Harnaaz Sandhu: ‘ಮಿಸ್ ಯೂನಿವರ್ಸ್ ಇಂಡಿಯಾ 2021’ರ ಕಿರೀಟ ಮುಡಿಗೇರಿಸಿಕೊಂಡ ಹರ್ನಾಸ್ ಸಂಧು

TV9 Digital Desk

| Edited By: shivaprasad.hs

Updated on: Oct 01, 2021 | 3:51 PM

Miss Universe India 2021: ಚಂಡೀಗಡ ಮೂಲದ ಹರ್ನಾಸ್ ಸಂಧು ‘ಮಿಸ್ ಯೂನಿವರ್ಸ್ ಇಂಡಿಯಾ 2021’ ಆಗಿ ಆಯ್ಕೆಯಾಗಿದ್ದಾರೆ. ಇಸ್ರೇಲ್​ನಲ್ಲಿ ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆಗೆ ಭಾರತದ ಸ್ಪರ್ಧಿಯಾಗಿ ಅವರು ಪ್ರತಿನಿಧಿಸಲಿದ್ದಾರೆ.

Harnaaz Sandhu: ‘ಮಿಸ್ ಯೂನಿವರ್ಸ್ ಇಂಡಿಯಾ 2021’ರ ಕಿರೀಟ ಮುಡಿಗೇರಿಸಿಕೊಂಡ ಹರ್ನಾಸ್ ಸಂಧು
‘ಮಿಸ್ ಯೂನಿವರ್ಸ್ ಇಂಡಿಯಾ 2021’ ಆಗಿ ಆಯ್ಕೆಯಾದ ಹರ್ನಾಸ್ ಸಂಧು (Credits: MissDivaOrg/ Instagram)

Follow us on

ಚಂಡೀಗಡ ಮೂಲದ ಹರ್ನಾಸ್ ಸಂಧು ‘ಮಿಸ್ ಯೂನಿವರ್ಸ್ ಇಂಡಿಯಾ 2021’ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸೆಪ್ಟೆಂಬರ್ 30ರಂದು ನಡೆದ ಅದ್ದೂರಿ ಸಮಾರಂಭದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್ ಪ್ರಶಸ್ತಿ ಪ್ರದಾನ ಮಾಡಿದರು. ಹರ್ನಾಸ್ ಅವರು ಈ ಮೂಲಕ ಇಸ್ರೇಲ್​ನಲ್ಲಿ ನಡೆಯಲಿರುವ ‘ವಿಶ್ವ ಸುಂದರಿ’ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ. ಪುಣೆಯ ರಿತಿಕಾ ಖಟ್ನಾನಿ ‘ಮಿಸ್ ದೀವಾ ಸೂಪರ್​ನ್ಯಾಷನಲ್ 2022’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ಅವರು 13ನೇ ಮಿಸ್ ಸೂಪರ್​ನ್ಯಾಷನಲ್ ಪೇಜೆಂಟ್​ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಜೈಪುರದ ಸೋನಲ್ ಕುಕ್ರೇಜಾ ‘ಮಿಸ್ ದೀವಾ’ದ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ. ಗುರುವಾರದಂದು ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಕಾರ್ಯಕ್ರಮವನ್ನುಅದ್ದೂರಿಯಾಗಿ ನಡೆಸಲಾಗಿದೆ. ಬಾಲಿವುಡ್​ನ ಖ್ಯಾತ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ಧರು. ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನೃತ್ಯಗಾರ್ತಿ ಮಲೈಕಾ ಅರೋರಾ ಕೂಡ ಭಾಗವಹಿಸಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು. ಅಂತಿಮ ಸುತ್ತಿನಲ್ಲಿ ಭಾಗವಹಿಸಿದ್ದ 20 ಸ್ಪರ್ಧಿಗಳ ವಸ್ತ್ರವನ್ನು ಖ್ಯಾತ ವಿನ್ಯಾಸಗಾರ ಅಭಿಷೇಕ್ ಶರ್ಮಾ ವಿನ್ಯಾಸ ಮಾಡಿದ್ದರು.

View this post on Instagram

A post shared by Miss Diva (@missdivaorg)

View this post on Instagram

A post shared by Miss Diva (@missdivaorg)

 ರಿತಿಕಾ ಖಟ್ನಾನಿ ಪ್ರಶಸ್ತಿ ಸ್ವೀಕರಿಸುತ್ತಿರುವುದು:

View this post on Instagram

A post shared by Miss Diva (@missdivaorg)

ಮೊದಲ ರನ್ನರ್ ಅಪ್ ಸೋನಲ್ ಕುಕ್ರೆಜಾ:

View this post on Instagram

A post shared by Miss Diva (@missdivaorg)

ಕಾರ್ಯಕ್ರಮದಲ್ಲಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಪಂಕಜ್ ಅಡ್ವಾನಿ, ಗಾಯಕಿ ಕನಿಕಾ ಕಪೂರ್, ಅಶ್ವಿನನಿ ಐಯ್ಯರ್ ತಿವಾರಿ ಸೇರಿದಂತೆ ಹಲವರು ಭಾಗವಹಿಸಿದ್ದರು. ಕಾರ್ಯಕ್ರಮವು ಅಕ್ಟೋಬರ್ 16ರ ಸಂಜೆ 7 ಗಂಟೆಗೆ ಎಂಟಿವಿಇಯಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ:

ಪ್ರಿಯಾಂಕಾ ಚೋಪ್ರಾ ವಿಮಾನದಲ್ಲಿ ಕೂತ ರೀತಿಗೆ ಭಾರತೀಯರಿಂದ ಮೆಚ್ಚುಗೆ; ಪಿಂಕಿ ಫೋಟೋ ವೈರಲ್

ಖ್ಯಾತ ನಟರ ಚಿತ್ರಗಳಲ್ಲಿ ಮಹಿಳಾ ವಿರೋಧಿ ಸಂಭಾಷಣೆ; ಮುಂಬೈ ಪೊಲೀಸ್ ಹೇಳಿದ್ದೇನು?

ತಾಜಾ ಸುದ್ದಿ

Related Stories

Click on your DTH Provider to Add TV9 Kannada