Emmy Awards: 15ನೇ ವಯಸ್ಸಿಗೆ ‘ಎಮಿ ಅವಾರ್ಡ್ಸ್’ ಗೆದ್ದು ದಾಖಲೆ; ಇಲ್ಲಿದೆ ಗೆದ್ದವರ ಸಂಪೂರ್ಣ ಪಟ್ಟಿ

Emmy Awards Winner Full List: 77ನೇ ವಾರ್ಷಿಕ ಪ್ರೈಮ್‌ಟೈಮ್ ಎಮ್ಮಿ ಅವಾರ್ಡ್ಸ್ ಸಮಾರಂಭದಲ್ಲಿ 15 ವರ್ಷದ ಓವನ್ ಕೂಪರ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ಗೆದ್ದು ದಾಖಲೆ ಬರೆದಿದ್ದಾರೆ. 'ದಿ ಪಿಟ್' ಅತ್ಯುತ್ತಮ ಡ್ರಾಮಾ ಸೀರಿಸ್ ಆಗಿ ಆಯ್ಕೆಯಾಗಿದೆ. 'ದಿ ಸ್ಟುಡಿಯೋ' ಅತ್ಯುತ್ತಮ ಕಾಮಿಡಿ ಸೀರಿಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

Emmy Awards: 15ನೇ ವಯಸ್ಸಿಗೆ ‘ಎಮಿ ಅವಾರ್ಡ್ಸ್’ ಗೆದ್ದು ದಾಖಲೆ; ಇಲ್ಲಿದೆ ಗೆದ್ದವರ ಸಂಪೂರ್ಣ ಪಟ್ಟಿ
ಎಮಿ ಅವಾರ್ಡ್

Updated on: Sep 15, 2025 | 10:52 AM

ಅಮೆರಿಕದ ಕಿರುತೆರೆಯ ಪ್ರತಿಷ್ಠಿತ ‘ಎಮಿ ಅವಾರ್ಡ್ಸ್​’​ (77th Primetime Emmy Awards) ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. 77ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆದರು. ‘ಇಂಟರ್ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಆ್ಯಂಡ್ ಸೈನ್ಸಸ್’ ಅನ್ನೋದು ‘ಎಮಿ’ಯ ವಿಸ್ತ್ರತ ರೂಪ. ಲಾಸ್​ ಏಂಜಲಿಸ್​ನಲ್ಲಿ ಈ ಸಮಾರಂಭ ನಡೆದಿದ್ದು ರೆಡ್​ ಕಾರ್ಪೆಟ್​ನಲ್ಲಿ ಅನೇಕ ತಾರೆಯರು ಹೆಜ್ಜೆ ಹಾಕಿದ್ದಾರೆ. ಪ್ರಶಸ್ತಿ ಬಾಚಿಕೊಂಡ ಸೆಲೆಬ್ರಿಟಿಗಳಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಕೇವಲ 15 ವರ್ಷದ ಬಾಲಕನಿಗೂ ಪ್ರಶಸ್ತಿ ಸಿಕ್ಕಿದೆ ಅನ್ನೋದು ವಿಶೇಷ. ಅವರಿಂದ ದಾಖಲೆ ಸೃಷ್ಟಿ ಆಗಿದೆ.

15 ವರ್ಷದ ಓವನ್ ಕೂಪರ್ ಅವರು ‘ಅಡೊಲೆಸೆನ್ಸ್’ ಹೆಸರಿನ ನೆಟ್​ಫ್ಲಿಕ್ಸ್ ಸರಣಿಯಲ್ಲಿ ಕಾಣಿಸಿಕೊಂಡರು. ಅವರಿಗೆ ‘ಅತ್ಯುತ್ತಮ ಪೋಷಕ’ ನಟ ಅವಾರ್ಡ್ ದೊರೆತಿದೆ. 1973ರಲ್ಲಿ 16 ವರ್ಷ ಸ್ಕಾಟ್ ಜಾಕೋಬಿ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು. ಈ ದಾಖಲೆಯನ್ನು ಓವನ್ ಕೂಪರ್ ಮುರಿದಿದ್ದಾರೆ. ಅವಾರ್ಡ್ ಗೆದ್ದ ಬಳಿಕ ಅವರು ಖುಷಿ ಹೊರಹಾಕಿದ್ದಾರೆ.

ಇದನ್ನೂ ಓದಿ
ರೇಣುಕಾಸ್ವಾಮಿ ಪತ್ನಿ ಸಹನಾಗೆ ಸಿಗಲಿದೆ ಸರ್ಕಾರಿ ಕೆಲಸ; ಶಾಸಕನ ಭರವಸೆ
ಕಿರುತೆರೆ ನಟಿಯ ಪತಿ​ಗೆ ಕಾರು ಅಪಘಾತ; ಪ್ರಾಣಾಪಾಯದಿಂದ ಜಸ್ಟ್ ಮಿಸ್
ಶರಣ್-ತರುಣ್ ಸುಧೀರ್ ಗೆಳೆತನ ಎಂಥದ್ದು? ಯಾರೂ ಊಹಿಸಲೂ ಸಾಧ್ಯವಿಲ್ಲ
ರಿಯಾಲಿಟಿ ಶೋಗೆ ಬರಲ್ಲ, ಬರಲ್ಲ ಅಂತ ಬಂದೇ ಬಿಟ್ರು ನಟಿ ಸುಧಾರಾಣಿ

‘ಅತ್ಯುತ್ತಮ ಡ್ರಾಮಾ ಸೀರಿಸ್’ ವಿಭಾಗದಲ್ಲಿ ‘ದಿ ಪಿಟ್’ ವಿನ್ನರ್ ಆಗಿ ಹೊರ ಹೊಮ್ಮಿದೆ. ಅತ್ಯುತ್ತಮ ಕಾಮಿಡಿ ಸರಣಿ ವಿಭಾಗದಲ್ಲಿ ‘ದಿ ಸ್ಟುಡಿಯೋ’ ಗೆಲುವಿನ ನಗೆ ಬೀರಿದೆ. ‘ಅತ್ಯತ್ತಮ ಸಂಕಲನ ಸರಣಿ’ ವಿಭಾಗದಲ್ಲಿ ‘ಅಡೊಲಸೆನ್ಸ್’ ಸರಣಿಯ ಪ್ರಶಸ್ತಿ ಬಾಚಿಕೊಂಡಿದೆ.

ಇದನ್ನೂ ಓದಿ: ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​: ಪ್ರಮುಖ ಪ್ರಶಸ್ತಿ ಪಡೆದವರು ಯಾರು? ಇಲ್ಲಿದೆ ವಿವರ..

‘ದಿ ಪಿಟ್’ ಸರಣಿಯ ನಟನೆಗೆ ನೋವಾ ವೈಲಿ ಅವರು ಅತ್ಯುತ್ತಮ ನಟ ಪ್ರಶಸ್ತಿ ಪಡೆದರು. ‘ಸೆವೆರೆನ್ಸ್’ ಸರಣಿಯ ನಟನೆಗೆ ಬ್ರಿಟ್ ಲೋವರ್ ಅವರಿಗೆ ಪ್ತಶಸ್ತಿ ದೊರೆತಿದೆ. ‘ಹಾಸ್ಯ ಸರಣಿಯ ಅತ್ಯುತ್ತಮ ನಟ ಅವಾರ್ಡ್’ ಸೆತ್ ರೋಗನ್​ಗೆ ಸಿಕ್ಕಿದೆ. ‘ದಿ ಸ್ಟುಡಿಯೋ’ ನಿರ್ದೇಶನಕ್ಕಾಗಿ ‘ಅತ್ಯುತ್ತಮ ಹಾಸ್ಯ ಸರಣಿ ನಿರ್ದೇಶಕ’ ಅವಾರ್ಡ್ ಸೆತ್ ರೋಗನ್ ಅವರಿಗೆ ದೊರೆತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.