‘ಬಜರಂಗಿ ಭಾಯಿಜಾನ್’ ಮುನ್ನಿಗೆ ಬಾಲಯ್ಯ ಜೊತೆ ನಟಿಸೋ ಅವಕಾಶ

Akhanda 2 Movie: ಬಜರಂಗಿ ಭಾಯಿಜಾನ್‌ನಲ್ಲಿ ಮುನ್ನಿ ಪಾತ್ರ ನಿರ್ವಹಿಸಿದ್ದ ಹರ್ಷಾಲಿ ಮಲ್ಹೋತ್ರಾ, ತೆಲುಗು ಸೂಪರ್‌ಸ್ಟಾರ್ ಬಾಲಕೃಷ್ಣ ಅವರೊಂದಿಗೆ "ಅಖಂಡ 2" ಚಿತ್ರದಲ್ಲಿ ನಟಿಸುತ್ತಿದ್ದಾರೆ. ಜನನಿ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಹರ್ಷಾಲಿಯ ಹೊಸ ಲುಕ್ ಅಭಿಮಾನಿಗಳನ್ನು ಆಕರ್ಷಿಸಿದೆ.

‘ಬಜರಂಗಿ ಭಾಯಿಜಾನ್’ ಮುನ್ನಿಗೆ ಬಾಲಯ್ಯ ಜೊತೆ ನಟಿಸೋ ಅವಕಾಶ
ಅಖಂಡ 2

Updated on: Jul 02, 2025 | 10:48 PM

ಸಲ್ಮಾನ್ ಖಾನ್ ನಟನೆಯ ‘ಬಜರಂಗಿ ಭಾಯಿಜಾನ್’ 2015ರಲ್ಲಿ ಬಿಡುಗಡೆ ಆಗಿ ಸೂಪರ್ ಹಿಟ್ ಆಯಿತು. ಈ ಸಿನಿಮಾದಲ್ಲಿ ಮುನ್ನಿ ಪಾತ್ರದಲ್ಲಿ ಹರ್ಷಾಲಿ ಮಲ್ಹೋತ್ರಾ ನಟಿಸಿದ್ದರು. ಈ ಸಿನಿಮಾ ಯಶಸ್ಸು ಕಾಣಲು ಅವರು ಕೂಡ ಕಾರಣೀಕರ್ತರೇ. ಆ ಸಿನಿಮಾ ಬಳಿಕ ಶಿಕ್ಷಣದ ಬಗ್ಗೆ ಅವರು ಹೆಚ್ಚು ಗಮನ ಹರಿಸಿದರು. ಈಗ ತೆಲುಗು ನಟ ಬಾಲಯ್ಯ ಜೊತೆ ತೆರೆ ಹಂಚಿಕೊಳ್ಳೋ ಅವಕಾಶವನ್ನು ಅವರು ಪಡೆದುಕೊಂಡಿದ್ದಾರೆ. ‘ಅಖಂಡ 2’ ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ. ಈ ಬಗ್ಗೆ ತಂಡದ ಕಡೆಯಿಂದ ಘೋಷಣೆ ಆಗಿದೆ.

ಬಾಲಯ್ಯ ಅವರು ದಕ್ಷಿಣ ಭಾರತದಲ್ಲಿ ತುಂಬಾನೇ ಫೇಮಸ್. ಮಾಸ್ ಡೈಲಾಗ್​, ವಿಭಿನ್ನ ಮ್ಯಾನರಿಸಂ ಮೂಲಕ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿದ್ದಾರೆ. ಅವರು ಅಭಿಮಾನಿಗಳನ್ನು ನಿರಾಸೆ ಮಾಡೋದೇ ಇಲ್ಲ. ಈ ಮೊದಲು ರಿಲೀಸ್ ಆಗಿ ಹಿಟ್ ಆದ ‘ಅಖಂಡ’ ಚಿತ್ರಕ್ಕೆ ಸೀಕ್ವೆಲ್ ರೆಡಿ ಆಗುತ್ತಿದೆ. ‘ಅಖಂಡ 2: ತಾಂಡವಂ’ ಎಂದು ಈ ಚಿತ್ರಕ್ಕೆ ಶೀರ್ಷಿಕೆ ಕೊಡಲಾಗಿದೆ. ಈ ಚಿತ್ರದ ಶೂಟ್ ಹೈದರಾಬಾದ್​ನಲ್ಲಿ ನಡೆಯುತ್ತಿದೆ. ಈ ಚಿತ್ರದಲ್ಲಿ ಹರ್ಷಾಲಿ ಕೂಡ ಇರಲಿದ್ದಾರೆ.

ಇದನ್ನೂ ಓದಿ
‘ನಾನು ಫಾತಿಮಾಗೆ ಲವರ್, ತಂದೆ ಎರಡೂ ಅಲ್ಲ’; ಆಮಿರ್ ಖಾನ್ ನೇರ ಮಾತು
ನೀಲಿ ತಾರೆಯ ಅನುಮಾನಾಸ್ಪದ ಸಾವು; ಶವ ಸಂಸ್ಕಾರಕ್ಕೆ ಹಣ ಕೇಳಿದ ಕುಟುಂಬ
ಲವ್ ಇನ್ ದಿ ಏರ್; ಮಗುವಿನಂತೆ ಯಶ್​​ನ ತಬ್ಬಿ ಕುಳಿತ ರಾಧಿಕಾ ಪಂಡಿತ್
‘ಸಿತಾರೆ ಜಮೀನ್ ಪರ್​​’: ಆಮಿರ್ ಖಾನ್ ರಿಮೇಕ್ ಮಾಡಿದ್ದೇಕೆ? ಉತ್ತರಿಸಿದ ನಟ

‘ಅಖಂಡ 2’ ಚಿತ್ರದಲ್ಲಿ ಹರ್ಷಾಲಿ ಪ್ರಮುಖ ಪಾತ್ರ ಒಂದನ್ನು ಮಾಡಲಿದ್ದಾರೆ. ಇದರ ಪೋಸ್ಟರ್​ನ ತಂಡ ಬಿಡುಗಡೆ ಮಾಡಿದೆ. ಜನನಿ ಹೆಸರಿನ ಪಾತ್ರವನ್ನು ಅವರು ಮಾಡುತ್ತಿದ್ದಾರೆ. ಅವರು ಪೋಸ್ಟರ್​ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮುನ್ನಿ ಆಗಿ ಕಾಣಿಸಿಕೊಂಡಿದ್ದಕ್ಕೂ, ಅವರ ಈಗಿನ ಲುಕ್​​ಗೂ ಅಜಗಜಾಂತರ ವ್ಯತ್ಯಾಸ ಇದೆ.


ಬೋಯಪತಿ ಶ್ರೀನು ಅವರು ‘ಅಖಂಡ 2’ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಪೂರ್ಣಗೊಂಡಿದ್ದು, ಕೆಲವು ದೃಶ್ಯ ಹಾಗೂ ಸಾಂಗ್ ಶೂಟಿಂಗ್ ಬಾಕಿ ಇದೆ. ಅದೇ ರೀತಿ ಸಿನಿಮಾದ ಗ್ರಾಫಿಕ್ಸ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಾ ಇವೆ.

ಇದನ್ನೂ ಓದಿ: ‘ಅಖಂಡ 2’ ಟೀಸರ್: ಊಹಿಸಿದ್ದಕ್ಕಿಂತಲೂ ಹೆಚ್ಚಾಯಿತು ಬಾಲಯ್ಯ ಮಾಸ್ ಅವತಾರ

‘ಅಖಂಡ 2’ ಟೀಸರ್ ಇತ್ತೀಚೆಗೆ ರಿಲೀಸ್ ಆಗಿದೆ. ಇದರಲ್ಲಿ ಬಾಲಯ್ಯ ಅವರು ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟೀಸರ್ ದಸರಾ ಪ್ರಯುಕ್ತ ಸೆಪ್ಟೆಂಬರ್ 25ರಂದು ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 10:47 pm, Wed, 2 July 25