‘ಆಪನ್​ಹೈಮರ್​’ ಯಶಸ್ಸಿನ ಬಳಿಕ ಹಾರರ್​ ಸಿನಿಮಾ ಮಾಡ್ತಾರೆ ಕ್ರಿಸ್ಟೋಫರ್​ ನೋಲನ್​​

2023ರಲ್ಲಿ ತೆರೆಕಂಡ ‘ಆಪನ್​ಹೈಮರ್​’ ಸಿನಿಮಾದ ಯಶಸ್ಸಿನಿಂದ ನಿರ್ದೇಶಕ ಕ್ರಿಸ್ಟೋಫರ್​ ನೋಲನ್​ ಅವರ ಖ್ಯಾತಿ ಹೆಚ್ಚಾಗಿದೆ. ಈಗಾಗಲೇ ಸೂಪರ್​ ಹೀರೋ, ಸೈನ್ಸ್​ ಫಿಕ್ಷನ್, ಐತಿಹಾಸಿಕ, ಬಯೋಪಿಕ್​ ಪ್ರಕಾರಗಳನ್ನು ಪ್ರಯತ್ನಿಸಿರುವ ಅವರು ಈಗ ಹಾರರ್ ಸಿನಿಮಾವನ್ನು ಮಾಡಲು ಆಸಕ್ತಿ ತೋರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ.

‘ಆಪನ್​ಹೈಮರ್​’ ಯಶಸ್ಸಿನ ಬಳಿಕ ಹಾರರ್​ ಸಿನಿಮಾ ಮಾಡ್ತಾರೆ ಕ್ರಿಸ್ಟೋಫರ್​ ನೋಲನ್​​
ಕಿಲಿಯನ್​ ಮರ್ಫಿ, ಕ್ರಿಸ್ಟೋಫರ್​ ನೋಲನ್​

Updated on: Feb 17, 2024 | 7:49 AM

ಹಾಲಿವುಡ್​ನಲ್ಲಿ ಪ್ರಭಾವಿ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕ್ರಿಸ್ಟೋಫರ್​ ನೋಲನ್ (Christopher Nolan)​ ಅವರಿಗೆ ವಿಶ್ವಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಸಿನಿಮಾಗಳು ಸಾವಿರಾರು ನಿರ್ದೇಶಕರಿಗೆ ಸ್ಫೂರ್ತಿ ಆಗಿವೆ. ಸೂಪರ್​ ಹೀರೋ ಕಾನ್ಸೆಪ್ಟ್​ ಇರುವ ‘ಬ್ಯಾಟ್​ ಮ್ಯಾನ್​’ ಸಿನಿಮಾವನ್ನು ಅವರು ನಿರ್ದೇಶಿಸಿ ಸೈ ಎನಿಸಿಕೊಂಡರು. ನಂತರ ‘ಇನ್​ಸೆಪ್ಷನ್​’, ‘ಇಂಟರ್​ಸ್ಟೆಲ್ಲರ್​’ ಮುಂತಾದ ಸೈನ್ಸ್​ ಫಿಕ್ಷನ್​ ಸಿನಿಮಾಗಳನ್ನೂ ಮಾಡಿ ಜನಮೆಚ್ಚುಗೆ ಪಡೆದರು. ಈಗ ಅವರು ಹೊಸ ಪ್ರಕಾರವನ್ನು ಪ್ರಯತ್ನಿಸಿಲು ಸಜ್ಜಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಹಾರರ್​ ಸಿನಿಮಾ (Horror Movie) ಮಾಡಲು ಕ್ರಿಸ್ಟೋಫರ್​ ನೋಲನ್​ ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಬ್ರಿಟಿಷ್​ ಫಿಲ್ಮ್​ ಇನ್​ಸ್ಟಿಟ್ಯೂಟ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

ಯಾವುದೇ ಪ್ರಕಾರದ ಸಿನಿಮಾ ಇದ್ದರೂ ಇದಕ್ಕೆ ಕ್ರಿಸ್ಟೋಫರ್​ ನೋಲನ್​ ಅವರು ನ್ಯಾಯ ಒದಗಿಸುತ್ತಾರೆ ಎಂಬುದರಲ್ಲಿ ಅನುಮಾನವೇ ಬೇಡ. ಸೂಪರ್​ ಹೀರೋ ಸಿನಿಮಾ, ಸೈನ್ಸ್​ ಫಿಕ್ಷನ್​ ಸಿನಿಮಾ ಮಾತ್ರವಲ್ಲದೇ ‘ಡಂಕಿರ್ಕ್​’ ಚಿತ್ರದ ಮೂಲಕ ಐತಿಹಾಸಿಕ ಕಥೆಯನ್ನು ಕೂಡ ಅವರು ಬಹಳ ಚೆನ್ನಾಗಿ ತೆರೆಗೆ ತಂದಿದ್ದಾರೆ. ಅದೇ ರೀತಿ, ‘ಆಪನ್​ಹೈಮರ್​’ ಸಿನಿಮಾದ ಮೂಲಕ ಬಯೋಪಿಕ್​ ಮಾಡುವುದರಲ್ಲೂ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಅವರು ಸಾಬೀತು ಮಾಡಿದ್ದಾರೆ. ಈಗ ಹಾರರ್​ನತ್ತ ಅವರ ಮನಸ್ಸು ಎಳೆಯುತ್ತಿದೆ.

ಇದನ್ನೂ ಓದಿ: ಸೈನ್ಸ್​ ಫಿಕ್ಷನ್​ ಸಿನಿಮಾ ಮಾಡಿದ್ರೂ ಸ್ಮಾರ್ಟ್​ಫೋನ್​ ಬಳಸಲ್ಲ, ಇ-ಮೇಲ್​ ಮಾಡಲ್ಲ; ಕ್ರಿಸ್ಟೋಫರ್ ನೋಲನ್​ ಬಗ್ಗೆ ಅಚ್ಚರಿಯ ಮಾಹಿತಿ

ಕ್ರಿಸ್ಟೋಫರ್​ ನೋಲನ್​ ಅವರು ಹೊಸ ಸಿನಿಮಾ ಘೋಷಣೆ ಮಾಡುತ್ತಾರೆ ಎಂದರೆ ವಿಶ್ವಾದ್ಯಂತ ಇರುವ ಅವರ ಅಭಿಮಾನಿಗಳು ಎಗ್ಸೈಟ್​ ಆಗುತ್ತಾರೆ. ಅಷ್ಟರಮಟ್ಟಿಗೆ ಅವರು ಫೇಮಸ್​ ಆಗಿದ್ದಾರೆ. ಒಂದು ವೇಳೆ ಕ್ರಿಸ್ಟೋಫರ್​ ನೋಲನ್​​ ಅವರು ಹಾರರ್​ ಸಿನಿಮಾ ಮಾಡಿದ್ದೇ ಹೌದಾದರೆ ಅದು ಎಷ್ಟು ಭಯಾನಕವಾಗಿರಬಹುದು ಎಂದು ಅಭಿಮಾನಿಗಳು ಈಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಫ್ಯಾನ್ಸ್​ ಚರ್ಚೆ ಮಾಡುತ್ತಿದ್ದಾರೆ.

ಹಾಲಿವುಡ್​ನಲ್ಲಿ ಹಾರರ್​ ಸಿನಿಮಾಗಳಿಗೇನೂ ಕೊರತೆ ಇಲ್ಲ. ಈಗಾಗಲೇ ಅಂತಹ ನೂರಾರು ಸಿನಿಮಾಗಳು ಸೂಪರ್​ ಹಿಟ್​ ಆಗಿವೆ. ಈಗ ಕ್ರಿಸ್ಟೋಫರ್​ ನೋಲನ್​​ ಅವರು ಅದೇ ಪ್ರಕಾರದ ಮೇಲೆ ಕಣ್ಣಿಟ್ಟಿದ್ದಾರೆ. ‘ಹಾರರ್​ ಸಿನಿಮಾಗಳು ತುಂಬ ಇಂಟರೆಸ್ಟಿಂಗ್​ ಆಗಿರುತ್ತವೆ. ಅವು ಸಂಪೂರ್ಣವಾಗಿ ಸಿನಿಮ್ಯಾಟಿಕ್​ ಸಾಧನದ ಮೇಲೆ ಅವಲಂಬಿತವಾಗಿವೆ. ನನಗೂ ಹಾರರ್​ ಸಿನಿಮಾ ಮಾಡಬೇಕು ಎಂಬ ಬಯಕೆ ಇದೆ. ಆದರೆ ಒಂದು ಅತ್ಯುತ್ತಮವಾದ ಹಾರರ್​ ಸಿನಿಮಾಗೆ ತುಂಬ ಚೆನ್ನಾಗಿ ಇರುವ ಐಡಿಯಾ ಬೇಕು’ ಎಂದು ಕ್ರಿಸ್ಟೋಫರ್​ ನೋಲನ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us