಾರ್ಡ್ ಸಿಕ್ಕಿದೆ. ‘ಫ್ಲವರ್ಸ್’ ಆಲ್ಬಂಗೆ ‘ಬೆಸ್ಟ್​ ಪಾಪ್ ಸೋಲೋ ಪರ್ಫಾರ್ಮೆನ್ಸ್’ ವಿಭಾಗದಲ್ಲಿ ಈ ಅವಾರ್ಡ್ ದೊರೆತಿದೆ. ಅವರು ಟೈಲರ್ ಸ್ವಿಫ್ಟ್, ದೋಜಾ ಕ್ಯಾಟ್ ಮೊದಲಾದವರನ್ನು ಹಿಂದಿಕ್ಕಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:48 am, Mon, 5 February 24