ಸುದೀಪ್ ಗುಣಮುಖ ಆಗಿದ್ದರೂ ಯಾಕೆ ಬಿಗ್​ ಬಾಸ್​ ನಡೆಸಿಕೊಡುತ್ತಿಲ್ಲ? ಜನರ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಉತ್ತರ

|

Updated on: May 01, 2021 | 1:22 PM

ಸದ್ಯ ಎಲ್ಲೆಲ್ಲೂ ಕೊರೊನಾ ರಣಕೇಕೆ ಹಾಕುತ್ತಿದೆ. ಹಾಗಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಈ ಹಿನ್ನೆಲೆಯಲ್ಲಿ ಕಿಚ್ಚ ಸುದೀಪ್​ ಅವರು ತಮ್ಮ ಅನಿಸಿಕೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ಸುದೀಪ್ ಗುಣಮುಖ ಆಗಿದ್ದರೂ ಯಾಕೆ ಬಿಗ್​ ಬಾಸ್​ ನಡೆಸಿಕೊಡುತ್ತಿಲ್ಲ? ಜನರ ಪ್ರಶ್ನೆಗೆ ಇಲ್ಲಿದೆ ಕಿಚ್ಚನ ಉತ್ತರ
ಕಿಚ್ಚ ಸುದೀಪ್​
Follow us on

ಅನಾರೋಗ್ಯದ ಕಾರಣದಿಂದ ಕಿಚ್ಚ ಸುದೀಪ್​ ಅವರು ಕಳೆದ ಎರಡು ವಾರದಿಂದ ಬಿಗ್​ ಬಾಸ್​ ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಈಗ ಸುದೀಪ್​ ಚೇತರಿಸಿಕೊಂಡಿದ್ದಾರೆ. ಹಲವು ದಿನಗಳ ವಿಶ್ರಾಂತಿ ಮತ್ತು ಚಿಕಿತ್ಸೆ ಬಳಿಕ ಅವರು ಹೊಸ ಹುಮ್ಮಸ್ಸಿನೊಂದಿಗೆ ಸಜ್ಜಾಗಿದ್ದಾರೆ. ಆದರೂ ಕೂಡ ಬಿಗ್​ ಬಾಸ್​ ವೀಕೆಂಡ್​ ಎಪಿಸೋಡ್​ನಲ್ಲಿ ಸುದೀಪ್​ ಇರುವುದಿಲ್ಲ ಎಂದು ಕಲರ್ಸ್​ ಕನ್ನಡ ವಾಹಿನಿ ತಿಳಿಸಿದೆ. ಈ ಬಗ್ಗೆ ಸುದೀಪ್​ ಕೂಡ ಸ್ಪಷ್ಟನೆ ನೀಡಿದ್ದಾರೆ.

ಸದ್ಯ ಎಲ್ಲೆಲ್ಲೂ ಕೊರೊನಾ ರಣಕೇಕೆ ಹಾಕುತ್ತಿದೆ. ಹಾಗಾಗಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಸಾಲದು. ಈ ಹಿನ್ನೆಲೆಯಲ್ಲಿ ಬಿಗ್​ ಬಾಸ್​ ವೀಕೆಂಡ್​ ಎಪಿಸೋಡ್​ ನಡೆಸಿಕೊಡುವುದು ಸೂಕ್ತ ಅಲ್ಲ ಎಂದು ಸುದೀಪ್​ ನಿರ್ಧರಿಸಿದ್ದಾರೆ. ತಮ್ಮ ಅನಿಸಿಕೆಯನ್ನು ಅವರು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

‘ಕೆಲವೇ ಜನರು ಸೇರುತ್ತೇವೆ ಎಂದಾದರೂ ಸಹ ಪ್ರಸ್ತುತ ಪರಿಸ್ಥಿತಿಗೆ ಅದು ಸೂಕ್ತ ಅಲ್ಲ ಎಂಬ ಕಾರಣಕ್ಕೆ ಶೂಟಿಂಗ್​ ಕ್ಯಾನ್ಸಲ್​​ ಮಾಡಿದ್ದೇವೆ. ವೀಕ್ಷಕರಿಗೆ ನಿರಾಸೆ ಆಗಿದೆ ಎಂಬುದು ನನಗೆ ಅರ್ಥ ಆಗುತ್ತೆ. ಆದರೆ ಜಾರಿಯಾಗಿರುವ​ ನಿಯಮ ಪಾಲಿಸಬೇಕು ಎಂಬುದನ್ನು ನೀವೆಲ್ಲ ಒಪ್ಪಿಕೊಳ್ಳುತ್ತೀರಿ ಎಂಬ ಭರವಸೆ ನನಗಿದೆ. ಒಳ್ಳೆಯದಾಗಲಿದೆ ಎಂದು ನಂಬಿಕೆ ಇಡೋಣ. ಆದಷ್ಟು ಬೇಗ ವೀಕೆಂಡ್​ ಎಪಿಸೋಡ್​ಗಳೊಂದಿಗೆ ಮರಳುವ ನಿರೀಕ್ಷೆ ಇದೆ’ ಎಂದು ಸುದೀಪ್​ ಟ್ವೀಟ್​ ಮಾಡಿದ್ದಾರೆ.

ಸುದೀಪ್​ ಅನಾರೋಗ್ಯಕ್ಕೆ ಒಳಗಾದಾಗ ಅನೇಕರು ಅವರ ಹೆಸರಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದರು. ಚಿತ್ರರಂಗದ ಅನೇಕರು ಕಿಚ್ಚನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದರು. ಅವರೆಲ್ಲರಿಗೂ ಸುದೀಪ್​ ಧನ್ಯವಾದ ತಿಳಿಸಿದ್ದಾರೆ. ‘ಕರೆ ಮಾಡಿ ಕಾಳಜಿ ತೋರಿಸಿದ್ದಾಗಿ ರಿಷಬ್​ ಶೆಟ್ಟಿ, ಉಪೇಂದ್ರ, ರವಿಚಂದ್ರನ್​ ಮತ್ತು ಶಿವರಾಜ್​ಕುಮಾರ್​ ಅವರಿಗೆ ಧನ್ಯವಾದಗಳು. ಟ್ವೀಟ್​ ಮತ್ತು ಮೆಸೇಜ್​ ಮೂಲಕ ಪ್ರಾರ್ಥಿಸಿದ ಚಿತ್ರರಂಗದ ಸಹೋದ್ಯೋಗಿಗಳು ಮತ್ತು ಸ್ನೇಹಿತರಿಗೆ ಧನ್ಯವಾದಗಳು’ ಎಂದು ಕಿಚ್ಚ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Kichcha Sudeep: ಸುದೀಪ್​ ಗುಣಮುಖರಾದ ಬೆನ್ನಲ್ಲೇ ಕಹಿ ಸುದ್ದಿ; ಈ ವಾರವೂ ಬಿಗ್ ಬಾಸ್​ಗೆ ಕಿಚ್ಚ ಗೈರು

Kichcha Sudeep: ಕಿಚ್ಚ ಸುದೀಪ್ ಆರೋಗ್ಯಕ್ಕಾಗಿ ವಿಡಿಯೋ ಮಾಡಿ ಪ್ರಾರ್ಥಿಸಿದ ಜಪಾನ್​ ಮಹಿಳೆ