ಚಿತ್ರರಂಗದಲ್ಲಿ ಹೊಸ ಹೊಸ ಪ್ರಯೋಗಗಳು ಆಗುತ್ತಿರುತ್ತವೆ. ಅದೇ ಹಳಸಲು ಸ್ಟೋರಿಗಳನ್ನು ಬಿಟ್ಟು ಏನಾದರೂ ಡಿಫರೆಂಟ್ ಆಗಿರುವುದನ್ನು ತೆರೆಗೆ ತಂದರೆ ಪ್ರೇಕ್ಷಕರು ಎಂಜಾಯ್ ಮಾಡುತ್ತಾರೆ. ಈಗ ತೆಲುಗಿನಲ್ಲಿ ಒಂದು ಹೊಸ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದಲ್ಲಿ ಭಿನ್ನವಾದ ಸ್ಟೋರಿ ಇದೆ. ಈ ಚಿತ್ರದ ಹೆಸರು ‘ಸುಂದರಂ ಮಾಸ್ಟರ್’ (Sundaram Master). ಹಳ್ಳಿಯ ಜನರಿಗೆ ಇಂಗ್ಲಿಷ್ (English) ಹೇಳಿಕೊಡಲು ಬರುವ ಶಿಕ್ಷಕನ ಕಥೆ ಈ ಸಿನಿಮಾದಲ್ಲಿದೆ. ಸದ್ಯ ‘ಸುಂದರಂ ಮಾಸ್ಟರ್’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಖತ್ ಕಾಮಿಡಿಯಾಗಿ ಮೂಡಿಬಂದಿರುವ ಈ ಟೀಸರ್ಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಟೀಸರ್ನ (Sundaram Master Teaser) ಮಧ್ಯದಲ್ಲಿ ಒಂದು ಟ್ವಿಸ್ಟ್ ನೀಡಲಾಗಿದೆ.
ಟೀಸರ್ ಮೂಲಕ ಕೌತುಕ ಮೂಡಿಸಿರುವ ‘ಸುಂದರಂ ಮಾಸ್ಟರ್’ ಚಿತ್ರದಲ್ಲಿ ವೈವಾ ವಿಡಿಯೋ ಖ್ಯಾತಿಯ ಹರ್ಷ ಚೆಮುಡು ಅವರು ಇಂಗ್ಲಿಷ್ ಶಿಕ್ಷಕನ ಪಾತ್ರ ಮಾಡಿದ್ದಾರೆ. ತನಗೆ ಇಂಗ್ಲಿಷ್ ಸರಿಯಾಗಿ ಬಾರದಿದ್ದರೂ ಹಳ್ಳಿಯ ಜನರಿಗೆ ಪಾಠ ಮಾಡಲು ಬರುವ ಈ ಪಾತ್ರ ಸಖತ್ ಫನ್ನಿಯಾಗಿದೆ. ದಿವ್ಯಾ ಶ್ರೀಪಾದ ಅವರು ಕೂಡ ಈ ಸಿನಿಮಾದಲ್ಲಿ ಪ್ರಮುಖ ಮಾತ್ರ ಮಾಡಿದ್ದಾರೆ. ಯೂಟ್ಯೂಬ್ನಲ್ಲಿ ‘ಸುಂದರಂ ಮಾಸ್ಟರ್’ ಸಿನಿಮಾದ ಟೀಸರ್ಗೆ ಪಾಸಿಟಿವ್ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಇಂಗ್ಲೆಂಡ್ ಜನರ ರೀತಿ ಇಂಗ್ಲಿಷ್ ಮಾತನಾಡಲು ಹೋಗಿ ಟ್ರೋಲ್ ಆದ ಸಮಂತಾ; ವಿಡಿಯೋ ವೈರಲ್
ಟಾಲಿವುಡ್ನ ಖ್ಯಾತ ನಟ ರವಿತೇಜ ಅವರು ‘ಸುಂದರಂ ಮಾಸ್ಟರ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅವರ ‘ಆರ್ಟಿ ಟೀಮ್ ವರ್ಕ್ಸ್’ ಬ್ಯಾನರ್ನಲ್ಲಿ ಈ ಸಿನಿಮಾ ಸಿದ್ಧವಾಗುತ್ತಿದೆ. ಟೀಸರ್ನಲ್ಲಿ ಕಾಮಿಡಿ ತುಂಬಿದೆ. ಇಂಗ್ಲಿಷ್ ಕಲಿಸಲು ಬರುವ ಸುಂದರಂ ಮಾಸ್ಟರ್ಗೆ ಬುಡಕಟ್ಟು ಜನರು ಶಾಕ್ ನೀಡುತ್ತಾರೆ. ಅಲ್ಲಿನ ಅಜ್ಜಿ, ತಾತ, ಆಂಟಿಯರು, ಮಕ್ಕಳು ಕೂಡ ಇಂಗ್ಲಿಷ್ನಲ್ಲಿ ಮಾತನಾಡುತ್ತಾರೆ. ಅದನ್ನು ಕೇಳಿ ಸುಂದರಂ ಮಾಸ್ಟರ್ಗೆ ಅಚ್ಚರಿಯೋ ಅಚ್ಚರಿ. ಒಟ್ಟಾರೆ ಈ ಸಿನಿಮಾದ ಅಸಲಿ ಕಥೆ ಏನು ಎಂಬುದನ್ನು ತಿಳಿದುಕೊಳ್ಳುವ ಕೌತುಕ ಮೂಡಿದೆ.
ಕಲ್ಯಾಣ್ ಸಂತೋಷ್ ಅವರು ‘ಸುಂದರಂ ಮಾಸ್ಟರ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಮೇಕಿಂಗ್ ಕೂಡ ಭಿನ್ನವಾಗಿದೆ. ಹಳ್ಳಿ ವಾತಾವರಣ, ಬುಡಕಟ್ಟು ಪಾತ್ರಗಳ ಗೆಟಪ್, ಹರ್ಷ ಚೆಮುಡು ಅವರ ನಟನೆಯಿಂದಾಗಿ ಈ ಟೀಸರ್ ಗಮನ ಸೆಳೆಯುತ್ತಿದೆ. ಸಿನಿಮಾದ ಪೋಸ್ಟರ್ ಕೂಡ ವೈರಲ್ ಆಗುತ್ತಿದೆ. ಈ ಟೀಸರ್ನಲ್ಲಿನ ಡೈಲಾಗ್ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ. ‘ಸುಂದರಂ ಮಾಸ್ಟರ್’ ರಿಲೀಸ್ ದಿನಾಂಕ ಇನ್ನಷ್ಟೇ ಅನೌನ್ಸ್ ಆಗಬೇಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.