ದಿಶಾ ಪಟಾಣಿ ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಸ್ಟಾರ್ ನಟರಾದ ಟೈಗರ್ ಶ್ರಾಫ್, ಸಲ್ಮಾನ್ ಖಾನ್ ಜತೆ ದಿಶಾ ತೆರೆಹಂಚಿಕೊಂಡಿದ್ದಾರೆ. ಅವರಿಗೆ ಇಂದು (ಜೂನ್ 13) 29ನೇ ಜನ್ಮದಿನದ ಸಂಭ್ರಮ. ಈ ವೇಳೆ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಿಶಾ ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಕಮರ್ಷಿಯಲ್ ಜಾಹೀರಾತುಗಳನ್ನು ನಟಿಸುತ್ತಿದ್ದರು. ಚಾಕೋಲೆಟ್, ಬಟ್ಟೆ, ಸೌಂದರ್ಯ ವರ್ಧಕ ಉತ್ಪನ್ನಗಳ ಜಾಹೀರಾತಿನಲ್ಲಿ ದಿಶಾ ಕಾಣಿಸಿಕೊಳ್ಳುತ್ತಿದ್ದರು. 10 ವರ್ಷಗಳಲ್ಲಿ ಅವರ ಜೀವನ ಸಂಪೂರ್ಣವಾಗಿ ಬದಲಾಗಿದೆ.
2015ರಲ್ಲಿ ತೆರೆಗೆ ಬಂದ ತೆಲುಗಿನ ‘ಲೋಫರ್’ ಸಿನಿಮಾ ಮೂಲಕ ದಿಶಾ ಚಿತ್ರರಂಗಕ್ಕೆ ಕಾಲಿಟ್ಟರು. 2016ರಲ್ಲಿ ತೆರೆಕಂಡ ಎಂಎಸ್ ಧೋನಿ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿಟ್ಟರು. ‘ಭಾಗಿ’ ಸರಣಿಯ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಟೈಗರ್ ಶ್ರಾಫ್ ಪ್ರೇಯಸಿ ಎಂದು ಕೂಡ ಹೇಳಲಾಗುತ್ತಿದೆ.
ಬಾಲಿವುಡ್ನಲ್ಲಿ ಮಿಂಚುತ್ತಿರುವ ದಿಶಾ 10 ವರ್ಷಗಳ ಹಿಂದೆ ಈ ರೀತಿ ಇರಲಿಲ್ಲ. ಸಣ್ಣ-ಪುಟ್ಟ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು, ಮಾಡೆಲಿಂಗ್ನಲ್ಲಿ ತೊಡಗಿಕೊಂಡಿದ್ದರು. ಅವರು ಮೊಟ್ಟ ಮೊದಲ ಬಾರಿಗೆ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಲು ಆಡಿಷನ್ ಕೊಟ್ಟಿದ್ದು 2009ರಲ್ಲಿ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ತೆರೆಗೆ ಬಂದ ಸಲ್ಮಾನ್ ಖಾನ್ ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದಲ್ಲಿ ದಿಶಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಆದರೆ, ಸಿನಿಮಾ ವಿಮರ್ಶೆಯಲ್ಲಿ ಸೋತಿದೆ. ‘ಏಕ್ ವಿಲನ್ ರಿಟರ್ನ್’ ಚಿತ್ರದಲ್ಲಿ ದಿಶಾ ನಟಿಸುತ್ತಿದ್ದಾರೆ.
ಇತ್ತೀಚೆಗೆ ದಿಶಾ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಲಾಕ್ಡೌನ್ ಮಧ್ಯೆಯೂ ದಿಶಾ ಹಾಗೂ ಟೈಗರ್ ಶ್ರಾಫ್ ಕಾರಿನಲ್ಲಿ ಮುಂಬೈನ ಬಾಂದ್ರಾ ರಸ್ತೆಯಲ್ಲಿ ಸುತ್ತಾಟ ನಡೆಸಿದ್ದರು. ಈ ವಿಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ಜೋರಾಗಿತ್ತು.
ಇದನ್ನೂ ಓದಿ: ಲಾಕ್ಡೌನ್ ನಿಯಮ ಉಲ್ಲಂಘನೆ; ದಿಶಾ ಪಟಾನಿ, ಟೈಗರ್ ಶ್ರಾಫ್ ವಿರುದ್ಧ ಎಫ್ಐಆರ್ ದಾಖಲು