‘ಹನುಮಾನ್ ಅಂಶ್’ ವರ್ಷದ ಟಾಪ್ ಲಾಭದಾಯಕ ಸಿನಿಮಾ, ಗಳಿಸಿರುವುದೆಷ್ಟು?

Hanuman Ansh movie: ಅಲ್ಲೊಂದು ಇಲ್ಲೊಂದು ಸಣ್ಣ ಬಜೆಟ್ ಸಿನಿಮಾಗಳು, ಪ್ಯಾನ್ ಇಂಡಿಯಾ ಸಿನಿಮಾಗಳಿಗೂ ಸೆಡ್ಡು ಹೊಡೆದು ಬಿಡುತ್ತವೆ. ಅಂಥಹದ್ದೇ ಒಂದು ಸಿನಿಮಾ ಇದೀಗ ಬಂದಿದೆ. ಹಿಂದಿಯಲ್ಲಿ ಸ್ಟಾರ್ ನಟರ ಸಿನಿಮಾಗಳೇ ಮಕಾಡೆ ಮಲುಗುತ್ತಿರುವಾಗ ಅದೇ ಭಾಷೆಯಲ್ಲಿ ನಿರ್ಮಾಣಗೊಂಡಿರುವ ಅತ್ಯಂತ ಸರಳವಾದ, ಅತ್ಯಂತ ಕಡಿಮೆ ಬಜೆಟ್​​ನ ಸಿನಿಮಾ ಒಂದು ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಅದುವೇ ‘ಹನುಮಾನ್ ಅಂಶ್’ ಸಿನಿಮಾ.

‘ಹನುಮಾನ್ ಅಂಶ್’ ವರ್ಷದ ಟಾಪ್ ಲಾಭದಾಯಕ ಸಿನಿಮಾ, ಗಳಿಸಿರುವುದೆಷ್ಟು?
Hanuman Ansh

Updated on: Aug 28, 2026 | 3:01 PM

ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಅಬ್ಬರದ ನಡುವೆ ಸಣ್ಣ ಸಿನಿಮಾಗಳು ಎಲ್ಲೋ ಕಳೆದು ಹೋಗುತ್ತವೆ. ಒಳ್ಳೆಯ ಕಂಟೆಂಟ್ ಇದ್ದು ಸಹ ಸಣ್ಣ ಬಜೆಟ್ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಉಳಿಯುವುದಿಲ್ಲ. ಆದರೆ ಅಲ್ಲೊಂದು ಇಲ್ಲೊಂದು ಸಣ್ಣ ಬಜೆಟ್ ಸಿನಿಮಾಗಳು, ಪ್ಯಾನ್ ಇಂಡಿಯಾ ಸಿನಿಮಾಗಳಿಗೂ ಸೆಡ್ಡು ಹೊಡೆದು ಬಿಡುತ್ತವೆ. ಅಂಥಹದ್ದೇ ಒಂದು ಸಿನಿಮಾ ಇದೀಗ ಬಂದಿದೆ. ಹಿಂದಿಯಲ್ಲಿ ಸ್ಟಾರ್ ನಟರ ಸಿನಿಮಾಗಳೇ ಮಕಾಡೆ ಮಲುಗುತ್ತಿರುವಾಗ ಅದೇ ಭಾಷೆಯಲ್ಲಿ ನಿರ್ಮಾಣಗೊಂಡಿರುವ ಅತ್ಯಂತ ಸರಳವಾದ, ಅತ್ಯಂತ ಕಡಿಮೆ ಬಜೆಟ್​​ನ ಸಿನಿಮಾ ಒಂದು ಬಾಕ್ಸ್ ಆಫೀಸ್​​ನಲ್ಲಿ ಅಬ್ಬರಿಸುತ್ತಿದೆ. ಅದುವೇ ‘ಹನುಮಾನ್ ಅಂಶ್’ ಸಿನಿಮಾ.

ನೀಮ್ ಕರೋಲಿ ಬಾಬ ಅವರ ಕುರಿತಾದ ‘ಹನುಮಾನ್ ಅಂಶ’ ಇದೇ ತಿಂಗಳು ಏಳನೇ ತಾರೀಖು ಯಾವುದೇ ನಿರೀಕ್ಷೆಗಳಿಲ್ಲದೆ ಅತ್ಯಂತ ಕಡಿಮೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಕೇವಲ 1.8 ಕೋಟಿ ಬಜೆಟ್​​ನ ಈ ಸಿನಿಮಾನಲ್ಲಿ ಯಾವ ದೊಡ್ಡ ನಟರೂ ಇರಲಿಲ್ಲ, ದೊಡ್ಡ ತಾಂತ್ರಿಕವರ್ಗವೂ ಇರಲಿಲ್ಲ. ಆದರೂ ಸಿನಿಮಾ ದೊಡ್ಡ ಹಿಟ್ ಆಗಿದೆ. ನಿಧಾನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಾ ಹೋದ ‘ಹನುಮಾನ್ ಅಂಶ್’ ಸಿನಿಮಾ ದಿನದಿಂದ ದಿನಕ್ಕೆ ಶೋಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಾ ಸಾಗಿದ್ದು, ಇದೀಗ 20 ದಿನಗಳಲ್ಲಿ 12 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಆ ಮೂಲಕ ಈ ವರ್ಷದ ಅತ್ಯಂತ ಲಾಭದಾಯಕ ಸಿನಿಮಾ ಎನಿಸಿಕೊಂಡಿದೆ.

ಇದನ್ನೂ ಓದಿ:‘ಟಾಕ್ಸಿಕ್’ ಸಿನಿಮಾ ವಿಮರ್ಶೆ ಮಾಡಿದ ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಚಿತ್ರತಂಡ

ಇದೇ ಗುರುವಾರದಂದು ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸುಮಾರು 1.70 ಕೋಟಿ ಸಂಗ್ರಹಿಸಿದೆ, ‘ಟಾಕ್ಸಿಕ್’ ಸೇರಿದಂತೆ ಹಲವು ಸಿನಿಮಾಗಳ ಅಬ್ಬರದ ಎದುರು ಸಹ ಈ ಸಣ್ಣ ಸಿನಿಮಾ ಅಚಲವಾಗಿ ನಿಂತಿರುವುದು ಮಾತ್ರವಲ್ಲದೆ ದಿನದಿಂದ ದಿನಕ್ಕೆ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುತ್ತಾ ಸಾಗುತ್ತಿದೆ. ಈ ವೀಕೆಂಡ್ ಮುಗಿಯುವ ವೇಳೆಗೆ ಸಿನಿಮಾದ ಕಲೆಕ್ಷನ್ 20 ಕೋಟಿ ದಾಟುವ ನಿರೀಕ್ಷೆ ಇದೆ.

ಇತ್ತೀಚೆಗಿನ ದಿನಗಳಲ್ಲಿ ಭಕ್ತಿ ಪ್ರಧಾನ ಸಿನಿಮಾಗಳು ದೊಡ್ಡ ಸದ್ದು ಮಾಡುತ್ತಿವೆ. ಕೆಲ ತಿಂಗಳುಗಳ ಹಿಂದೆಯಷ್ಟೆ ಬಿಡುಗಡೆ ಆಗಿದ್ದ ಗುಜರಾತಿ ಸಿನಿಮಾ, ‘ಲಾಲೊ ಕೃಷ್ಣ ಸಹಾಯತೆ’ ಹೆಸರಿನ ಗುಜರಾತಿ ಸಿನಿಮಾ ಸಹ ದೊಡ್ಡ ಹಿಟ್ ಆಗಿತ್ತು. ಈ ಸಿನಿಮಾ ಸಹ ಬಹಳ ಕಡಿಮೆ ಬಜೆಟ್​​ನಲ್ಲಿ ನಿರ್ಮಾಣ ಆಗಿದ್ದ ಸಿನಿಮಾ ಆಗಿತ್ತು. ಮರಾಠಿ ಸಿನಿಮಾ ‘ದಿಯೋಲ್ ಬಂದ್’ ಸಿನಿಮಾ ಸಹ ದೊಡ್ಡ ಹಿಟ್ ಆಗಿತ್ತು. ಕೇವಲ 10 ಕೋಟಿ ಬಜೆಟ್​ನ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಗಳಿಕೆ ಮಾಡಿತ್ತು. ಇದೀಗ ‘ಹನುಮಾನ್ ಅಂಶ್’ ಸಿನಿಮಾ ಸಹ ಅದೇ ಹಾದಿಯಲ್ಲಿದೆ.

ವಿಶಾಲ್ ಚತುರ್ವೇದಿ ನಿರ್ದೇಶನ ಮಾಡಿರುವ ‘ಹನುಮಾನ್ ಅಂಶ್’ ಸಿನಿಮಾ ಲಕ್ಷಾಂತರ ಭಕ್ತಾಧಿಗಳನ್ನು ಹೊಂದಿರುವ ನೀಮ್ ಕರೋಲಿ ಬಾಬ ಅವರ ಕುರಿತಾದ ಕತೆ ಒಳಗೊಂಡಿದೆ. ಈ ಸಿನಿಮಾ ಇದೀಗ ಬೆಂಗಳೂರಿನಲ್ಲೂ ಪ್ರದರ್ಶನ ಕಾಣುತ್ತಿದ್ದು, ಸುಮಾರು 50ಕ್ಕೂ ಹೆಚ್ಚು ಶೋಗಳು ‘ಹನುಮಾನ್ ಅಂಶ್’ ಸಿನಿಮಾಕ್ಕೆ ದೊರಕಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Fri, 28 August 26

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us