AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​: ಪ್ರಮುಖ ಪ್ರಶಸ್ತಿ ಪಡೆದವರು ಯಾರು? ಇಲ್ಲಿದೆ ವಿವರ..

ಕಲರ್​ಫುಲ್​ ವೇದಿಕೆಯಲ್ಲಿ ‘76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​’ ಸಮಾರಂಭ ನಡೆದಿದೆ. ‘ಶೋಗನ್’ ಹಾಗೂ ‘ದಿ ಬೇರ್’ ಸಿರೀಸ್​ಗಳಿಗೆ ಹಲವು ಪ್ರಶಸ್ತಿಗಳು ಸಿಕ್ಕಿವೆ. ಹಿರೋಯುಕಿ ಸನಾಡ, ಆ್ಯನಾ ಸವಾಯಿ, ಜೆರೆಮಿ ಅಲೆನ್ ವೈಟ್​, ಜೀನ್ ಸ್ಮಾರ್ಟ್​, ಲೈಝಾ ಕೊಲೊನ್ ಝಯಾಸ್​, ಬಿಲ್ಲಿ ಕ್ರಡಪ್, ಎಲಿಝಬೆತ್ ಡೆಮಿಕಿ ಮುಂತಾದವರು ಪ್ರಶಸ್ತಿ ಪಡೆದು ಮಿಂಚಿದ್ದಾರೆ.

76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​: ಪ್ರಮುಖ ಪ್ರಶಸ್ತಿ ಪಡೆದವರು ಯಾರು? ಇಲ್ಲಿದೆ ವಿವರ..
ಎಮಿ ಅವಾರ್ಡ್ಸ್​ 2024
ಮದನ್​ ಕುಮಾರ್​
|

Updated on: Sep 16, 2024 | 10:58 AM

Share

ಅಮೆರಿಕದ ಕಿರುತೆರೆಯ ಪ್ರತಿಷ್ಠಿತ ‘ಎಮಿ ಅವಾರ್ಡ್ಸ್​’​ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. 76ನೇ ವಾರ್ಷಿಕ ಪ್ರೈಮ್ ಟೈಮ್​ ಎಮಿ ಅವಾರ್ಡ್​ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿ ಆಗಿದ್ದಾರೆ. ‘ಶೋಗನ್’ ಮತ್ತು ‘ದಿ ಬೇರ್’ ಸೀರಿಸ್​ಗಳು ಪ್ರಮುಖ ಪ್ರಶಸ್ತಿಗಳನ್ನು ಬಾಚಿಕೊಂಡಿವೆ. ಲಾಸ್​ ಏಂಜಲಿಸ್​ನಲ್ಲಿ ಈ ಸಮಾರಂಭ ನಡೆದಿದ್ದು ರೆಡ್​ ಕಾರ್ಪೆಟ್​ನಲ್ಲಿ ಅನೇಕ ತಾರೆಯರು ಹೆಜ್ಜೆ ಹಾಕಿದ್ದಾರೆ. ಪ್ರಶಸ್ತಿ ಬಾಚಿಕೊಂಡ ಸೆಲೆಬ್ರಿಟಿಗಳಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಯಾರಿಗೆಲ್ಲ ಈ ಬಾರಿ ​‘ಎಮಿ ಅವಾರ್ಡ್ಸ್​’ ಸಿಕ್ಕಿದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ..

25 ವಿಭಾಗಗಳಲ್ಲಿ ‘ಶೋಗನ್’ ನಾಮಿನೇಟ್​ ಆಗಿತ್ತು. ‘ದಿ ಬೇರ್​’ 23 ವಿಭಾಗಗಳಲ್ಲಿ ನಾಮಿನೇಟ್​ ಆಗಿತ್ತು. ಅತ್ಯುತ್ತಮ ಡ್ರಾಮಾ ಸೀರಿಸ್​ ಪ್ರಶಸ್ತಿಯನ್ನು ಶೋಗನ್​ ಪಡೆದುಕೊಂಡಿದೆ. ‘ಹ್ಯಾಕ್ಸ್​’ಗೆ ಅತ್ಯುತ್ತಮ ಕಾಮಿಡಿ ಸೀರಿಸ್​ ಪ್ರಶಸ್ತಿ ಸಿಕ್ಕಿದೆ. ಡ್ರಾಮಾ ಸೀರಿಸ್​ನ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಿರೋಯುಕಿ ಸನಾಡ (ಶೋಗನ್) ಪಡೆದುಕೊಂಡಿದ್ದಾರೆ. ಡ್ರಾಮಾ ಸೀರಿಸ್ ವಿಭಾಗದಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯು ಆ್ಯನಾ ಸವಾಯಿ (ಶೋಗನ್) ಅವರ ಪಾಲಾಗಿದೆ.

ಕಾಮಿಡಿ ಸಿರೀಸ್​ ವಿಭಾಗದಲ್ಲಿ ‘ದಿ ಬೇರ್​’ನಲ್ಲಿನ ಅಭಿನಯಕ್ಕಾಗಿ ಜೆರೆಮಿ ಅಲೆನ್ ವೈಟ್​ ಅವರು ಅತ್ಯುತ್ತ,ಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ‘ಹ್ಯಾಕ್ಸ್’ ನಟಿ ಜೀನ್ ಸ್ಮಾರ್ಟ್​ ಅವರಿಗೆ ಕಾಮಿಡಿ ಸಿರೀಸ್​ ವಿಭಾಗದ ಅತ್ಯುತ್ತಮ ನಟಿ ಅವಾರ್ಡ್​​ ನೀಡಲಾಗಿದೆ. ಡ್ರಾಮಾ ಸೀರಿಸ್​ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯು ‘ದಿ ಮಾರ್ನಿಂಗ್​ ಶೋ’ ಸಿರೀಸ್​ಗಾಗಿ ಬಿಲ್ಲಿ ಕ್ರಡಪ್ ಅವರಿಗೆ ಸಿಕ್ಕಿದೆ. ಇದೇ ವಿಭಾಗದಲ್ಲಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ‘ದಿ ಕ್ರೌನ್​’ ಸಿರೀಸ್​ನ ಎಲಿಝಬೆತ್ ಡೆಮಿಕಿ ಅವರು ಪಡೆದುಕೊಂಡಿದ್ದಾರೆ.

ನಟ ಎಬಾನ್ ಮಾಸ್​ ಬ್ಯಾಕಾರ್ಕ್​ ಅವರು ‘ದಿ ಬೇರ್​’ನಲ್ಲಿನ ಅಭಿನಯಕ್ಕಾಗಿ ಕಾಮಿಡಿ ಸಿರೀಸ್​ನ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದೇ ಸಿರೀಸ್​ನಲ್ಲಿ ಅಭಿನಯಿಸಿದ ಲೈಝಾ ಕೊಲೊನ್ ಝಯಾಸ್​ ಅವರು ಈ ವಿಭಾಗದ ಅತ್ಯುತ್ತಮ ಫೋಷಕ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಲಿಮಿಡೆಟ್​ ಸಿರೀಸ್​ ವಿಭಾಗದಲ್ಲಿ ‘ಬೇಬಿ ರೇಂಡರ್​’ ನಟ ರಿಚರ್ಡ್​ ಗ್ಯಾಡ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ಇದೇ ವಿಭಾಗದಲ್ಲಿ ‘ಟ್ರೂ ಡಿಟೆಕ್ಟಿವ್​: ನೈಟ್​ ಕಂಟ್ರಿ’ ಸಿರೀಸ್​ನ ನಟಿ ಜೂಡಿ ಫಾಸ್ಟರ್​ ಅವರು ‘ಅತ್ಯುತ್ತಮ ನಟಿ’ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಸೈಮಾನಲ್ಲಿ ಪ್ರಶಸ್ತಿಗಳ ಬಾಚಿದ ‘ಸಪ್ತ ಸಾಗರದಾಚೆ ಎಲ್ಲೋ’, ಇಲ್ಲಿದೆ ಪಟ್ಟಿ

ಲಮೋರ್ನ್ ಮೋರಿಸ್​ ಅವರು ‘ಫಾರ್ಗೋ’ ಸಿರೀಸ್​ನಲ್ಲಿನ ನಟನೆಗಾಗಿ ಮಿಲಿಡೆಟ್​ ಸಿರೀಸ್​ ವಿಭಾಗದ ಅತ್ಯುತ್ತಮ ಪೋಷಕ ನಟ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ವಿಭಾಗದಲ್ಲಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯು ‘ಬೇಬಿ ರೇಂಡರ್​’ ನಟಿ ಜೆಸ್ಸಿಕಾ ಗನ್ನಿಂಗ್​ ಅವರ ಪಾಲಾಗಿದೆ. ‘ಮಿಸ್ಟರ್​ ಮಾಂಕ್ಸ್​ ಲಾಸ್ಟ್​ ಕೇಸ್​’ಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಸಿಕ್ಕಿದೆ. ‘ದ ಡೈಲಿ ಶೋ’ ಅತ್ಯುತ್ತಮ ಟಾಕ್​ ಸಿರೀಸ್​ ಪ್ರಶಸ್ತಿ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ