ಬ್ರಿಟಿಷ್ ನಟಿ ಆ್ಯಮಿ ಜಾಕ್ಸನ್ (Amy Jackson) ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೊಂದಿದ್ದಾರೆ. ಕನ್ನಡದ ‘ದಿ ವಿಲನ್’ ಸಿನಿಮಾದಲ್ಲಿ ಸುದೀಪ್ಗೆ (Kichcha Sudeep) ಜತೆಯಾಗಿ ಅವರು ಕಾಣಿಸಿಕೊಂಡಿದ್ದರು. 8 ವರ್ಷಗಳ ಕಾಲ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದ ಅವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದರು. ಇತ್ತೀಚೆಗೆ ಅವರು ವೈಯಕ್ತಿಕ ವಿಚಾರದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಬ್ರಿಟಿಷ್ ಉದ್ಯಮಿ ಜಾರ್ಜ್ ಪನಯೋಟು (George Panayiotou) ಜತೆ ಆ್ಯಮಿ ರಿಲೇಶನ್ಶಿಪ್ನಲ್ಲಿದ್ದರು. ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು. ಇವರಿಗೆ ಮಗು ಕೂಡ ಜನಿಸಿತ್ತು. ಆದರೆ, ಕಳೆದ ವರ್ಷ ಇಬ್ಬರೂ ಬೇರೆ ಆಗಿದ್ದಾರೆ ಎಂದು ವರದಿ ಆಗಿತ್ತು. ಈಗ ಆ್ಯಮಿ ಮತ್ತೆ ಡೇಟಿಂಗ್ ಶುರು ಹಚ್ಚಿಕೊಂಡ ಬಗ್ಗೆ ವರದಿ ಆಗಿದೆ.
ಜಾರ್ಜ್ ಪನಯೋಟು ಜತೆ ಆ್ಯಮಿ ರಿಲೇಶನ್ಶಿಪ್ನಲ್ಲಿದ್ದರು. ಗರ್ಭಿಣಿ ಆದ ನಂತರದಲ್ಲಿ ಇಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡರು. 2019ರಲ್ಲಿ ಆ್ಯಮಿಗೆ ಗಂಡು ಮಗು ಜನಿಸಿತು. ಇದಾದ ನಂತರದಲ್ಲಿ ಆ್ಯಮಿ ಮಗುವಿನ ಜತೆ ಇರುವ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡಿದ್ದರು. 2021ರಲ್ಲಿ ಆ್ಯಮಿ ಹಾಗೂ ಜಾರ್ಜ್ ಪನಯೋಟು ಬೇರೆ ಆಗಿದ್ದಾರೆ ಎನ್ನಲಾಗಿದೆ. ಜಾರ್ಜ್ ಜತೆ ಇರುವ ಸಾಕಷ್ಟು ಫೋಟೋಗಳು ಆ್ಯಮಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರಾರಾಜಿಸಿತ್ತು. ಕಳೆದ ವರ್ಷ ಈ ಫೋಟೋಗಳನ್ನು ಅವರು ಡಿಲೀಟ್ ಮಾಡಿದ್ದರು. ಇದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿತ್ತು. ಆದರೆ, ಆ್ಯಮಿ ಈ ವಿಚಾರದಲ್ಲಿ ಮೌನ ತಾಳಿದ್ದಾರೆ. ಈಗ ಅವರು ಬ್ರಿಟಿಷ್ ನಟನ ಜತೆ ಸುತ್ತಾಟ ನಡೆಸುತ್ತಿರುವ ಬಗ್ಗೆ ವರದಿ ಆಗಿದೆ.
ಬ್ರಿಟನ್ ನಟ ಎಡ್ ವೆಸ್ಟ್ವಿಕ್ ಜತೆ ಆ್ಯಮಿ ಕಳೆದ ಎರಡು ತಿಂಗಳಿಂದ ಸುತ್ತಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. ‘ಗಾಸಿಪ್ ಗರ್ಲ್ಸ್’ ಸೀರಿಸ್ನಲ್ಲಿ ನಟಿಸಿ ಎಡ್ ಫೇಮಸ್ ಆಗಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಸೌದಿ ಅರೇಬಿಯಾದಲ್ಲಿ ನಡೆದ ‘ರೆಡ್ ಸೀ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಆ್ಯಮಿ ಹಾಗೂ ಎಡ್ ಭೇಟಿ ಆದರು. ಈ ವೇಳೆ ಇಬ್ಬರಿಗೂ ಪರಿಚಯ ಬೆಳೆದಿದ್ದು, ಇಬ್ಬರೂ ಡೇಟಿಂಗ್ ಶುರು ಹಚ್ಚಿಕೊಂಡಿದ್ದಾರೆ ಎಂದು ‘ಸನ್ ಆನ್ ಸಂಡೇ’ ವರದಿ ಮಾಡಿದೆ. ಮಗುವಿನ ಜವಾಬ್ದಾರಿಯನ್ನು ಆ್ಯಮಿ ಅವರೇ ನೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
2010ರಲ್ಲಿ ತೆರೆಗೆ ಬಂದ ತಮಿಳಿನ ‘ಮದ್ರಾಸಪಟ್ಟಿಣಂ’ ಸಿನಿಮಾ ಮೂಲಕ ಆ್ಯಮಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಐ’, ‘ಥೆರಿ’ ಅಂಥ ಹಿಟ್ ಚಿತ್ರಗಳಲ್ಲಿ ಆ್ಯಮಿ ನಟಿಸಿದರು. 2018ರಲ್ಲಿ ತೆರೆಗೆ ಬಂದ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾಗೂ ಆ್ಯಮಿ ನಾಯಕಿಯಾದರು. ಅದೇ ವರ್ಷ ತೆರೆಗೆ ಬಂದ ‘2.0’ ಅವರ ಕೊನೆಯ ಚಿತ್ರ. ಇದಾದ ನಂತರದಲ್ಲಿ ಅವರು ಸಂಸಾರದಲ್ಲಿ ಬ್ಯುಸಿಯಾದರು. ಮತ್ತೆ ಚಿತ್ರರಂಗಕ್ಕೆ ಬರುವ ಇಚ್ಛೆಯನ್ನು ಇತ್ತೀಚೆಗೆ ಅವರು ವ್ಯಕ್ತಪಡಿಸಿದ್ದರು. ಸದ್ಯ, ಆ್ಯಮಿ ಬ್ರಿಟನ್ನಲ್ಲಿಯೇ ಸೆಟಲ್ ಆಗಿದ್ದಾರೆ.
ಇದನ್ನೂ ಓದಿ: ಒಳ ಉಡುಪು ಧರಿಸದೆ ಬೀದಿಗೆ ಬಂದ ಮಾಜಿ ಭುವನ ಸುಂದರಿ; ಮುಂದೇನಾಯ್ತು?
‘ದಿ ವಿಲನ್’ ನಟಿಯ ಹಾಟ್ ಅವತಾರ; ವೈರಲ್ ಆಗಿವೆ ಆ್ಯಮಿ ಜಾಕ್ಸನ್ ಫೋಟೋಗಳು
Published On - 1:40 pm, Mon, 14 February 22