AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೂಪರ್ ಗರ್ಲ್’ ಸೋಲು ಬರೋಬ್ಬರಿ 1400 ಕೋಟಿಗೂ ಹೆಚ್ಚು ನಷ್ಟ

Hollywood movie: ಇತ್ತೀಚೆಗೆ ಬಿಡುಗಡೆ ಆದ ಹಾಲಿವುಡ್ ಹಾಲಿವುಡ್ ಹಾರರ್ ಸಿನಿಮಾ ‘ಒಬ್ಸೆಷನ್’ ಅಂತೂ ಕೇವಲ 10 ಸಾವಿರ ಡಾಲರ್​​​ನಲ್ಲಿ ನಿರ್ಮಾಣ ಮಾಡಿ ಸಾವಿರಾರು ಕೋಟಿ ಡಾಲರ್ ಗಳಿಕೆ ಮಾಡಿತು. ಆದರೆ ಇತ್ತೀಚೆಗೆ ಬಿಡುಗಡೆ ಆದ ಹಾಲಿವುಡ್ ಸೂಪರ್ ಹೀರೋ ಸಿನಿಮಾ ಒಂದು ಬಾಕ್ಸ್ ಆಫೀಸ್​​ನಲ್ಲಿ ತೀರಾ ಹೀನಾಯವಾಗಿ ಸೋತಿದೆ. ಆ ಮೂಲಕ ಕೇವಲ ಸೂಪರ್ ಹೀರೋ ಸಿನಿಮಾ ಆದ ಮಾತ್ರಕ್ಕೆ ಸಿನಿಮಾ ಗೆಲ್ಲುವುದಿಲ್ಲ ಎಂಬುದನ್ನು ಹಾಲಿವುಡ್ ಮಂದಿಗೆ ಪ್ರೇಕ್ಷಕರು ನೆನಪು ಮಾಡಿಸಿದ್ದಾರೆ.

‘ಸೂಪರ್ ಗರ್ಲ್’ ಸೋಲು ಬರೋಬ್ಬರಿ 1400 ಕೋಟಿಗೂ ಹೆಚ್ಚು ನಷ್ಟ
Super Girl
ಮಂಜುನಾಥ ಸಿ.
|

Updated on:Jul 07, 2026 | 3:09 PM

Share

ಹಾಲಿವುಡ್ (Hollywood) ಸಿನಿಮಾಗಳು ಇತ್ತೀಚೆಗೆ ಭರ್ಜರಿ ಗಳಿಕೆ ಮಾಡುತ್ತಿವೆ. ಬಿಡುಗಡೆ ಆಗುವ ಪ್ರತಿ ದೊಡ್ಡ ಸಿನಿಮಾಗಳು ಹಳೆಯ ದಾಖಲೆಗಳನ್ನು ಮುರಿಯುತ್ತಿವೆ. ಸೂಪರ್ ಹೀರೋ ಸಿನಿಮಾಗಳಂತೂ ಬಂದಿದ್ದೆಲ್ಲ ಸೂಪರ್ ಹಿಟ್ ಆಗುತ್ತಿವೆ. ಇತ್ತೀಚೆಗೆ ಬಿಡುಗಡೆ ಆದ ಹಾಲಿವುಡ್ ಹಾಲಿವುಡ್ ಹಾರರ್ ಸಿನಿಮಾ ‘ಒಬ್ಸೆಷನ್’ ಅಂತೂ ಕೇವಲ 10 ಸಾವಿರ ಡಾಲರ್​​​ನಲ್ಲಿ ನಿರ್ಮಾಣ ಮಾಡಿ ಸಾವಿರಾರು ಕೋಟಿ ಡಾಲರ್ ಗಳಿಕೆ ಮಾಡಿತು. ಆದರೆ ಇತ್ತೀಚೆಗೆ ಬಿಡುಗಡೆ ಆದ ಹಾಲಿವುಡ್ ಸೂಪರ್ ಹೀರೋ ಸಿನಿಮಾ ಒಂದು ಬಾಕ್ಸ್ ಆಫೀಸ್​​ನಲ್ಲಿ ತೀರಾ ಹೀನಾಯವಾಗಿ ಸೋತಿದೆ. ಆ ಮೂಲಕ ಕೇವಲ ಸೂಪರ್ ಹೀರೋ ಸಿನಿಮಾ ಆದ ಮಾತ್ರಕ್ಕೆ ಸಿನಿಮಾ ಗೆಲ್ಲುವುದಿಲ್ಲ ಎಂಬುದನ್ನು ಹಾಲಿವುಡ್ ಮಂದಿಗೆ ಪ್ರೇಕ್ಷಕರು ನೆನಪು ಮಾಡಿಸಿದ್ದಾರೆ.

‘ಸೂಪರ್ ಮ್ಯಾನ್’ ಸಿನಿಮಾಗಳು ಹಾಲಿವುಡ್​​ನ ಅತಿ ದೊಡ್ಡ ನಿರ್ಮಾಣ ಸಂಸ್ಥೆಗಲ್ಲಿ ಒಂದಾದ ಡಿಸಿಯ ಪ್ರಮುಖ ಸಿನಿಮಾ ಆಗಿತ್ತು. ಅದೇ ಸೂಪರ್ ಮ್ಯಾನ್ ಅನ್ನು ಇಟ್ಟುಕೊಂಡು ಹಲವು ಸಿನಿಮಾಗಳನ್ನು ಡಿಸಿ ನಿರ್ಮಾಣ ಮಾಡಿದೆ. ‘ಸೂಪರ್ ಡಾಗ್’ ಅನ್ನು ಸಹ ಡಿಸಿ ನಿರ್ಮಿಸಿತ್ತು. ಇದೀಗ ‘ಸೂಪರ್ ಗರ್ಲ್’ ಎಂಬ ಹೊಸ ಸಿನಿಮಾವನ್ನು ಡಿಸಿ ನಿರ್ಮಾಣ ಮಾಡಿ ಇತ್ತೀಚೆಗಷ್ಟೆ ಬಿಡುಗಡೆ ಮಾಡಿತ್ತು. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಹೀನಾಯವಾಗಿ ಮಕಾಡೆ ಮಲಗಿದೆ. ಈ ಸಿನಿಮಾ ಒಂದರಿಂದಲೇ ಸುಮಾರು 1400 ಕೋಟಿಗೂ ಹೆಚ್ಚು ನಷ್ಟ ನಿರ್ಮಾಣ ಸಂಸ್ಥೆಗೆ ಆಗಿದೆ ಎನ್ನಲಾಗುತ್ತಿದೆ.

ಸೂಪರ್ ಗರ್ಲ್ ಸಿನಿಮಾಕ್ಕೆ ಪ್ರಚಾರವನ್ನೂ ಸೇರಿಸಿ ಸುಮಾರು 2700 ಕೋಟಿಗಳಷ್ಟು ಬಂಡವಾಳ ಹೂಡಲಾಗಿತ್ತು. ಸಿನಿಮಾ ಜೂನ್ 26ಕ್ಕೆ ಬಿಡುಗಡೆ ಆಗಿತ್ತು. ಆದರೆ ಸಿನಿಮಾದ ಕತೆ, ನಿರೂಪಣೆ ಬಹಳ ಸಡಿಲವಾಗಿದ್ದ ಕಾರಣ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನಿಲ್ಲಲಿಲ್ಲ. ಸಿನಿಮಾ ದೊಡ್ಡ ಫ್ಲಾಪ್ ಆಗಿದೆ. ಸಿನಿಮಾ ಈ ವರೆಗೆ ಸುಮಾರು 900 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಒಟ್ಟು ಬಜೆಟ್​​ನ 35% ಮಾತ್ರ ಗಳಿಕೆ ಆಗಿದ್ದು, ಸಿನಿಮಾಕ್ಕೆ ಪ್ರೇಕ್ಷಕರು ಬೆನ್ನು ತೋರಿಸಿದ್ದಾರೆ.

ಇದನ್ನೂ ಓದಿ:ವಿವಾದಕ್ಕೆ ಸಿಲುಕಿದ ಕಂಗನಾ ರನೌತ್ ಸಿನಿಮಾ, 250 ಕೋಟಿ ಮೊಕದ್ದಮೆ ದಾಖಲು

ಸೂಪರ್ ಗರ್ಲ್ ಪಾತ್ರ ಡಿಸಿ ಯದ್ದಾಗಿದೆ. 1984ರಲ್ಲಿ ಮೊದಲ ಬಾರಿಗೆ ‘ಸೂಪರ್ ಗರ್ಲ್’ ಸಿನಿಮಾ ಬಿಡುಗಡೆ ಆಗಿತ್ತು. ಆ ಸಿನಿಮಾ ಸಹ ದೊಡ್ಡ ಗಳಿಕೆ ಮಾಡಿರಲಿಲ್ಲ. ಬಳಿಕ 2023 ರ ‘ದಿ ಪ್ಲ್ಯಾಷ್’ ಸಿನಿಮಾನಲ್ಲಿ ಸೂಪರ್ ಗರ್ಲ್ ಪಾತ್ರವನ್ನು ತೋರಿಸಲಾಗಿತ್ತು. ಇತ್ತೀಚೆಗೆ ಬಿಡುಗಡೆ ಆದ ‘ಸೂಪರ್ ಮ್ಯಾನ್’ ಸಿನಿಮಾನಲ್ಲಿಯೂ ಸಹ ಸೂಪರ್ ಗರ್ಲ್​​ಗೆ ಸಣ್ಣ ಪಾತ್ರವಿತ್ತು. ಇದೀಗ ‘ಸೂಪರ್ ಗರ್ಲ್​​’ ಮೇಲೆ ಪೂರ್ಣ ಪ್ರಮಾಣದ ಸಿನಿಮಾ ಮಾಡಲಾಗಿತ್ತು. ಆದರೆ ಸಿನಿಮಾ ಹೀನಾಯ ಸೋಲು ಕಂಡಿದೆ. ಈಗ ಬಿಡುಗಡೆ ಆಗಿರುವ ಸಿನಿಮಾನಲ್ಲಿ ಮಿಲ್ಲಿ ಅಕ್ಲಾಕ್ ‘ಸೂಪರ್ ಗರ್ಲ್’ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Tue, 7 July 26

Follow Us
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಸರ್ಕಾರದ ಜೊತೆ ಇರುತ್ತೇವೆ: ಡಿಕೆಶಿಗೆ ತೇಜಸ್ವಿ ಸೂರ್ಯ ಭರವಸೆ
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪಶುವೈದ್ಯ ನೇಮಕಾತಿ ಹಗರಣ: CBI ತನಿಖೆಗೆ ಒಪ್ಪಿಸಿ ಎಂದ ಸುರೇಶ್ ಕುಮಾರ್
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಪ್ರತಿಭಟನಾಕಾರರ ಮೇಲಿನ ಲಾಠಿಚಾರ್ಜ್​ಗೆ ಸದನದಲ್ಲಿ ಖರ್ಗೆ ಖಂಡನೆ
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಡಿಕೆಶಿಗೆ ಹೈ ಸೆಕ್ಯೂರಿಟಿ:ದೆಹಲಿಯಲ್ಲಿ ವಿಶೇಷ ಭದ್ರತೆ ಇದೇ ಮೊದಲು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಕುಡುಕ ಎಂದ ಕಾಂಗ್ರೆಸ್​​​​​ ವಿರುದ್ಧ ಸಿಟಿ ರವಿ ಕೆಂಡಾಮಂಡಲ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಪಶುವೈದ್ಯ ನೇಮಕಾತಿ ಹಗರಣ: ಕೆಪಿಎಸ್‌ಸಿ ಕಚೇರಿಗೆ ಬಿಜೆಪಿ ನಿಯೋಗ ಭೇಟಿ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ
ಬೆಳಗಾವಿ ಕಾಂಗ್ರೆಸ್ ಕಚೇರಿಯಲ್ಲಿ ಹೈಡ್ರಾಮಾ
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ರಾತ್ರೋರಾತ್ರಿ ಮೆಟ್ರೋ ಕ್ರೇನ್ ಏರಿ ಕೆಳಗಿಳಿಯಲಾಗದೆ ಒದ್ದಾಡಿದ ವ್ಯಕ್ತಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಪಂಜಾಬ್‌ನಲ್ಲಿ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ